ಬಸವತೀರ್ಥ ವಿದ್ಯಾಪೀಠದಲ್ಲಿ ಮಕ್ಕಳ ದಿನಾಚರಣೆ

ಹುಮನಾಬಾದ,ನ.21-ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದಲ್ಲಿರುವ ಬಸವತೀರ್ಥ ವಿದ್ಯಾಪೀಠ ಶಾಲೆಯಲ್ಲಿ ರವಿವಾರ ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಮಿತಿಯ ಕಾರ್ಯಧ್ಯಕ್ಷ ಕೇಶವರಾವ ತಳಘಟಕರ್ ಮಾತನಾಡಿ, ನಮ್ಮ ಶಾಲೆಯ ಶಿಕ್ಷಕರು ಅತ್ಯಂತ ಕಾಳಜಿ ಪೂರ್ವಕವಾಗಿ ಶ್ರಮ ವಹಿಸಿರುವದರಿಂದ ಶಾಲೆಗೆ ಇಷ್ಟು ಕೀರ್ತಿ ಬಂದಿದೆ ಹಾಗೂ ತಂದೆ ತಾಯಿ ಮತ್ತು ಗುರುಗಳ ಮಾತನ್ನು ಪಾಲಿಸಿದರೆ ಉತ್ತಮ ವ್ಯಕ್ತಿಗಳು ಆಗಲು ಸಾದ್ಯ ಎಂದು ನುಡಿದರು.
Àಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯ ಮಹಾದೇವಪ್ಪಾ ಉಪ್ಪಿನ್ ಅವರು ಮಾತನಾಡಿ, ವೀದ್ಯಾರ್ಥಿಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅತಿಥಿತಿಗಳಾಗಿ ಆಡಳಿತಾಧಿಕಾರಿ ಗುಂಡಯ್ಯ ತಿರ್ಥ, ಶಾಲೆಯ ಮುಖ್ಯಸ್ಥರಾದ ವೀದ್ಯಾವತಿ ತೀರ್ಥ, ಚಂದ್ರಕಾಂತ ಬಿರಾದರ, ಮಸ್ತಾನ್ ಪಟೆಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವೀದ್ಯಾರ್ಥೀಗಳಾದ ಆನಂದ ಚಿಂಚೊಳಿ, ಡಾ. ಸದಾನಂದ ಪತಗಿ, ನವೀನಕುಮಾರ, ಶೀವಶಂಕರ ರೆಡ್ಡಿ, ಕು. ಕವಿತಾ ಮಿರನಳ್ಳೆ ಅವರು ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೆವೆ ಸಲ್ಲಿಸುತ್ತಿರುವುದರಿಂದ ವಿಶೆಷ ಸನ್ಮಾನ ಮಾಡಲಾಯಿತು.
ಈ ಕಾಂiÀರ್iಕ್ರಮದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪಡೆದಿದ್ದಕ್ಕಾಗಿ ಸನ್ಮಾನಿಸಲಾಯಿತು ಹಾಗೂ 2022-23 ನೇ ಸಾಲಿನ ಅರ್ದ ವಾರ್ಷಿಕ ಪರಿಕ್ಷೆಯಲ್ಲೀ 1ನೇ ತರಗತಿಯಿಂದ ಪದವಿ ಪೂರ್ವದವರೆಗೆ ಶಾಲೆಗೆ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು.
9ನೇ ತರಗತಿಯ ಪೌಲಮಿ ಮತ್ತು ಸಂಗಡಿಗರಿಂದ ವಚನ ಪ್ರಾರ್ಥನೆ, 7ನೇ ತರಗತಿಯ ಸಿಂಚನಾ ಮತ್ತು ಸಂಗಡಿಗರು ಸ್ವಾಗತ ಗೀತೆ ಹಾಡಿದರು. ರೇವಪ್ಪಯ್ಯ ಸ್ವಾಮಿ ಸ್ವಾಗತಿಸಿದರು. ಸಂಗಮೇಶ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕರುಣಾ ತಂಬಾಕೆ ವಂದಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.