ಬಸವಣ್ಣನವರ ಪುತ್ಥಳಿಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರಿಂದ ಪುಷ್ಪ ನಮನ

ಸೇಡಂ, ಮೇ,10: ಪಟ್ಟಣದಲ್ಲಿರುವ ವಿಶ್ವ ಗುರು ಬಸವಣ್ಣನವರ 891ನೇ ಜಯಂತೋತ್ಸವ ಪ್ರಯುಕ್ತ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆಯಲ್ಲಿ ಬಸವರಾಜ್ ಪಾಟೀಲ್ ಊಡಗಿ, ತಹಸಿಲ್ದಾರ್ ಶಿವಾನಂದ ಮೇತ್ರೆ, ಗ್ರೇಡ್ ಟು ತಹಸಿಲ್ದಾರ್ ಸಿದ್ದರಾಮ ನಾಚವಾರ,ಶಿವಕುಮಾರ್ ಪಾಟೀಲ್ ತೇಲ್ಕೂರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ,ಉಪ ತಹಶೀಲ್ದಾರ್ ಶರಣಗೌಡ ಪಾಟೀಲ್, ಚಂದ್ರಶೇಟ್ಟಿ ಬಂಗಾರ, ಸತೀಶ್ ಪೂಜಾರಿ, ಸತ್ತರ ನಾಡೇಪಲ್ಲಿ, ಜಗನ್ನಾಥ್ ಚಿಂತಪಳ್ಳಿ, ರಾಜಶೇಖರ ನಿಲಂಗಿ,ವಿರೇಶ್ ಹೂಗಾರ್, ಚನ್ನಬಸಪ್ಪ ಹಾಗರಗಿ,ಅಂಬರಾವ ಪಾಟೀಲ್,ವಿಶ್ವಾರಾಧ್ಯ ಇಂಜಳ್ಳಿ, ಗೋಪಾಲ್ ರಾಠೋಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.