ಬಸವಣ್ಣನವರ ಸಾಮಾಜಿಕ ಕ್ರಾಂತಿ ಇಡಿ ವಿಶ್ವಕ್ಕೆ ಮುಟ್ಟುವಂತಾಗಬೇಕು: ವಿಜಯಲಕ್ಷಿ ಪಾಟೀಲ

ಹುಮನಾಬಾದ್: ಮೇ.10:891ನೇ ಬಸವ ಜಯಂತಿ ಅಂಗವಾಗಿ ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ನ್ ವತಿಯಿಂದ ಬುಧವಾರ ಬಸವಕಲ್ಯಾಣ ಪಟ್ಟಣದ ಐತಿಹಾಸಿಕ ಹನುಭವ ಮಂಟಪ ಹಾಗೂ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಸಲ್ಲಿಸಿ. ಸಿಹಿ ಹಂಚಿ, ವಚನ ಪಠಣ ಮಾಡುವ ಮೂಲಕ ಅಣ್ಣಬಸವಣ್ಣನವರ 891 ನೇ ಜಯಂತಿ ಆಚರಿಸಿದರು.

ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ನ ತಾಲ್ಲೂಕು ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ ಅವರು ಮಾತನಾಡಿ, ವಿಶ್ವಗುರು ಮಹಾನ ಮಾನವತಾವಾದಿ ಅಣ್ಣ ಬಸವಣ್ಣನವರ ಸಾಮಾಜಿಕ ಕ್ರಾಂತಿ ಇಡಿ ವಿಶ್ವಕ್ಕೆ ಮುಟ್ಟುವಂತಾಗಬೇಕು. ಬಸವಣ್ಣನವರು ಸಮಾಜಕ್ಕೆ ಸಾಮರಸ್ಯದ ಅರಿವು ಮತ್ತು ಜಾಗ್ರತಿಯನ್ನು ಕೊಟ್ಟ ಮಹಾನ ಪುರುಷರು, ಶರಣರಿಂದ ವಿಶ್ವದಲ್ಲಿಯೆ ನಡೆಯಲಾರದಂತಹ ಸಾಮಾಜಿಕ ಕ್ರಾಂತಿ ಕಲ್ಯಾಣ ನಾಡಿನಲ್ಲಿ ನಡೆದಿದೆ. ಬಸವಣ್ಣನವರು ಕಲ್ಯಾಣ ನಾಡಿನಲ್ಲಿ ಅನುಭವ ಮಂಟಪ ಸ್ಥಾಪಿಸಿ, ಮೊಟ್ಟ ಮೂದಲೆನೆ ಬಾರಿ ಶಿಕ್ಷಣದ ಜೋತಿ ಬೇಳಗಿಸಿದ್ದಾರೆ ಎಂದು ನುಡಿದರು

ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್‍ನ ತಾಲ್ಲೂಕು ಉಪಾಧ್ಯಕ್ಷೆ ಶೋಭಾ ಗುರಮಿಟಕಲ್, ಕಾರ್ಯದರ್ಶಿ ಸುರೇಖಾ ವಿಭೂತಿ, ಕೋಶಾಧ್ಯಕ್ಷೆ ಸುಧಾರಾಣಿ ಪುಜಾರಿ, ಸದಸ್ಯರಾದ್ ಅನಿತಾ ಚಿದ್ರಿ, ದ್ರೋಪತಿ ಶಮಶಾಬಾದೆ, ವಿಮಲಾ ಸಂಗಮಕರ್, ಅನಿತಾ ಅಶೋಕ, ಕವಿತಾ ವಿಭುತಿ, ಇದ್ದರು.