ಬಸವಣ್ಣನವರ ಪುತ್ಥಳಿ ಭಗ್ನ ಕಿಡಿಗೇಡಿಗಳ ಗಡಿಪಾರಿಗೆ ಆಗ್ರಹ

ಜೇವರ್ಗಿ:ನ.12: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದ ವಿಶ್ವಗುರು ಅಣ್ಣ ಬಸವಣ್ಣನವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು, ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಬಸವ ಕೇಂದ್ರದ ತಾಲೂಕು ಘಟಕದ ಅಧ್ಯಕ್ಷರಾದ ಶರಣಬಸವ ಕಲ್ಲಾ ನೇತೃತ್ವದಲ್ಲಿ ತಹಶೀಲ್ದಾರ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ವಿಶ್ವಗುರು ಅಣ್ಣ ಬಸವಣ್ಣನವರು ಲಿಂಗಾತರಿಗೆ ಧರ್ಮಗುರು ಮಾತ್ರ ಅಲ್ಲ, ನಮ್ಮ ನಿಮ್ಮೆಲ್ಲರ ಉಸಿರು ವಿಶ್ವಕ್ಕೆ ಮಾನವೀಯ ಮೌಲ್ಯಗಳನ್ನು ನೀಡಿದಂತಹ ಅಣ್ಣ ಬಸವಣ್ಣನವರು ಅಂತಹ ಮಹಾನ್ ವ್ಯಕ್ತಿಗಳ ಮೂರ್ತಿ ಭಗ್ನಗೊಳಿಸಿ ಅವಮಾನ ಮಾಡಿರುವುದು ಅತ್ಯಂತ ಖಂಡನೀಯ. ಒಂದು ವೇಳೆ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯವಹಿಸಿದರೆ ಮುಂದಿನ ದಿನಗಳಲ್ಲಿ ತಾಲೂಕು ಜಿಲ್ಲೆ, ರಾಜ್ಯಾದ್ಯಂತ ಬಸವ ಅಭಿಮಾನಿಗಳ ವತಿಯಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಸವ ಕೇಂದ್ರದ ತಾಲೂಕು ಘಟಕದ ಅಧ್ಯಕ್ಷರಾದ ಶರಣಬಸವ ಕಲ್ಲಾ ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಶಿವಣ್ಣಗೌಡ ಪಾಟೀಲ್ ಹಂಗರಿಗಿ, ಮಹಾಂತೇಶ ಸಾಹು ಹರವಾಳ, ಈರಣ್ಣ ಭೂತಪೂರ, ನೀಲಕಂಠ ಅವುಂಟಿ, ಬಸಣ್ಣಗೌಡ ಪಾಟೀಲ್ ಹರನೂರ, ಶುವುಕುಮಾರ ಕಲ್ಲಾ, ಗುರುಲಿಂಗಪ್ಪಗೌಡ ಮಾಲಿಪಾಟೀಲ್ , ಮಲ್ಲಿಕಾರ್ಜುನ ಪಾಟೀಲ್, ಬಂಡೇಪ್ಪ ಹಾಗರಿಗಿ, ಅಖಂಡು ಕಲ್ಲಾ, ಚಂದ್ರಶೇಖರ ತುಂಬಗಿ, ನಿಂಗಣ್ಣ ಹಳಿ ಮನಿ, ದೇವಾನಂದ ಡೂಗನಗಕರ್, ರಾಮಣ್ಣತೊನಸಳ್ಳಿಕರ್ ಇದ್ದರು.