ಬಸವಣ್ಣನವರ ವಚನಗಳು ಮನುಕುಲಕ್ಕೆ ದಾರಿದೀಪ :ಕರುಣೇಶ್ವರ ಮಹಾಸ್ವಾಮಿ

ಚಿಂಚೋಳಿ:ಮೇ.7:ಬಸವಣ್ಣನವರು 12 ನೇ ಶತಮಾನದಲ್ಲಿ ವಿಶ್ವಕ್ಕೆ ಭಾವೈಕ್ಯತೆಯ ಶಾಂತಿಯ ಮಂತ್ರ ಪ್ರದಾನಿಸಿ ತಮ್ಮ ವಚನಗಳ ಮೂಲಕ ಮನುಕುಲಕ್ಕೆ ಹೊಸ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡಿ ಎಲ್ಲಾ ಕುಲಗಳಿಗೆ ಅವರು ಗುರು ಆಗಿದ್ದರೆಂದು ನಿಡಗುಂದಾ ಕಂಚಾಳಕುಂಟಿ ನಂದೀಶ್ವರ ಶ್ರೀಮಠದ ಪೀಠಾಧಿಪತಿ ಪೂಜ್ಯ ಕರುಣೇಶ್ವರ ಮಹಾ ಸ್ವಾಮಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

ಅವರು ಚಿಂಚೋಳಿ ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ವಿಶ್ವಗುರು ಬಸವಣ್ಣನವರ 890 ನೇ ಜಯಂತ್ಯೋತ್ಸವದ ಘನ ನೇತೃತ್ವವಹಿಸಿ ಬಸವ ಭಕ್ತರಿಗೆ ಆಶೀರ್ವಚನ ನೀಡುತ್ತಿದ್ದರು

ಅವರು ತಮ್ಮ ಮಾತುಗಳನ್ನು ಮುಂದುವರೆಸುತ್ತಾ ಇಂದು ನಾವು ಕುಲ ಕುಲವೆಂದು ಪರಸ್ಪರ ದ್ವೇಶ ಅಸೂಯೆ ಸಾಧಿಸುತ್ತಿದ್ದೇವೆ ಆದರೆ ಬಸವಣ್ಣನವರು ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಸಂದೇಶ ನೀಡಿ ಜಾತಿ ಎನ್ನುವವರ ಬಾಯಿ ಮುಚ್ಚಿದ್ದಾರೆ ನಿಜವಾದ ಬಸವ ಭಕ್ತ ಜಾತಿಯನ್ನು ಮರೆತು ನೀತಿಯಿಂದ ನಡೆಯುತ್ತಾನೆಂದು ಕರುಣೇಶ್ವರ ಶ್ರೀಗಳು ಭಕ್ತರಿಗೆ ಸಲಹೆ ನೀಡಿದರು

ಕಾರ್ಯಕ್ರಮದಲ್ಲಿ ಭಾಗಿಯಾಗಿ ನೇತೃತ್ವವಹಿಸಿದ ಚಿಮ್ಮಯಿದ್ಲಾಯಿ ಗ್ರಾಮದ ಸಿದ್ಧರಾಮೇಶ್ವರ ಹಿರೇಮಠ ಸಂಸ್ಥಾನದ ಪೀಠಾಧಿಪತಿ ವಿಜಯ ಮಹಾಂತ ಶಿವಾಚಾರ್ಯರು ಮಾತನಾಡಿ ಬಸವಣ್ಣನವರು ಸಕಲ ಜೀವರಾಶಿಗಳ ಲೇಸನ್ನು ಬಯಸಿದ್ದಾರೆ ಯಾವುದೇ ಜೀವಿಯನ್ನು ಹಿಂಸಿಸದಂತೆ ಅವರು ಕರೆಕೊಟ್ಟಿದ್ದರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದು ನಮ್ಮ ಜೀವನ ಸಫಲ ಮಾಡಿಕೊಳ್ಳೊಣವೆಂದು ಹರಸಿದರು

ನಿಜವಾದ ಬಸವ ಭಕ್ತನಲ್ಲಿ ತ್ಯಾಗದ ಮನೋಭಾವ ಇರಬೇಕು ಮನುಷ್ಯ ಮೇಣದ ಬತ್ತಿಯ ಹಾಗೆ ಉರಿದು ಇತರರಿಗೆ ಬೆಳಕಾಗಬೇಕು ಆಗಲೇ ನಮ್ಮ ಜೀವನ ಸಾರ್ಥಕವೆಂದು ವಿಜಯ ಮಹಾಂತೇಶ ಶ್ರೀಗಳು ಪ್ರತಿಪಾದಿಸಿದ

ಈ ಧಾರ್ಮಿಕ ಸಭೆಯನ್ನುದ್ದೇಶಿಸಿ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ ಡಾಃವಿಕ್ರಮ ಪಾಟೀಲ ವೀರಶೆಟ್ಟಿ ಇಮಡಾಪೂರ ಸೇರಿದಂತೆ ಇತರರು ಮಾತನಾಡಿದರು

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಶರಣೆ ಪೂಜಾ ಬಂಕಲಗಿ ಬಸವಣ್ಣನವರ ಜೀವನ ಚರಿತ್ರೆ ಸೇರಿದಂತೆ ವಿವಿಧ ವಚನಗಳ ವಿಮರ್ಶೆ ಗೈದರು

ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಷ.ಬ್ರ.ಡಾ. ಚೆನ್ನವೀರ ಶಿವಾಚಾರ್ಯರು ಹಾರಕೂಡ,ಪೂಜ್ಯ ಶ್ರೀ ಷ ಬ್ರ ಶಿವಕುಮಾರ ಶಿವಾಚಾರ್ಯರು ನರನಾಳ,ಶ್ರೀಶೈಲ ಘೋಳಿ, ವಿಶ್ವನಾಥ ಪಾಟೀಲ ಪೆÇೀಲಕಪಳ್ಳಿ ಗುರುಲಿಂಗಪ್ಪಾ ಪಾಟೀಲ, ಬಸವಣಪ್ಪಾ ಕುಡ್ಹಳ್ಳಿ ಸಂಗಪ್ಪಾ ಪಾಲಾಮೂರ ಬಸವರಾಜ ಬೆಳಕೇರಿ, ನಂದಿಕುಮಾರ ಪಾಟೀಲ, ಸಂಜೀವಕುಮಾರ ಪಾಟೀಲ, ನೀಲಕಂಠ ಸೀಳಿನ್, ಚಿತ್ರಶೇಖರ ಪಾಟೀಲ ರಮೇಶ ಪಡಶೆಟ್ಟಿ ಶರಣು ಮೋತಕಪಳ್ಳಿ, ಜೋತಿ ಬೊಮ್ಮಾ, ನಾಗರಾಜ ಮಲಕೂಡ ಪವನಕುಮಾರ ಹುಡದಳ್ಳಿ ಶಿವಬಸ್ಸಯ್ಯಾ ಮಠ, ಬಸವರಾಜ ಪುಣ್ಯಶೆಟ್ಟಿ ಐನೋಳ್ಳಿ, ವೀರೇಶ ಯ0ಪಳ್ಳಿ, ಸಂಜು ಪಾಟೀಲ ಯ0ಪಳ್ಳಿ, ಸಂತೋಷ್ ಕಶೆಟ್ಟಿ, ವಿಷ್ಣುಕಾಂತ್ ಮೂಲಗಿ, ಬಸವಣ್ಣಪ್ಪ ಪಾಟೀಲ್, ಸೋಮು ಹುಲಿ, ರಮೇಶ ಹುಡುಗಿ, ಸಂಪತ್ ಮುಸ್ತರಿ, ಬಸವರಾಜ ಗಡಂತಿ, ಶಂಕರ್ ಶಿವಪುರಿ, ವಿಜಯ ಕುಮಾರ ಬಿರಾದರ್, ಮಲ್ಲಿನಾಥ್ ಮೇಲಗಿರಿ, ರವಿ ಪಾಟೀಲ್ ಕನಕಪುರ, ಸಂತೋಷ ಪಾಟೀಲ್, ಬಸವರಾಜ ಚೆನ್ನೂರ, ಸಂತೋಷ್ ಕೊಂಡ, ಸೂರ್ಯಕಾಂತ ಹುಲಿ, ಶಾಂತು
ಯ0ಪಳ್ಳಿ, ವೀರೇಶ ದೇಸಾಯಿ, ಉದಯ ಪಾಟೀಲ್, ಸೇರಿದಂತೆ ನೂರಾರು ಜನ ಬಸವ ಭಕ್ತರು ಹಾಜರಿದ್ದರು

ಧಾರ್ಮಿಕ ಸಭೆಗಿಂತ ಮುಂಚೆ ಚಂದಾಪೂರ ಗಾಂಧಿ ಚೌಕಿನಿಂದ ಚಿಂಚೋಳಿ ಬಸವೇಶ್ವರ ವೃತ್ತದವರೆಗೆ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು