ಬಸವಣ್ಣನವರ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡರೆ ಆದರ್ಶ ವ್ಯಕ್ತಿಗಳಾಗುತ್ತಿರಿ : ಸಂತೋಷ ಹೂಗಾರ

ಕಲಬುರಗಿ: ಶಿವಶರಣ ಶ್ರೀ ಬಸವೇಶ್ವರರು ಹೇಳಿದ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದಲ್ಲಿ ತಿಳಿಸಿದ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗುತ್ತಿರಿ ಎಂದು ಶರಣ ಸಾಹಿತಿ ಸಂತೋಷ ಹೂಗಾರ ಹೇಳಿದರು.

ಗುರುವಾರ ಕಮಲಾಪುರ ತಾಲೂಕಿನ ನಾವದಗಿ (ಬಿ) ಗ್ರಾಮದ ದೇಶಿ ಕೇಂದ್ರು ವಸತಿ ಶಾಲೆಯಲ್ಲಿ
ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಮಹಾತ್ಮ ಬಸವೇಶ್ವರರ ಜಯಂತಿ ನಿಮಿತ್ತಯ
ಬಸವ ದರ್ಶನ ವಚನದಲ್ಲಿನ ಬೆಳಕು ನಮ್ಮೊಳಗಿನ ಕತ್ತಲು ವಿಶೇಷ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಬಸವೇಶ್ವರರು ಸಾಮಾಜಿಕ ಅಸಮಾನತೆ, ಮೌಡ್ಯತೆ, ಜಾತಿಯತೆಯ ವಿರುದ್ದ ಕ್ರಾಂತಿ ಮಾಡಿ ಕುಲವೊಂದೆ ಮನಿಷ್ಯ ಜನ್ಮವೆಂಬುದನ್ನು ಸಾರಿದರು,
ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದ
ಶ್ರೀನಿವಾಸ ಸರಡಗಿ ಶ್ರೀರೇವಣಸಿದ್ದ ಶಿವಾಚಾರ್ಯರು ಇಂದಿನ ಸಮಾಜದಲ್ಲಿ ಕೇವಲ ಅಂಕ ಆಧಾರಿತ ಶಿಕ್ಷಣ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ, ಜೊತೆಗೆ ಮಕ್ಕಳಲ್ಲಿ ಸಂಸ್ಕಾರಗಳು ಬೆಳೆಸಬೇಕು, ಈ ಸಮಾಜದಕ್ಕೆ ಒಬ್ಬ ಉತ್ತಮ ಪ್ರಜೆಯನ್ನಾಗಿಸಬೇಕು, ಸತ್ಯ ನ್ಯಾಯ, ಧರ್ಮದ ಬದುಕು ಎಲ್ಲರಿಗೂ ಮಾದರಿಯಾಗುತ್ತದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪರಮೇಶ್ವರ ಓಕಳಿ ಮಾತನಾಡಿ ಇತ್ತಿಚಿಗೆ ಕಮಲಾಪುರ ಕಸಾಪ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಾಲೂಕಿನ ವ್ಯಾಪ್ತಿಯಲ್ಲಿ ಸಾಹಿತ್ತಿಕ ವಾತಾವರಣ ಮೂಡಿಸುತ್ತಿದೆ, ಅಲ್ಲದೇ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸತ್ಕಾರ ಮಾಡುವ ಮೂಲಕ ಮತ್ತಷ್ಟು ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ದೇಶಿ ಕೇಂದ್ರಿಯ ಶಾಲೆಯ ಅಧ್ಯಕ್ಷರಾದ ಡಾ.ರಾಜೇಂದ್ರ ಯರನಾಳೆ ,ಕಮಲಾಪುರ ಬಸವ ಜಯಂತೋತ್ಸವ ಸಮಿತಿಯ ಅಧಯಕ್ಷರಾದ ಗುರುರಾಜ ಮಾಟೂರ,
ಕಮಲಾಪುರ ಕಸಾಪ ಅಧ್ಯಕ್ಷ ಸುರೇಶ ಲೇಂಗಟಿ , ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ
ಪರಮೇಶ್ವರ ಓಕಳಿ ಮಾತನಾಡಿದರು.
ವಿವಿಧ ಕ್ಷೇತ್ರದ ಸಾಧಕರಾದ; ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಗುರುಲಿಂಗಪ್ಪ ತಡಕಲ ( ಬಸವ ತತ್ವ).ಪ್ರಗತಿಪರ ರೈತ ಮಹಿಳೆ ಸುಜಾತಾ ಪಾಟೀಲ (ಕೃಷಿ).ಮೌಂಟ್ ವೇವ್ ಶಿಕ್ಷಣ ಸಂಸ್ಥೆ ಅಧ್ಯಕ್ಷ,ಶಾಂತಕುಮಾರ ಪುರದಾಳ ( ಶಿಕ್ಷಣ).ಕಮಲಾಪುರ ಬಸವ ಜಯಂತೋತ್ಸವ ಸಮಿತಿಯ ಅಧಯಕ್ಷರಾದ ಗುರುರಾಜ ಮಾಟೂರ,ಸಾಮಾಜಿಕ ಹೋರಾಟಗಾರ ಸುನೀಲ ಮಾನ್ಪಡೆ (ಸಾಮಾಜಿಕ ಹೋರಾಟ) ವಿಶೇಷವಾಗಿ ಸನ್ಮಾನಿಸಲಾಯಿತ.ಅಣವೀರ ಗೌಡಪಗೋಳ್, ಶಿವಪ್ಪ ಚಿಂಚೋಳಿ, ಚೇತನ ಮಹಾಜನ , ಲಕ್ಷ್ಮೀ ರಾಜನಾಳ, ರೇಣುಕಾ ನರನಾಳ, ಸುಜಾತಾ ಚೌದ್ರಿ, ಫಯಾಜ ಕಮಲಾಪುರ ಇತರರು ಇದ್ದರು.ಮಹಾಗಾಂವ ಕಸಾಪ ವಲಯ ಅಧ್ಯಕ್ಷ ಅಂಬಾರಾಯ ಮಡ್ಡೆ ನಿರೂಪಿಸಿದರು, ಭುವನೇಶ್ವರಿ ಧಟ್ಟಿ ಸ್ವಾಗತಿಸಿದರು, ಕಸ್ತೂರಿಬಾಯಿ ರಾಜೇಶ್ವರ ಪ್ರಾರ್ಥಿಸಿದರು, ಸಂಜಯಕುಮಾರ ನಾಟೀಕಾರ ವಂದಿಸಿದರು.