ಬಸವಣ್ಣನವರ ಮೂರ್ತಿ ಭಗ್ನ ಕ್ರಮಕ್ಕೆ ಒತ್ತಾಯ

ಸುರಪುರ:ನ.11: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನಡೆದ ವಿಶ್ವಗುರು ಬಸವಣ್ಣನವರ ಮೂರ್ತಿ ಭಗ್ನಗೊಳಿಸಿದ ಘಟನೆಯನ್ನು ಖಂಡಿಸಿ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಬಸವಣ್ಣನವರು ತಮ್ಮ ವಚನಗಳ ಮೂಲಕ ಇಡೀ ಜಗತ್ತಿಗೆ ಶಾಂತಿ ಮತ್ತು ಸಮಾನತೆಯನ್ನು ಬಯಸಿದ ಕ್ರಾಂತಿ ಪುರುಷರಾಗಿದ್ದಾರೆ.ಅಂತಹ ಮಹಾನ್ ವ್ಯಕ್ತಿಯನ್ನು ಜಗತ್ತು ಇಂದು ವಿಶ್ವಗುರು ಎಂದು ಪೂಜಿಸುವ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಯಾರೋ ಕಿಡಿಗೇಡಿಗಳು ಬಸವಣ್ಣನವರ ಮೂರ್ತಿಯನ್ನು ಭಗ್ನಗೊಳಿಸಿರುವುದು ಖಂಡನಿಯ ಸಂಗತಿಯಾಗಿದೆ,ಸರಕಾರ ಕೂಡಲೆ ಮೂರ್ತಿ ಭಗ್ನಕ್ಕೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ನಡೆಸುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ವೇದಿಕೆ ರಾಜ್ಯ ಸಂಚಾಲಕ ಚಂದ್ರಶೇಖರ ಡೊಣೂರ, ಜಿಲ್ಲಾಧ್ಯಕ್ಷ ಪ್ರದೀಪ ಕದರಾಪುರ, ತಾಲೂಕು ಅಧ್ಯಕ್ಷ ವಿರೇಶ ಪಂಚಾAಗಮಠ, ಶರಣಪ್ಪ ಕಳ್ಳಿಮನಿ, ಜಗದೀಶ ಪಾಟೀಲ್ ,ಮಹೇಶ ಪಾಟೀಲ್, ಶಿವರಾಜ ಕಲಕೇರಿ ,ಸಿದ್ದನಗೌಡ ಹೆಬ್ಬಾಳ ,ಭಾಗ್ಯವಂತ ಕಾಳಗಿ, ಸುನಿಲ್ ಪಂಚಾAಗಮಠ, ಹರೀಶ ಹಳ್ಳದ್ ,ಶಂಕರ್, ಶೀಲವಂತ , ಆನಂದ ಮಡ್ಡಿ, ಮಲ್ಲಿಕಾರ್ಜುನ ಸುಬೇದಾರ್, ಬಸಯ್ಯ ಬೋನಾಳ ,ಪ್ರಕಾಶ ಅಂಗಡಿ, ಶರಣು ದೇವಪುರ ಇತರರಿದ್ದರು.