ಬಸವತೀರ್ಥ ವಿದ್ಯಾಪೀಠ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

ಹುಮನಾಬಾದ,ಮೇ.10- ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಬಸವತೀರ್ಥ ವಿದ್ಯಾಪೀಠ ಪ್ರೌಢಶಾಲೆಯಲ್ಲಿ 2023 -24 ನೇ ಸಾಲಿನ ಮಾರ್ಚ/ಎಪ್ರೀಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗೆ ಹಾಜರಾದ ಒಟ್ಟು 122 ವಿದ್ಯಾರ್ಥಿಗಳಲ್ಲಿ 109 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅಗ್ರ ಶ್ರೇಣಿಯಲ್ಲಿ -20, ಪ್ರಥಮ ದರ್ಜೆಯಲ್ಲಿ – 55, ದ್ವಿತೀಯ ದರ್ಜೆಯಲ್ಲಿ – 26, ತೃತೀಯ ದರ್ಜೆಯಲ್ಲಿ – 08 ವಿದ್ಯಾರ್ಥಿಗಳು ಉತ್ತಿರ್ಣರಾಗಿರುತ್ತಾರೆ. ಕುಮಾರಿ ಅಂಕಿತಾ ತಂದೆ ಸಂತೋಷ (95.52%)
ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.
ಅದರಂತೆ ಕುಮಾರಿ ಐಶ್ವರ್ಯ ತಂದೆ ಆನಂದರಾವ (93.92%) ಹಾಗೂ ಕುಮಾರಿ ಸುಷ್ಮಾಂಜಲಿ ತಂದೆ ಸಂಗಪ್ಪಾ (93.92%) ಅಂಕಗಳನ್ನು ಪಡೆದು ಶಾಲೆಗೆ ದ್ವೀತಿಯ ಸ್ಥಾನ ಪಡೆದಿರುತ್ತಾರೆ. ಒಟ್ಟು ಶಾಲಾ
ಫಲಿತಾಂಶ 89.34% ಬಂದಿರುತ್ತದೆ. ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಪ್ರತ್ಯೇಕ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅದರಂತೆ ತೃತೀಯ ಭಾಷೆ ಮತ್ತು ಗಣಿತ ವಿಷಯದಲ್ಲಿ 100ಕ್ಕೆ 100 ಅಂಗಳನ್ನು ಪಡೆಯಲು ಕಾರಣಿಕರ್ತರಾದ ಆಯಾ ವಿಷಯ ಶಿಕ್ಷಕರಿಗೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಬಸವತೀರ್ಥ ವಿದ್ಯಾಪೀಠ ಕೇಂದ್ರಸಮಿತಿ ಹುಮನಾಬಾದ ಕಾರ್ಯಾಧ್ಯಕ್ಷರಾದ ಕೇಶವರಾವ ತಳಘಟಕರ್, ಸ್ಥಳಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಸೋಮಯ್ಯಾ ಹಿರೇಮಠ, ಸ್ಥಳಿಯ ಸಂಸ್ಥೆಯ ಆಡಳಿತಾಧಿಕಾರಿಗಳಾದ ಗುಂಡಯ್ಯಾ ತೀರ್ಥಾ, ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿಗಳಾದ ಪ್ರಭುರಾವ ದುರ್ಗದ, ಪ್ರಾಚಾರ್ಯರಾದ ಮಸ್ತಾನ ಪಟೇಲ್, ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀ ಚಂದ್ರಕಾಂತ ಬಿರಾದಾರ, ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಬಸವರಾಜ ದುಬಲಗುಂಡಿಕರ್ ಮತ್ತು ಶಾಲಾ/ಕಾಲೇಜಿನ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.