ಬಸವಣ್ಣ ದೇವಸ್ಥಾನದಲ್ಲಿ ಕಾರ್ತಿಕೋತ್ಸವ


ಹುಬ್ಬಳ್ಳಿ,ಡಿ.10: ದೇವರ ಕಾಡು ಹದ್ದಿನಲ್ಲಿ ಬರುವ ಶ್ರೀ ಕ್ಷೇತ್ರ ಬೂದನಗುಡ್ಡ ಬಸವಣ್ಣ ದೇವಸ್ಥಾನದ ಸಮಿತಿ ವತಿಯಿಂದ ಶ್ರೀ ರುದ್ರಾಕ್ಷಿಮಠದ ಪೀಠಾದಿಪತಿಗಳದಾ ಶ್ರೀ ಬಸವಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಕಾರ್ತಿಕೋತ್ಸವನ್ನು ಬಹಳ ವಿಜಂಭ್ರಮಣೆಯಿಂದ ದೀಪವನ್ನು ಹಂಚಿ ಬೆಳಗುವುದರ ಮೂಲಕ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಷರಾದ ಈರಪ್ಪ ಕ ಎಮ್ಮಿ ,ಪ್ರಭು ಶೆಟ್ಟರ,ಸುರೇಶ ದ್ಯಾಮ್ಮಣ್ಣವರ,ಭೀಮಪ್ಪ ವಾಲಿಕಾರ, ಅರುಣಕುಮಾರ ಡಿ.ವಯ್ ಮಹಾಂತೇಶ ಗಿರಿಮಠ, ಮಹಾಂತೆಶ ಹಾದಿಮನಿ, ಸಿದ್ದು ರಾಯನಾಳ, ಚಂದ್ರು ತಿ ಕೋರಿ ಮಂಜುನಾಥ ದಾಸ್ತಿಕೊಪ್ಪ ಸಂತೋಷ ಗೋಪ್ಪಣ್ಣವರ ದೇವಸ್ಥಾನದ ಅರ್ಚಕರು ಹಾಗೂ ಪೆÇೀಲಿಸ್ ಸಿಬ್ಬಂದಿಗಳು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.