ಬಸವಣ್ಣನವರ 822ನೇ ಲಿಂಗೈಕ್ಯ ಸಂಸ್ಮರಣೆ,ಅಕ್ಕನಾಗಮ್ಮನವರ ಜಯಂತಿ

ಕಲಬುರಗಿ: ಆ.2:ನಗರದ ಆಳಂದ ರಸ್ತೆಯ ಜೆ.ಆರ್. ನಗರದಲ್ಲಿರುವ ‘ಕೊಹಿನೂರ ಕಂಪೂಟರ್ ಹಾಗೂ ಅಬಾಕಸ್ ತರಬೇತಿ ಕೇಂದ್ರ, ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ವಿಶ್ವಗುರು ಬಸವಣ್ಣನವರ 822ನೇ ಲಿಂಗೈಕ್ಯ ಸಂಸ್ಮರಣೋತ್ಸವ ಹಾಗೂ ‘ವೀರಮಾತೆ ಅಕ್ಕನಾಗಮ್ಮನವರ ಜಯಂತಿ’ ಜರುಗಿತು.

    ಉಭಯ ಮಹಾತ್ಮರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ನಂತರ ಮಾತನಾಡಿದ ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ, ಬಸವಣ್ಣನವರ ಜೊತೆಗೂಡಿ ಸಾಮಾಜಿಕ ಸುಧಾರಣೆಗಾಗಿ ನಿರಂತರವಾಗಿ ತಮ್ಮ ಜೀವನದುದ್ದಕ್ಕೂ ಹೋರಾಡಿದ ವೀರಮಾತೆ ಅಕ್ಕನಾಗಮ್ಮನವರು ಮನುಕುಲದ ಉದ್ಧಾರಕ್ಕೆ ಶ್ರಮಿಸಿದ್ದಾರೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಾಶವಾಗುತ್ತಿದ್ದ ವಚನಗಳನ್ನು ಸಂರಕ್ಷಿಸುವ ಮೂಲಕ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಮಹಾಮಾನವತವಾದಿ ಬಸವೇಶ್ವರರ ಕೊಡುಗೆ ವಿಶ್ವ ಎಂದಿಗೂ ಮರೆಯುವಂತಿಲ್ಲ ಎಂದರು.

ಪ್ರಮುಖರಾದ ಸತೀಶ ಟಿ.ಸಣಮನಿ, ನರಸಪ್ಪ ಬಿರಾದಾರ ದೇಗಾಂವ, ಪರಮೇಶ್ವರ ಬಿ.ದೇಸಾಯಿ, ದೇವೇಂದ್ರಪ್ಪ ಗಣಮುಖಿ, ದತ್ತು ಹಡಪದ, ಶಿವಪತ್ರಪ್ಪ ಬಿರಾದಾರ, ಸಿದ್ದರಾಮ ತಳವಾರ, ಸೋಮೇಶ ಡಿಗ್ಗಿ ಸೇರಿದಂತೆ ಮತ್ತಿತರರಿದ್ದರು.