ಬಸವಣ್ಣನ ಸಂದೇಶ ಅರ್ಥ ಮಾಡಿಕೊಳ್ಳಬೇಕು: ಯೋಗೇಶ್ವರಿ ಮಾತಾ

ವಿಜಯಪುರ : ಎ.24:ಅಪ್ಪ ಬಸವಣ್ಣನವರ ವಚನಗಳ ಅರ್ಥ ಮಾಡಿಕೊಳ್ಳುವ ಮೂಲಕ ಜೀವನದ ಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬುರಣಾಪೂರ ಆರೂಢ ಆಶ್ರಮದ ಯೋಗೇಶ್ವರಿ ಮಾತಾ ಅಭಿಪ್ರಾಯ ವ್ಯಕ್ತಪಡಿಸಿದರು

ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಬಸವ ಜಯಂತಿಯಲ್ಲಿ ಸಾನಿಧ್ಯ ವಹಿಸಿ ಮಾತನಾಡುತ್ತಾ ಬಸವಣ್ಣನ ಆಶಯ ತಿಳಿದುಕೊಂಡು ಶರಣ ಜೀವನಕ್ಕೆ ಮಹತ್ವ ನೀಡಬೇಕೇಂದರು

ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ಅಪಿ9ಸಿ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಶಂಕರ ಬೈಚಬಾಳ ಮಾತನಾಡಿ ಬಸವಣ್ಣನವರ ಸಾಹಿತ್ಯ ಸಂಶೋಧನೆ ಮಾಡಿದ ಪ ಗು ಹಳಕಟ್ಟಿ ಹರ್ಡೆಕರ ಮಂಜಪ್ಪ ಅವರನ್ನು ಒಳಗೊಂಡು ಬಸವಣ್ಣನವರ ವಚನಗಳನ್ನು ಕ್ರೂಢಿಕರಿಸಿದ್ದರ ಪರಿಣಾಮ ಇಂದು ಅವರ ಸಮಗ್ರ ಸಾಹಿತ್ಯ ದೊರಕಲು ಸಾಧ್ಯವಾಗಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ದೊಡ್ಡಣ್ಣ ಬಜಂತ್ರಿ ಮಾತನಾಡಿ ಬಸವಾದಿ ಶರಣರ ತತ್ವ, ವಚನಗಳು ಎಲ್ಲ ಹಂತದ ಪಠ್ಯಕ್ರಮದಲ್ಲಿ ಅಳವಡಿಸಿ ವಿದ್ಯಾರ್ಥಿ ಜೀವನದಿಂದಲೇ ಶರಣರ ಸಂದೇಶ ಸಾರಬೇಕು ಎಂದರು

ಸಾಹಿತಿ ಗಿರಿಜಾ ಪಾಟೀಲ ಮಾತನಾಡಿ ದಾವಣಗೆರೆಯಲ್ಲಿ ಪ್ರಥಮ ಬಸವ ಜಯಂತಿಯನ್ನು ಹಡೆ9ಕರ ಮಂಜಪ್ಪ ನೇತೃತ್ವದಲ್ಲಿ ಜರುಗಿತು. ಬಸವಣ್ಣನವರ ವಿಚಾರಗಳು ಸರ್ವಕಾಲಿಕ. ವಿಶ್ವಮಾನವ ಸಾಲಿನಲ್ಲಿರುವ ಬಸವಣ್ಣನವರು ಸಾಮಾಜಿಕ ನ್ಯಾಯ, ಸಮಾನತೆಯ ಸಿದ್ಧಾಂತವನ್ನು ಹನ್ನೆರಡನೇ ಶತಮಾನದಲ್ಲಿ ಪ್ರತಿಪಾದಿಸಿದರು ಎಂದರು

ಎ ಎಚ್ ಕೊಳಮಲಿ ಮುಖ್ಯಸ್ಥರು ಕನ್ನಡ ವಿಭಾಗ ಚೇತನಾ ಕಾಲೇಜು ಹಾಗು ಆರ್ ಎಸ್ ಪಟ್ಟಣಶೆಟ್ಟಿ ಉಪನ್ಯಾಸಕರು ಚೇತನಾ ಕಾಲೇಜು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಇದೆ ಸಂದರ್ಭದಲ್ಲಿ ವಿಶ್ರಾಂತ ಸಂಗೀತ ಪ್ರಾಧ್ಯಾಪಕ ಚಂದ್ರಶೇಖರ ಜಾಧವ ಹಾಗು ಸ್ಕೌಟ ಮತ್ತು ಗೈಡ್ಸ ಪ್ರಾಧ್ಯಾಪಕ ಪರಶುರಾಮ ಕುಂಬಾರ ಅವರನ್ನು ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ ಡಾ : ಆನಂದ ಕುಲಕಣಿ9 ಮಾತನಾಡಿದರು. ರವಿ ಕಿತ್ತೂರ ಸ್ವಾಗತಿಸಿ ನಿರೂಪಿಸಿದರು. ರಾಜು ಶಿವನಗುತ್ತಿ ವಂದಿಸಿದರು.

ನ್ಯಾಯವಾದಿಗಳಾದ ಕೆ ಎಪ್ ಅಂಕಲಗಿ ವಿದ್ಯಾವತಿ ಅಂಕಲಗಿ ಅಹಮ್ಮದ ವಾಲಿಕಾರ ಅರ್ಜುನ ಶಿರೂರ ಕಮಲಾ ಮುರಾಳ ವಿಜಯಲಕ್ಷೀ ಕೌಲಗಿ ಸುನಂದಾ ಕೋರಿ ನಾಗರಾಜ ಹೊಸಳ್ಳಿ ಮುಂತಾದವರು ಉಪಸ್ಥಿತರಿದ್ದರು.