ಬಸವಣ್ಣನಿಗೆ ಸಮನಾಗಿ ಸಿಎಂ ಕಟೌಟ್: ಭುಗಿಲೆದ್ದ ಆಕ್ರೋಶ

ಬೀದರ್: ಮಾ.7:ಬೀದರ್ ನಲ್ಲಿ ವಿಶ್ವಗುರು ಬಸವಣ್ಣ ಅವರ ಕಟೌಟ್ ಗೆ ಸಮನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟೌಟ್ ಹಾಕಿದ್ದು, ಇದಕ್ಕೆ ಬಸವ ಭಕ್ತರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಬೀದರ್ ನಲ್ಲಿ ವಿಶ್ವಗುರು ಬಸವಣ್ಣನವರ ದೊಡ್ಡ ಕಟೌಟ್ ಹಾಕಲಾಗಿದೆ.

ಇದಕ್ಕೆ ಸಮವಾಗಿ ಸಿಎಂ ಸಿದ್ದರಾಮಯ್ಯ ಅವರ ಕಟೌಟ್ ಹಾಕಲಾಗಿದೆ. ಇದೀಗ ಇದರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಬಸವ ಬಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ ವಿಶ್ವ ಗುರು ಬಸವಣ್ಣ ಎಲ್ಲಿ, ಜಾತಿವಾದಿ ಸಿಎಂ ಸಿದ್ದರಾಮಯ್ಯ ಎಲ್ಲಿ. ಬಸವಣ್ಣನನ್ನು ಕನ್ನಡದ ಸಾಂಸ್ಕೃತಿಕ ನಾಯಕ ಮಾಡಿದ್ದು ಹೆಮ್ಮೆ ಇದೆ.. ಆದ್ರೆ ಸಿಎಂ ಹೋಲಿಕೆಗೂ ಒಂದು ಮಿತಿ ಇರಬೇಕು. ಜಾತಿ ರಹಿತ ಸಮಾಜದ ಸಂದೇಶವನ್ನು ಸಾರಿದ್ದು ಬಸವಣ್ಣನವರು. ಆದ್ರೆ ಜಾತಿವಾದಿ ಸಿಎಂ ಸಿದ್ದರಾಮಯ್ಯ ಬಸವಣ್ಣನವರ ಜೊತೆ ಹೋಲಿಕೆ ಖಂಡನೀಯ ಎಂದಿದ್ದಾರೆ.