ಬಸವಣ್ಣನವರ ಪುತ್ಥಳಿ ಭಗ್ನ ಮಾಡಿದ ಕಿಡಿಗೇಡಿಗಳನ್ನು ಗಡಿಪಾರಿಗೆ ಆಗ್ರಹ

ಅಫಜಲಪುರ:ನ.13: ವಿಶ್ವಗುರು ಬಸವಣ್ಣನವರ ಪುತ್ಥಳಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ತಕ್ಷಣವೇ ಬಂಧಸಿ ಗಡಿಪಾರು ಮಾಡಬೇಕು ಅಲ್ಲದೇ ಅದೇ ಸ್ಥಳದಲ್ಲಿ ನೂತನ ಮರು ಮೂರ್ತಿ ಸ್ಥಾಪನೆಯಾಗಬೇಕು ಎಂದು ತಾಲೂಕಾ ಜಾಗತೀಕ ಲಿಂಗಾಯಿತ ಮಹಾಸಭಾಧ್ಯಕ್ಷ ಬಸಣ್ಣ ಗುಣಾರಿ ಹೇಳಿದರು.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದ ವಿಶ್ವಗುರು ಬಸವಣ್ಣನವರ ಮೂರ್ತಿ ಭಗ್ನಗೊಳಿಸಿದನ್ನು ವಿರೋಧಿಸಿ ಅಫಜಲಪುರ ಪಟ್ಟಣದಲ್ಲಿ ಬುಧವಾರದಂದು ಬಸವೇಶ್ವರರ ಅನ್ವಾಯಿಗಳು ಮತ್ತು ಹಿತ ಚಿಂತಕರು ವತಿಯಿಂದ ಬಸವೇಶ್ವರ ವೃತ್ತದಿಂದ ತಹಸೀಲ ಕಚೇರಿಯವರಿಗೆ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಚಂದ್ರಶೇಖರ ಕರಜಗಿ ಮಾತನಾಡಿ ಬಸವಣ್ಣನವರು ಜಗತ್ತಿಗೆ ಒಂದು ಉತ್ತಮ ಸಂದೇಶ ಸಾರಿದ್ದಾರೆ ಅವರು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಮಾನವೀಯ ಮೌಲ್ಯಗಳನ್ನು ಈ ನಾಡಿಗೆ ಕೊಟ್ಟಿದ್ದಾರೆ ಇಂತಹ ಸತ್ಯ ಶರಣರಿಗೆ ಅವಮಾನ ಮಾಡಿದ್ದು ಸರಿ ಅಲ್ಲ ಎಂದು ಅಸಮಾದಾನ ವ್ಯಕ್ತ ಪಡಿಸಿದ ಅವರು ಈ ಘಟನೆಗೆ ಕಾರಣರಾದವರನ್ನು ಶೀಘ್ರದಲ್ಲಿ ಸರಕಾರ ಅವರನ್ನು ಬಂಧಿಸಿ ಕಾನೂನಡಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು ಎಂದರು.

ಅಫಜಲಪುರ ಮಳೇಂದ್ರ ಸಂಸ್ಥಾನ ಹಿರೇಮಠದ ಶ್ರೀ ವಿಶ್ವರಾಧ್ಯ ಶಿವಾಚಾರ್ಯರು ಮಾತನಾಡಿ, ಬಸವಣ್ಣನವರು ಈ ಜಗತ್ತಿಗೆ ಮಾನಿವೀಯ ಮೌಲ್ಯಗಳನ್ನು ನೀಡಿದ್ದಾರೆ. ಸಮಾಜ ಪರಿವರ್ತಕರಾಗಿದ್ದಾರೆ, ಮೇರು ವ್ಯಕ್ತಿತ್ವದವರಾಗಿದ್ದಾರೆ, ಅಷ್ಟೇ ಅಲ್ಲ ಈ ನಾಡಿನ ಬೆಳಕಾಗಿದ್ದಾರೆ. ಇಂತಹ ಶರಣರಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಆ ಭಗವಂತ ಪರಿವರ್ತನೆ ಮಾಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದರು.

ಶರಣ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಬಸವರಾಜ ಚಾಂದಕವಟೆ, ದಲಿತ ಮುಖಂಡ ಮಹಾಂತೇಶ ಬಡದಾಳ, ಕರವೇ ತಾಲೂಕಾಧ್ಯಕ್ಷ ರಾಜಕುಮಾರ ಉಕ್ಕಲಿ, ಶರಣ ಸಾಹಿತ್ಯ ಪರಿಷತ್ತು ಬಡದಾಳ ವಲಯಧ್ಯಕ್ಷ ಸಿದ್ದು ಶಿವಣಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಿ.ವಿ.ಟಕ್ಕಳಕಿ, ಅಮೃತರಾವ ಪಾಟೀಲ, ಶಂಕರಾವ ಹುಲ್ಲೂರ, ಶಂಕ್ರೆಪ್ಪ ಮಣೂರ, ಸದಾಶಿವಾ ಮೇತ್ರೆ, ಮಹೇಶ ಆಲೇಗಾಂವ, ಸಿದ್ದಣಗೌಡ ಮಾಲಿ ಪಾಟೀಲ, ಭಗವಂತ ವಗ್ಗೆ, ಜಿ.ಎಸ್. ಬಾಳಿಕಾಯಿ, ಅಮರಸಿಂಗ ರಜಪೂತ, ಗೌತÀಮ್ಮ ಸಕ್ಕರಗಿ, ಸುಭಾಷ ತೇಲಿ, ರವಿ ಮೋಘಾ ಸೇರಿದಂತೆ ಇತರರಿದ್ದರು. ತಹಸೀಲ್ದಾರ ನಾಗಮ್ಮಾ.ಎಂ,ಕೆ. ಅವರಿಗೆ ಮನವಿಪತ್ರ ಸಲ್ಲಿಸಿದರು.