ಬಸವಣ್ಣ ಸಮಾನತೆಯನ್ನು ಜಗತ್ತಿಗೆ ಸಾರಿದ ಮಹಾಪುರುಷ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ. 19- 12ನೇ ಶತಮಾನದಲ್ಲಿಯೇ ಜಗತ್ತಿಗೆ ಸಮಾನತೆಯನ್ನು ಭೋದಿಸಿ, ಸ್ತ್ರೀಯರಿಗೆ ಸ್ವಾತಂತ್ರವನ್ನು ಕಲ್ಪಿಸಿಕೊಟ್ಟ ಮಹಾಪುರುಷ ಬಸವಣ್ಣ ಅವರು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪದ್ಮಜಾ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸರ್ಕಾರದ ಆದೇಶದಂತೆ ಸಾಂಸ್ಕøತಿಕ ರಾಯಭಾರಿ ಬಸವಣ್ಣ ಅವರು ಭಾವಚಿತ್ರ ಅಳವಡಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಸವಣ್ಣ ಅವರ ಭಾವಚಿತ್ರವನ್ನು ಅನಾವರಣ ಮಾಡಿ ಅವರು ಮಾತನಾಡಿದರು.
ಅನುಭವ ಮಂಟಪವನ್ನು ಸ್ಥಾಪನೆ ಮಾಡಿ, ಎಲ್ಲಾ ವರ್ಗದವರು ಹಾಗೂ ಎಲ್ಲಾ ಧರ್ಮೀಯರಿಗೆ ಸಮಾನವಾದ ಅವಕಾಶಗಳನ್ನು ನೀಡುವ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಿದ್ದರು. ಅಂದಿನ ಅನುಭವ ಮಂಟಪದ ಪರಿಕಲ್ಪನೆಯೇ ಇಂದಿನ ಸಂಸತ್ ಹಾಗೂ ವಿಧಾನಸಭೆಯಾಗಿದೆ.
ಅವರ ತತ್ವ ಅದರ್ಶಗಳು ಹಾಗೂ ವಚನಗಳ ಸಾರವನ್ನು ತಿಳಿದುಕೊಂಡು ನಡೆಯುವ ಮೂಲಕ ಸಮ ಸಮಾಜವನ್ನು ನಿರ್ಮಾಣ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಭೂ ವಿಜ್ಞಾನಿಗಳಾದ ಮಹದೇವಸ್ವಾಮಿ, ಪ್ರಸನ್ನ, ಯಶಸ್ವಿನಿ, ಜರ್ನಾಧನ್, ಕಚೇರಿ ಅಧೀಕ್ಷಕ ನಂಜುಂಡಯ್ಯ ಇತರರು ಉಪಸ್ಥಿತರಿದ್ದರು.