ಬಸವಣ್ಣನವರ ವಿಚಾರಧಾರೆ ಇಂದಿಗೂ ಪ್ರಾಮುಖ್ಯ: ಲಾವಣ್ಯ

ವಿಜಯಪುರ.ಮೇ.೧೨-ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜವನ್ನು ಪರಿವರ್ತನೆ ಮಾಡಲು ಮುಂದಾದ ಅವರ ವಿಚಾರಧಾರೆಗಳು ೨೧ನೇ ಶತಮಾನದಲ್ಲಿಯೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ ಎಂದು ಪುರಸಭಾ ಆರೋಗ್ಯಧಿಕಾರಿ ಲಾವಣ್ಯ ತಿಳಿಸಿದರು.
ಇವರು ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭಾವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರದಲ್ಲಿ ಬಸವಣ್ಣವರ ಭಾವ ಚಿತ್ರಕ್ಕೆ ಪುಷ್ವ ನಮನ ಸಲ್ಲಿಸಿ, ಮಾತನಾಡಿದರು.
ತಮ್ಮ ಕಾಯಕ ನಿಷ್ಠೆಯಿಂದ ಬಸವಣ್ಣನವರು ಅನುಭವ ಮಂಟಪದಲ್ಲಿ ಮಾನವ ಹಿತ ಸಾಧನೆಯ ಮನುಕುಲ ಉದ್ದಾರದಲ್ಲಿ ತೊಡಗಿದ್ದವರು. ಇಂತಹವರ ವಚನ ಸಾಹಿತ್ಯವನ್ನು ನಾವು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ತಿಳಿಸಿದರು.
ಪುರಸಭಾ ಅಧಿಕಾರಿ ಶಿವನಾಗೇಗೌಡ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ಜಾತಿ ತಾರತಾಮ್ಯ, ಲಿಂಗ ತಾರತಾಮ್ಯ, ಹೋಗಲಾಡಿಸಲು ಅನುಭವ ಮಂಟಪದ ಮೂಲಕ ಸಮಾಜದ ಕಟ್ಟಕಡೆ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತರಲು ಅನೇಕರು ತಮ್ಮ ವಚನಗಳ ಮೂಲಕ ಮೌಲ್ಯವರ್ಧಿತ ಸಮಾಜ ಕಟ್ಟಲು ನೆರವಾದಂತಹ ಶರಣರಿದ್ದರು.
ಪುರಸಭಾ ಸಿಬ್ಬಂದಿ ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬರು ಸಮಾಜದಲ್ಲಿ ಸಮಾನತೆಗೆ ದುಡಿದಾಗ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಪುರಸಭಾ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಹಾಜರಿದ್ದರು.