ಬಸವಣ್ಣ ಸಂಗೋಳಗಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ 500 ಸಸಿ ನಡುವ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ: ಜೂ.5 : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಸವಣ್ಣ ಸಂಗೋಳಗಿಯ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿವಿಧ ಬಗೆಯ 500 ಸಸಿ ನಡುವ ಕಾರ್ಯಕ್ರಮಕ್ಕೆ ಬಸವಣ್ಣ ಸಂಗೋಳಗಿ ಸ್ವಾಮಿ ವಿವೇಕಾನಂದ ಗೆಳೆಯರ ಬಳಗ ಹಾಗೂ ಕಾಯಕ ಯೋಗಿ ಸೇವಾ ಸಂಸ್ಥೆಯ ವತಿಯಿಂದ ಸಸಿಗಳನ್ನು ನಡಲಾಯಿತು.
ಉಸಿರಿಗಾಗಿ ಹಸಿರು ಇದ್ದರೆ ಮಾತ್ರ ಉಸಿರು ಎಂಬ ಸಿದ್ಧಾಂತವನ್ನು ಅರಿತು ಪ್ರತಿಯೋಬ್ಬ ಮನುಷ್ಯ ತಲಾ ಒಂದೊಂದು ಸಸಿಯನ್ನು ಪ್ರತಿ ವರ್ಷ ನಡುವುದರ ಮುಖಾಂತರ ಆಧುನಿಕ ಯುಗದಲ್ಲಿ ಮನುಷ್ಯನ ಆರೋಗ್ಯದಲ್ಲಿ ಆಗುತ್ತಿರುವ ಉಸಿರಾಟದ ತೊಂದರೆಯನ್ನು ನಮ್ಮಿಂದ ನಾವು ಸರಿಪಡಿಸಿಕೊಳ್ಳಬೇಕೆಂಬ ಮನೋಭಾವವನ್ನು ಅರಿತುಕೊಂಡು ಸ್ವಾಮಿ ವಿವೇಕಾನಂದ ಗೆಳೆಯರ ಬಳಗ ಬಸವಣ್ಣ ಸಂಗೋಳಗಿಯ ಎಲ್ಲಾ ಯುವಕರು ಬಸವೇಶ್ವರ ದೇವಸ್ಥಾನದಲ್ಲಿ ಈ ಬೃಹತ್ ಸಸಿ ನಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮೊದಲಿಗೆ ಕಾರ್ಯಕ್ರಮವನ್ನು ಕರ್ನಾಟಕ ವಿಜಯ ಸೇನೆ ಜಿಲ್ಲಾಧ್ಯಕ್ಷರಾದ ರಾಜು ಹಿರೇಮಠ ಅವರು ಸಸಿಗೆ ಪೂಜೆ ಸಲ್ಲಿಸುವುದರ ಮೂಲಕ ಸಸಿ ನಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಹಾಗೂ ವಿಶ್ವ ಪರಿಸರದ ದಿನದಂದು ಸಸಿಗಳನ್ನು ಶ್ರೀ ಬಂಡಪ್ಪ ಎ ಬೊಧನೆ ಅವರು ಸಹಾಯ ಹಸ್ತ ನೀಡಿದರು.
ಬಸವಣ್ಣ ಸಂಗೋಳಗಿಯ ವಿವೇಕಾನಂದ ಸಂಘದ ವತಿಯಿಂದ ಸುಮಾರು 500 ಸಸಿಗಳು ನಡಲಾಯಿತು. ಬಸವೇಶ್ವರ ದೇವಸ್ಥಾನದ ಪದಾಧಿಕಾರಿಗಳು ಸಸಿ ನಡುವ ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ಪ್ರೋತ್ಸಾಹಿಸಿದರು. ಕಾಯಕ ಯೋಗಿ ಸೇವಾ ಸಂಸ್ಥೆಯವರು ಮುಂದೆ ಸಸಿಗಳ ಅವಶ್ಯಕವಿದ್ದರೆ ನಾವುಗಳು ಕೂಡ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿ ಬೆಂಬಲಿಸಿದರು.
ಸಸಿ ನಡುವ ಕಾರ್ಯಕ್ರಮದಲ್ಲಿ ಕಾಯಕ ಯೋಗಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ/ ಶ್ರೀಯುತರಾದ ಕೇಧಾರನಾಥ ಕುಲಕರ್ಣಿ, ಶರಣು ಪವಾಡಶೆಟ್ಟಿ, ಶರಣು ಕುಲಕರ್ಣಿ, ಶಾಂತಕುಮಾರ ಪೂಜಾರಿ, ರವಿ ಪೂಜಾರಿ, ಬಸವರಾಜ ಎಸ್. ಕುಲಕರ್ಣಿ, ಶಿವಬಸಪ್ಪಾ ಮಾಲಿಪಾಟೀಲ್, ಶರಣು ವಾಡಿ, ನಾಗಿಂದ್ರಪ್ಪಾ ಜಮಾದರ ಗ್ರಾಮ ಪಂಚಾಯತ ಸದಸ್ಯರಾದ ಶಿವಾನಂದ ಬಿರಾದಾರ ಹಾಗೂ ಸ್ವಾಮಿ ವಿವೇಕಾನಂದ ಗೆಳೆಯರ ಬಳಗದ ಎಲ್ಲಾ ಯುವಕರು ಉಪಸ್ಥಿತರಿದ್ದರು.