ಬಸವಣ್ಣನವರ ವಚನಗಳು ದಿವ್ಯ ಔಷಧಗಳು : ಶರಣೆ ಕಲ್ಯಾಣಮ್ಮ

ಬಸವಕಲ್ಯಾಣ :ಫೆ.22: ನಗರದ ಎಸ್.ಎಸ್.ಕೆ.ಬಸವೇಶ್ವರ ಕಲಾ, ವಿಜ್ಞಾನ,ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ” ಬಸವಣ್ಣನವರ ಸಂದೇಶ ಹಾಗೂ ಮೌಲ್ಯಗಳು” ಎಂಬ ವಿಷಯದ ಮೇಲೆ ವಿಷೇಶ ಉಪನ್ಯಾಸಕವನ್ನು ಉದ್ಘಾಟಿಸಿ ಮಾತನಾಡುತ್ತ ಬಸವಾದಿ ಶರಣರ ವಚನಗಳಲ್ಲಿ ನಡೆ,ನುಡಿ,ಆಚಾರ,ವಿಚಾರ, ದುಷ್ಛಟಗಳಿಂದ ದೂರವಿರುವ ಬಗ್ಗೆ ಅನೇಕ ವಚನಗಳಲ್ಲಿ ಹೇಳಲಾಗಿದೆ,ಎನ್ನುತ್ತ ಶರಣರ ವಚನಗಳು ದಿವ್ಯ ಔಷಧಗಳಾಗಿವೆ ಎಂದು ಶರಣೆ ಕಲ್ಯಾಣಮ್ಮನವರು ನುಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶರಣೆ ಚಿತ್ರಲೇಖ ಪಾಟೀಲರು ಮಾತನಾಡುತ್ತ ಶರಣರು ಆತ್ಮ-ಪರಮಾತ್ಮ, ದೇಹ-ದೇವರು ಮುಂತಾದವುಗಳನ್ನು ವಿವರಿಸಿ, ಇವುಗಳನ್ನು ಅರಿತುಕೊಳ್ಳಲು ಮೊದಲು ಮನಸ್ಸನ್ನು ಸ್ಥಿರಗೊಳಿಸಬೇಕು, ಅಂದಾಗ ಮಾತ್ರ ಪರಮಾತ್ಮನನ್ನುಕಾಣಲು ಸಾದ್ಯವೆಂದಿದ್ದಾರೆ ಶರಣರು ಎಂದು ವಿದ್ಯಾಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಬಸವರಾಜ ಎವಲೆಯವರು ವಹಿಸಿಕೊಂಡು ” ವಿದ್ಯಾಥಿಗಳು ಶರಣರ ಕಳಬೇಡ ಕೊಲಬೇಡ ಹುಸಿಯ ನೂಡಿಯಲು ಬೇಡ” ಎಂಬ ಒಂದು ವಚನವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ನqದರೆ, ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗುತ್ತಿರುವುದರಲ್ಲಿ ಸಂದೇಹವಿಲ್ಲವೆಂದು ಹೇಳಿದರು.

ಕಾರ್ಯಕ್ರಮವು ಸೂರ್ಯಕಾಂತ ಪಾಟೀಲರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ವೀರಶೆಟ್ಟಿ ಮಲಶೆಟ್ಟಿ ಬೇಲೂರು ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರೆ ಶ್ರೀ.ಕಲ್ಯಾಣಪ್ಪ ನವದಗಿ ಸ್ವಾಗತಿಸಿದರೆ ಪ್ರೊ.ವಿಠೋಬಾ ಡೊಣ್ಣೆಗೌಡರ ನಿರೂಪಿಸಿದರು.