ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ

(ಸಂಜೆವಾಣಿ ವಾರ್ತೆ)
ಬಾದಾಮಿ,ನ17: ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುವಾರ ದಿನ ಸಾಯಿಬಾಬಾ ಮೂರ್ತಿ ಎದುರು ಬಸವಣ್ಣ ಮೂರ್ತಿ ಪ್ರತಿಷ್ಠಾಪನೆ ಸದ್ಭಕ್ತರ ಸಮ್ಮುಖದಲ್ಲಿ ಜರುಗಿತು.
ಬಸವಣ್ಣ ಮೂರ್ತಿ ಕೊಡುಗೆ ನೀಡಿದ ದಂಪತಿಗಳಾದ ವಿಜಯಲಕ್ಷ್ಮೀ (ಶೈಲಾ)ಮಂಜುನಾಥ್ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿವಪೂಜಾ ಶಿವಾಚಾರ್ಯ, ರಾಮಭಟ್ ಜೋಶಿ, ಕಮಲಮ್ಮ ಜಿಗಬಡ್ಡಿ, ಗೌರಮ್ಮ ಚಿನಿವಾಲರ, ಶ್ರೀಮತಿ ಚವಡಿ, ರಾಚಣ್ಣ ಪಟ್ಟಣದ, ಲಿಂಗರಾಜ ಚಿನಿವಾಲರ, ರಾಕೇಶ್ ಕಲಾಲ, ಧಿಕ್ಷೀತ, ಕಾರುಡಗಿಮಠ, ಎಸ್.ಎಸ್.ಮಲ್ಲಾಪೂರ ಸೇರಿದಂತೆ ಅನೇಕ ಭಕ್ತರು ಇದ್ದರು.