ಬಸವಣ್ಣನವರ ವಚನಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ : ಹೆಚ್.ಎಂ. ಮಂಜುನಾಥ

ಬೀದರ:ಎ.26: ಪ್ರಾದೇಶಿಕ ಸಾರಿಗೆ ಕಛೇರಿ ಹಾಗೂ ಬೀದರ ಮೋಟಾರು ವಾಹನ ತರಬೇತಿ ಶಾಲೆಯ ಅಶೋಷಿಯೇಶನ ಸಹ ಯೋಗದಲ್ಲಿ ಜಗಜ್ಯೋತಿ ವಿಶ್ವಗುರು ಶ್ರೀ ಬಸವೇಶ್ವರ ರವರ 890ನೇ ಜಯಂತಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬೀದರ ಮೋಟಾರ ವಾಹನ ನಿರೀಕ್ಷಕರಾದ ಹೆಚ್.ಎಮ್. ಮಂಜುನಾಥ ಅವರು ವಿಶ್ವಗುರು ಬಸವೇಶ್ವರ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು ಬಸವಣ್ಣನವರ ವಚನಗಳು ಹಾಗೂ ಅವರ ತತ್ವ ಆದರ್ಶಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು ಹಾಗೂ ವಚನಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ನುಡಿದರು.

ಈ ಕಾರ್ಯಕ್ರಮದಲ್ಲಿ ಬೀದರ ಮೋಟಾರು ವಾಹನ ತರಬೇತಿ ಶಾಲೆಯ ಅಶೋಷಿಯೇಶನ ಅಧ್ಯಕ್ಷ ಪ್ರಕಾಶ ಗುಮ್ಮೆ, ಉಪಾಧ್ಯಕ್ಷರಾದ ಶಿವರಾಜ ಜಮಾದಾರ, ಸಹ ಕಾರ್ಯದರ್ಶಿ ಸಾಗರ ಉಂಡೆ, ಕಛೇರಿಯ ಸಿಬ್ಬಂಧಿ ವೀರೇಂದ್ರ ಎಮ್., ನಾಗೇಶ ಕಲಶೆಟ್ಟಿ, ನಾಗರಾಜ, ಶಿವಪುತ್ರ ಚವಳೆ, ಅರುಣ ಟೇಕರಾಜ, ರಾಮರತನ ಮೂಲಗೆ, ಸುಧಾಕರ ಬಿರಾದಾರ, ಉಮೇಶ ಉಂಡೆ ಹಾಗೂ ಕಚೇರಿ ಸಿಬ್ಬಂಧಿ ಎಲ್ಲಾ ಮೋಟಾರು ವಾಹನ ತರಬೇತಿ ಶಾಲೆಯ ಪ್ರಾಚಾರ್ಯರು ಹಾಜರಿದ್ದರು.