ಬಸವಣ್ಣನ ಭಾವಚಿತ್ರಕ್ಕೆ ಅವಮಾನ ಅಂಬೇಡ್ಕರ್ ಯುವ ಸೇನೆ ಖಂಡನೆ

ಸೇಡಂ, ಅ,16: ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ ಮಾಡಿರುವುದನ್ನು ಅಂಬೇಡ್ಕರ್ ಯುವ ಸೇನೆ ತಾಲೂಕ ಅಧ್ಯಕ್ಷರು ಗೋಪಾಲ ನಾಟೇಕಾರ ತೀವ್ರವಾಗಿ ಖಂಡಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಾತಿ ವ್ಯವಸ್ಥೆ , ಸಾಮಾಜಿಕ ತಾರತಮ್ಯ , ಶೋಷಣೆ , ಮೂಢನಂಬಿಕೆಯ ವಿರುದ್ಧ ಸಮರ ಸಾರಿದ , ಮಹಾನ್ ಮಾನವ ತಾವಾದಿ ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ ಮಾಡಿ ವಿಕೃತಿ ಮೆರೆದ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು . ಇಂತಹ ಹೀನ ಕೃತ್ಯವೆಸಗುವ ಸಮಾಜ ಘಾತುಕರ ವಿರುದ್ಧ ಸರ್ಕಾರ ಕಠಿಣವಾದ ವಿಶೇಷ ಕಾನೂನು ತಂದು ಮಟ್ಟ ಹಾಕಬೇಕು ಎಂದು ಗೋಪಾಲ ನಾಟೇಕಾರ ಆಗ್ರಹಿಸಿದ್ದಾರೆ.