ಬಸವಣ್ಣ ಸಾಂಸ್ಕøತಿಕ ನಾಯಕ: ಡಾ. ರವಿ ಸ್ವಾಮಿ ನಿರ್ಣ ಹರ್ಷ

ನಿರ್ಣ :ಜ.20: ಸಮಾನತೆಯ ಹರಿಕಾರ ವಿಶ್ವ ಗುರು ಬಸವಣ್ಣನವರನ್ನು ರಾಜ್ಯ ಸರ್ಕಾರ ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವುದಕ್ಕೆ ಕನ್ನಡ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಡಾಕ್ಟರ್ ರವಿ ಸ್ವಾಮಿ ನಿರ್ಣ ಹರ್ಷ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರಾಗಿ ಘೋಷಣೆ ಮಾಡಿರುವುದಕ್ಕೆ ಬಸವ ಭಕ್ತರು, ಬಸವಾಭಿಮಾನಿಗಳು,ಬಸವ ಸಂಘಟನೆಗಳು, ನಾಡಿನ ಮಾಹಾ ಜನತೆಗೆ ಬಹಳ ಸಂತಸ ಉಂಟಾಗಿದೆ ಎಂದರು.

ಬಸವಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ, ಜಗತ್ತಿಗೆ ಮೊಟ್ಟಮೊದಲ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದವರು. ಮಾನವೀಯತೆಯ ಮೌಲ್ಯಗಳು ಪ್ರತಿಪಾದಿಸಿದವರು. ಮಾನವ ಹಕ್ಕುಗಳ ಬಗೆ 12ನೇ ಶತಮಾನದಲ್ಲಿ ಧ್ವನಿ ಎತ್ತಿ, ಹೋರಾಡಿದವರು. ಲಿಂಗ ಸಮಾನತೆ ಕಲ್ಪಿಸಿದವರು. ಕಾಯಕವೇ ಕೈಲಾಸ ಎಂದು ಜಗತ್ತಿಗೆ ಸಾರಿ,ಕಾಯಕ ತತ್ವದ ಘನತೆ ಎತ್ತಿ ಹಿಡಿದವರು.

ದಾಸೋಹ ಪರಂಪರೆಗೆ ಸ್ಪೂರ್ತಿಯಾದವರು. ಕರುಣೆ, ಪ್ರೀತಿ , ತ್ಯಾಗಕ್ಕೆ ಜೀವ ನೀಡಿದವರು.
ಸೌಹಾರ್ದತೆ, ಸಹೋದರತ್ವ, ಸಹಬಾಳ್ವೆಗೆ ಗೌರವ ಕೊಟ್ಟು, ಜಾರಿಗೆ ತಂದವರು. ಆದರ್ಶ ಸಮಾಜ ನಿರ್ಮಾಣ ಮಾಡುವ ಮೂಲಕ ಕಲ್ಯಾಣ ರಾಜ್ಯವಾಗಿಸಿದವರು. ಸೇವೆಯೇ ಶ್ರೇಷ್ಠ ಜೀವನ ಎಂದು ಸಾರಿದವರು. ವಚನ ಸಾಹಿತ್ಯದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿ ಕರುನಾಡಿನ ಗುರುವಾದವರು ಅಣ್ಣ ಬಸವಣ್ಣನವರು.

ಈ ವಿಚಾರದಲ್ಲಿ ನಾವು ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಪತ್ರಗಳ ಮೂಲಕ ಒತ್ತಾಯಿಸಿ, ವಿವಿಧ ಪತ್ರಿಕೆಗಳಲ್ಲಿ ಅಂಕಣಗಳು ಸಹ ಬರೆದಿದ್ದೇವೆ ಎಂದು ತಿಳಿಸಿದ ಅವರು
ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವ ಘನ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೂ ಹಾಗೂ ಎಲ್ಲಾ ಸಚಿವರಿಗೂ ಹೃತ್ಪೂರ್ವಕವಾಗಿ ಅಭಿನಂದನೆಗಳು ಸಲ್ಲಿಸುತ್ತೇವೆ ಎಂದು ಹೇಳಿದರು.