ಬಸವಣ್ಣನ ತತ್ವ ನಮಗೆ ಆದರ್ಶ : ಪ್ರಭುಲಿಂಗ ಮೂಲಗೆ

ಕಲಬುರಗಿ:ಮೇ.10:ಬಸವಣ್ಣನವರ ತತ್ವಗಳು ನಮಗೆ ಆದರ್ಶವಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಉತ್ತರ ವಲಯದ ಅಧ್ಯಕ್ಷರಾದ ಶ್ರೀ ಪ್ರಭುಲಿಂಗ ಮೂಲೆಗೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಉತ್ತರ ವಲಯದಿಂದ ಚನ್ನಮಲ್ಲೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ಇಂದಿನ ಕಲುಷಿತ ವಾತಾವರಣದಲ್ಲಿ ಬದುಕು ಅತ್ಯಂತ ದುಸ್ತರವಾಗಿದ್ದು, ಮಕ್ಕಳನ್ನು ಸಂಸ್ಕಾರತವಂತರನ್ನಾಗಿ ಬೆಳೆಸುವುದು ಕಷ್ಟದ ಕೆಲಸ ಇದಕ್ಕೆಲ್ಲಾ ಪರಿಹಾರವೆಂದರೆ ಬಸವೇಶ್ವರರ ವಚನಗಳಲ್ಲಿರುವ ಸಾರವನ್ನು ನಮ್ಮಲ್ಲಿ ಅಳವಡಿಸಿಕೊಂಡು ನಾವು ನಡೆದರೆ ಸಮಾಜವನ್ನು ತಿದ್ದಬಹುದು ಎಂದು ತಿಳಿಸಿದರು.
ಬಸವಣ್ಣನವರ ಕೊಡುಗೆ ಭಾರತ ಅಷ್ಟೇ ಅಲ್ಲದೆ ವಿಶ್ವವೇ ಕೊಂಡಾಡುತ್ತಿದೆ ಎಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀ ಸಿದ್ಧರಾಮಪ್ಪ ಉಕ್ಕಲಿ ಅಧ್ಯಕ್ಷರು ಶ್ರೀ ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘ ಶಾ ಬಜಾರ್ ಮುಖ್ಯ ಅತಿಥಿಗಳಾಗಿ ಶ್ರೀ ಧೂಳಪ್ಪ ಹಾದಿಮನಿ ಶ್ರೀ ಚನ್ನಮಲ್ಲಯ್ಯ ಜಿ ಹಿರೇಮಠ ಭಾಗವಹಿಸಿದ್ದರು. ಉತ್ತರ ವಲಯದ ಗೌರವ ಅಧ್ಯಕ್ಷರಾದ ಶ್ರೀ ಶಿವಯೋಗಪ್ಪ ಬಿರಾದಾರ್ ಎಲ್ಲರನ್ನೂ ಸ್ವಾಗತಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ನಾಗೇಶ್ ತಿಮ್ಮಾಜಿ ಕಾರ್ಯದರ್ಶಿಗಳು ಉತ್ತರ ವಲಯ ನೆರವೇರಿಸಿದರು ಅತಿಥಿಗಳಿಗೆ ಶ್ರೀ ರವಿಕುಮಾರ್ ಬಿರಾಜದಾರ್ ಸನ್ಮಾನಿಸಿದರು. ಶ್ರೀ ನವಾಬ್ ಖಾನ್. ಸೇರಿದಂತೆ ಹೇಮಂತ್ ಸರ್ದಾರ್ ಕೃಷ್ಣಾಜಿ ನಾಯಕ್ ಶ್ರೀಕಾಂತ್ ಪಾಟೀಲ್ ದಿಕ್ಸಂಗಿ ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀ ಹನುಮಂತ ದಿಂಡೂರಿ ವಂದಿಸಿದರು ಮಹಿಳಾ ಪ್ರತಿನಿಧಿಗಳಾದ ಶ್ರೀಮತಿ ಶಿವಕನ್ಯ ಬಿಸಿಬಿಸಿ. ಕವಿತಾ ದೇಗಾಂವ ಸೇರಿದಂತೆ ಅನೇಕರು ಇದ್ದರು.