
ಮಾನ್ವಿ.ಅ.೧೨- ಚಿತ್ತಾಪುರ ಪಟ್ಟಣದಲ್ಲಿ ಬಸವಣ್ಣನವರ ಮೂರ್ತಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬಸವ ಕೇಂದ್ರದ ಅಧ್ಯಕ್ಷ ಎಂ ರಂಗಪ್ಪ ಹಾಗೂ ಪದಾಧಿಕಾರಿಗಳು ಸೇರಿ ತಾಲೂಕ ದಂಡಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ತಾಲೂಕ ಬಸವ ಕೇಂದ್ರದಿಂದ ಮನವಿ ಸಲ್ಲಿಸಿ ಮಾತನಾಡಿದ ಅನೇಕರು ಚಿತ್ತಾಪುರ ಪಟ್ಟಣದ ಮುಖ್ಯ ಸರ್ಕಲ್‌ದಲ್ಲಿರುವ ಅಶ್ವಾರೂಢ ವಿಶ್ವಗುರು ಬಸವಣ್ಣನ ಮುಖಕ್ಕೆ ಕಪ್ಪು ಬಟ್ಟೆ ಹಾಕಿ ಅವಮಾನ ಮಾಡಲಾದ ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಮಾತ್ರ ಬಂಧಿಸಲಾಗಿದ್ದು ಇದರ ಹಿಂದೆ ಇನ್ನುಳಿದ ಕೆಲ ಕಿಡಿಗೇಡಿಗಳನ್ನು ಕೂಡಲೇ ಈ ಕುರಿತು ತನಿಖೆ ಕೈಗೊಂಡು ಎಲ್ಲ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು. ಇಂತಹ ಘಟನೆ ಮರುಕಳುಹಿಸದಂತೆ ಎಚ್ಚರವಹಿಸಬೇಕು ಎಂದು ಮುಖ್ಯಮಂತ್ರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡಾ ಬಸವಪ್ರಭು, ವೀರಭದ್ರಪ್ಪ ಗೌಡ, ಚನ್ನಬಸಪ್ಪ ಗೌಡ ಬೆಟ್ಟದೂರು, ಡಿ ಜಿ ಕರ್ಕಿಹಳ್ಳಿ, ಮಹಮ್ಮದ್ ಮುಜೀಬ್, ತಿಪ್ಪಣ್ಣ ಬಾಗಲವಾಡ, ಸೇರಿದಂತೆ ನೂರಾರು ಜನರಿದ್ದರು.