ಬಸವಣ್ಣನಿಗೆ ವಿಶಿಷ್ಟ ನಮನ ವಚನ ಗಾನಾಭಿಷೇಕ

ಬೆಂಗಳೂರು,ಮೇ.೧೫-ವಚನಜ್ಯೋತಿ ಬಳಗ ಬಸವ ಜಯಂತಿಯನ್ನಹ ವಚನ ಗಾನಾಭಿಷೇಕದ ಮೂಲಕ ವಿಶಿಷ್ಟವಾಗಿ ಆಚರಿಸಿತು. ನೆನ್ನೆ ನಡೆದ ಗಾನಾಭಿಷೇಕವನ್ನು ಹಿಂದೂಸ್ಥಾನಿ ಸಂಗೀತದ ಹಿರಿಯ ವಿದ್ವಾಂಸ ಪಂ. ದೇವೇಂದ್ರಕುಮಾರ ಪತ್ತಾರ್ ಅಲ್ಲಮಪ್ರಭುಗಳ ಬಸವ ಸ್ತುತಿಯೊಂದಿಗೆ ಉದ್ಘಾಟಿಸಿದರು.
ಬಳಗದ ಮಹಾಪೋಷಕಿ ಪಾರ್ವತಮ್ಮ ಶಿವಲಿಂಗಯ್ಯ ಪಂಡಿತರು ಅತ್ಯಂತ ಉತ್ಸಾಹದಿಂದ ಅಣ್ಣನ ವಚನ “ತನುವ ಕೊಟ್ಟು ತನು ಬಯಲಾಯಿತ್ತು” ಹಾಡಿ ಗಾನಾಭಿಷೇಕಕ್ಕೆ ಮೆರುಗು ಕೊಟ್ಟರು.
ಗಾಯಕರುಗಳಾದ ಸಿದ್ದರಾಮ ಕೇಸಾಪುರ, ಅನುರಾಗ ಗದ್ದಿ, ಸರಸ್ವತಿ ಹೆಗಡೆ, ಈರಯ್ಯ ಚಿಕ್ಜಮಠ, ಮೀನಾಕ್ಷಿ ಮೇಟಿ ಮೊದಲಾದವರು ವಚನಗಳ ಮೂಲಕ ಅಭಿಷೇಕ ಮಾಡಿದರು.
ವಿದ್ಯಾಮಗ್ದಂ, ವಿದ್ಯಾ ಕಲ್ಯಾಣಶೆಟ್ಟಿ, ಕವಿತಾ, ಲಲಿತಾ ಪಾಟೀಲ್, ಸರಸ್ವತಿ ರಾಮಣ್ಣ, ಅಂಜುಶ್ರೀ ಹಳೇಗೌಡರ್, ಚಂದ್ರಕಲಾ ಹಾರಕೂಡೆ, ಬೆಂಗಳೂರಿನಿಂದ ರತ್ನ ದೇಸಾಯಿ, ಚಂದ್ರಿಕ, ಗಾಯಿತ್ರಿ, ಕು. ತಸ್ಮಯ್, ಸುಮಿತ್ರ ರಾಯರೆಡ್ಡಿ, ಮಂಗಳ ಮೊದಲಾದವರು ವಚನಗಳನ್ನು ಹಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಗುರುಪ್ರಸಾದ ಕುಚ್ಚಂಗಿ ಮಾತನಾಡಿ ಪ್ರತಿಯೊಬ್ಬರು ದಿನಕ್ಕೊಂದು ವಚನವನ್ನು ಹಾಡುವುದರ ಮೂಲಕ ಮನೆಯನ್ನೇ ಅನುಭವ ಮಂಟಪವನ್ನಾಗಿಸಿ ಸಾಂಸ್ಖೃತಿಕ ಪರಿಸರ ನಿರ್ಮಾಣ ಮಾಡುವುದ ರೊಂದಿಗೆ ಕೊರೊನಾ ಸಂಕಷ್ಟದ ನೋವನ್ನು ತೊಲಗಿಸಿ ಮನಸ್ಸು ಮತ್ತು ಮನೆಯನ್ನು ಚಂದ
ವಾಗಿಟ್ಟುಕೊಳ್ಳಬಹುದು ಎಂದರು.
ಆಶಯ ನುಡಿಗಳನ್ನಾಡಿದ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ – ಪ್ರತಿ ವರ್ಷ ರಾಜಧಾನಿಯ ಉದ್ದಗಲಕ್ಕೂ ಬಸವಣ್ಣನನ್ನು ಗಾಯಕ ಸಮೂಹ ಹಾಗೂ ಕಲಾತಂಡಗಳೊಂದಿಗೆ
ಕರೆದುಕೊಂಡು ಹೆಜ್ಜೆ ಹಾಕುತ್ತಿದ್ದೆವು. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಯೂಟ್ಯೂಬ್ ಮೂಲಕ ಪ್ರತಿದಿನವೂ ವಚನ ಚಿಂತನೆಯನ್ನು ಪ್ರಸಾರ ಮಾಡುತ್ತಿದ್ದೇವೆ.
ಪ್ರತಿ ಭಾನುವಾರ ಗೂಗಲಮೀಟ್ ವಚನ ಯಾನ ನಡೆಯುತ್ತಿದ್ದು ಈಗಾಗಲೇ ೫೨ ವಚನ ಯಾನಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದರು.
ಪ್ರಭು ಇಸುವನಹಳ್ಳಿ, ಚನ್ನಬಸವಯ್ಯ ತಿಪ್ಪೂರು, ಪಂಪನಗೌಡ ಮೇಲ್ಸಿಮೆ ಮೊದಲಾದವರು ಪಾಲ್ಗೊಂಡಿದ್ದರು.