
(ಸಂಜೆವಾಣಿ ವಾರ್ತೆ)
ವಿಜಯಪುರ:ಆ.5: ವಿಶ್ವಗುರು ಬಸವಣ್ಣನವರ ವಚನ ಸಾಹಿತ್ಯ ಹಾಗು ಅವರ ಜೀವನ ಚರಿತ್ರೆ ವಿಶ್ವಕ್ಕೆಲ್ಲ ಅನುಕರಣೀಯವಾಗಿದೆ ಎಂದು ಮುರಾರ್ಜಿ ದೇಸಾಯಿ ವಸತಿ ಶಾಲೆ ಟಕ್ಕಳಕಿ ಪ್ರಾಚಾರ್ಯ ಡಿ ಎಮ್ ಚಲುವಾದಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಹಾಗು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಬಸವನಬಾಗೇವಾಡಿ ಸಂಯುಕ್ತ ಆಶ್ರಯದಲ್ಲಿ1) ದಿ: ಗಂಗಾಧರ ಕೋರಳ್ಳಿ ದತ್ತಿ. ವಿಷಯ ನಿಲಾಂಬಿಕೆ ಗಂಗಾಂಬಿಕೆ ಕುರಿತು 2)ದಿ: ಶಿವಪ್ಪ ಮಲ್ಲಪ್ಪ ಅವರಾದಿ ,ದತ್ತಿ ದಾನಿಗಳಾದ ಮಡಿವಾಳಪ್ಪ ಶಿವಪ್ಪ ಅವರಾದಿ. ವಿಷಯ ಶರಣ ಸಾಹಿತ್ಯ ಹಾಗು ಜಾನಪದ ಸಾಹಿತ್ಯ ಕುರಿತು ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಿ ಎಮ್ ಚಲುವಾದಿ
ಮಾತನಾಡಿ ಹನ್ನೇರಡನೆಯ ಶತಮಾನದಲ್ಲಿ ವಚನ ಸಾಹಿತ್ಯ ಒಂದು ಚಳುವಳಿಯಾಯಿತು. ಸಮ ಸಮಾಜದ ನಿರ್ಮಾಣ ಕಾರ್ಯ ಆಗಿನ ಎಲ್ಲ ಶರಣರು ಸಾಹಿತ್ಯದ ಮೂಲಕ ಸಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸದರು ಎಂದರು
ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಗಿರಿಜಾ ಪಾಟೀಲ ನಿಲಾಂಬಿಕೆ ಹಾಗು ಗಂಗಾಂಬಿಕೆ ಕುರಿತು ಮಾತನಾಡಿ ಬಸವಣ್ಣನವರ ಪತ್ನಿಯ ಹೆಸರು ನಿಲಾಂಬಿಕೆ.ನಿಲಾಂಬಿಕೆಯ ಸದ್ಗುಣ,ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ತಿಳುವಳಿಕೆ ಹೊಂದಿದ್ದರಿಂದ ಬಸವಣ್ಣನವರು ಅವಳನ್ನು ಆದರ್ಶ ಸಂಸ್ಕಾರ ಪಡೆದ ಪುಣ್ಯವಂತೆ ಎಂದು ಬಣ್ಣಿಸಿದ್ದಾರೆ ಬಸವಣ್ಣನವರ ಎರಡನೆಯ ಪತ್ನಿ ಗಂಗಾಂಬಿಕೆಯನ್ನು ಮದುವೆ ಆದ ಬಳಿಕ ಅವಳಲ್ಲಿರುವ ಸಾಹಿತ್ಯ ಮತ್ತು ಸಂಗೀತ ಶಿಕ್ಷಣ ಪಡೆದಳು. ಅವಳ ವಿನಮ್ರ ಸ್ವಭಾವಕ್ಕೆ ಬಸವಣ್ಣನವರು ಮೆಚ್ಚಿಕೊಂಡಿದ್ದರು. ನಿಲಾಂಬಿಕೆ ಮತ್ತು ಗಂಗಾಂಬಿಕೆ ಇಬ್ಬರೂ ಬಸವಣ್ಣನವರ ವಚನ ಸಾಹಿತ್ಯ ಪ್ರಚಾರ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದರು
ಇನ್ನೊರ್ವ ಉಪನ್ಯಾಸ ನೀಡಿದ ಸಾಹಿತಿ ಶಾಂತಾ ಚೌರಿ( ಬಿರಾದಾರ) ವಚನ ಸಾಹಿತ್ಯ ಕುರಿತು ಮಾತನಾಡಿದ ಅವರು ವಚನ ಗುರು ದೇವರ ದಾಸಿಮಯ್ಯ ಮಾದಾರ ಚನ್ನಯ್ಯ ವಿಶ್ವ ಗುರು ಬಸವಣ್ಣ,ಅಕ್ಕಮಹಾದೇವಿಯ, ಅಲ್ಲಮ ಪ್ರಭು, ಅಂಬಡಿಗೇರ ಚೌಡಯ್ಯ, ಹಡಪದ ಅಪ್ಪಣ್ಣ,
ಮಡಿವಾಳ ಮಾಚಯ್ಯ, ಸೂಳೆ ಸಂಕವ್ವ, ಆಯ್ದಕ್ಕಿ ಲಕ್ಕಮ್ಮ, ಉರಿಲಿಂಗ ಪೆದ್ದ, ಸಮಕಾಲೀನ ವಚನಕಾರರರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬಸವಾದಿ ಶರಣರು ಸರಳವಾದ ಕನ್ನಡ ಭಾಷೆಯಲ್ಲಿ ಎಲ್ಲರಿಗೂ ತಿಳಿಯುವ ಹಾಗೆ ಸಾಹಿತ್ಯ ರಚಿಸಿದರು ಎಂದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ಮಾತನಾಡಿದರು ದತ್ತಿನಿಧಿ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಉದ್ಘಾಟಿಸಿದರು. ಪದಾಧಿಕಾರಿಗಳಾದ ಬಸವರಾಜ ಸೋಮಪೂರ ರಾಜೇಸಾಬ ಶಿವನಗುತ್ತಿ ಯಮನಪ್ಪ ಮಿಣಜಗಿ ಬಸವರಾಜ ಮೇಟಿ ಸೋಮಲಿಂಗ ಹೊಸಮನಿ ವೇದಿಕೆಯ ಮೇಲಿದ್ದರು
ಶಿಕ್ಷಕರಾದ ಎ ಆರ್ ಅತ್ತಾರ ಬಿ ಬಿ ಲಾಲಸಂಗಿ ಪಿ ಎ ರಜಪೂತ ಶಂಕರ ಬ್ಯಾಕೊಡ ಎಸ್ ಕೆ ಯಳಮೇಲಿ ವಿನೋದಾ ಹಿರೇಮಠ ಅಕ್ಕಮಹಾದೇವಿಯ ಅಮರಣ್ಣವರ ಸುರೇಖಾ ಚಲುವಾದ ಭಾಗ್ಯ ಕೆಂಗನಾಳ ಕಿಶೋರ ಬಜಂತ್ರಿ ಎಸ್ ಎಸ್ ವಾಲಿಕಾರ ಎ ಎ ಶೇಖ ಮುಂತಾದವರರು ಉಪಸ್ಥಿತರಿದ್ದರು
ನಾಗವೇಣಿ ನಂದ್ಯಾಳ ಪ್ರಾಥಿ9ಸಿದರು ದಿವ್ಯಾ ಚವ್ವಾಣ ನಿರೂಪಿಸಿದರು ಪುಷ್ಪಾ ಬಿರಲದಿನ್ನಿ ವಂದಿಸಿದರು