ಬಸವಣ್ಣನವರ ತತ್ವ ಆದರ್ಶಗಳನ್ನು ಪಾಲಿಸಿ

ಕೋಲಾರ, ಮೇ.೩:ಅನಿಷ್ಟ ಪದ್ದತಿಗಳ ವಿರುದ್ದವೇ ಸಿಡಿದೆದ್ದು ಸಮಾಜ ಸುಧಾರಣೆಯಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡ ಮಹಾನ್ ಚೇತನ ಬಸವಣ್ಣ ಅವರ ತತ್ವ ಆದರ್ಶಗಳ ಇಂದಿನ ಸಮಾಜಕ್ಕೆ ಪ್ರಸ್ತುತ ಎಂದು ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತರಂಗದ ಸ್ಥಾಪನಾ ಅಧ್ಯಕ್ಷ ಡಾ:ಎಂ.ಚಂದ್ರಶೇಖರ್ ಹೇಳಿದರು.
ವಿಶ್ವಜ್ಞಾನಿ, ಜ್ಞಾನದ ಸಂಕೇತ ಬಾಬಾ ಸಾಹೇಬ್ ಡಾ.ಬಿ.ಆರ್‌ಅಂಬೇಡ್ಕರ್‌ರವರ ೧೩೨ನೇ ಜಯಂತಿ ಹಾಗೂ ವಿಶ್ವಗುರು, ಜಗಜ್ಯೋತಿ ಬಸವಣ್ಣನವರ ೮೯೨ನೇ ಹುಟ್ಟುಹಬ್ಬಗಳ ಸಾಂಕೇತಿಕ ಸಮಾರಂಭ ಆಚರಣೆ ಅಂಗವಾಗಿ, ಮುಳಬಾಗಿಲು ತಾಲೂಕಿನ ತಾಯಲೂರು ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ದಲಿತ ಕ್ರಿಯಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಕರ್ನಾಟಕದಲ್ಲಿಯೇ ಅತೀ ಎತ್ತರದ ಬಾಬಾ ಸಾಹೇಬರ ೨೫ ಅಡಿ ಎತ್ತರದ ಪುತ್ಥಳಿಗೆ ಮಾಲಾರ್ಪಣೆ ಮತ್ತು ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಈ ಪುತ್ಥಳಿಯು ಇನ್ನು ವಿದ್ಯುಕ್ತವಾಗಿ ಉದ್ಘಾಟನೆಯಾಗಲಿಲ್ಲ ವಿಧಾನಸಭಾ ಚುನಾವಣೆಯು ಮುಗಿದ ನಂತರ ದಿನಾಂಕವೊಂದು ಗುರುತು ಪಡಿಸಿ ಸಾವಿರಾರು ಜನಸಂಖ್ಯೆಯನ್ನು ಈ ಗ್ರಾಮದಲ್ಲಿ ಜಮಾಯಿಸಿ ಗಣ್ಯ ಅತೀಗಣಣ್ಯ ವ್ಯಕ್ತಿಗಳನ್ನು ಆಹ್ವಾನಿಸಿ ಬಹಳ ವಿಜೃಂಭಣೆಯಿಂದ ಸಮಾರಂಭವನ್ನು ಏರ್ಪಡಿಸಿ ವಿಶ್ವವಿಖ್ಯಾತಿಜ್ಞಾನಿಯ ಪುತ್ಥಳಿಯನ್ನು ಉದ್ಘಾಟಿಸುವುದು ಎಂದು ತಿಳಿಸಿದರು.
ತಾಯಾಲೂರು ಗ್ರಾಮದಲ್ಲಿ ಅಂಬೇಡ್ಕರ್ ಭವನಕ್ಕಾಗಿ ಒಂದು ಕೋಟಿ ಮಂಜೂರು ಮಾಡುವಂತೆ ಕರ್ನಾಟಕ ದಲಿತ ಕ್ರಿಯಾ ಸಮಿತಿಯು ಸುಮಾರು ೨೫ ವರ್ಷಗಳಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುತ್ತಿದೆ. ೮ ವರ್ಷಗಳ ಹಿಂದೆ ಭವನಕ್ಕೆ ಸ್ಥಳ ನಿಗಧಿಯಾಗಿದ್ದು, ಈ ಸ್ಥಳವು ಭವನಕ್ಕಾಗಿ ಸರ್ಕಾರ ಭರವಸೆಯಂತೆ ಹಣ ಬಿಡುಗಡೆ ಮಾಡಿ ಭವ್ಯ ಭವನವನ್ನು ಸರ್ಕಾರದ ವತಿಯಿಂದ ನಿರ್ಮಾಣ ಮಾಡಿಕೊಡುವಂತೆ ಈ ಸಮಿತಿಯ ಒತ್ತಾಯ ಮತ್ತು ಹೋರಾಟ ಮುಂದುವರೆಯುತ್ತಿದೆ.
ಅಧ್ಯಕ್ಷತೆಯನ್ನು ಮುಳಬಾಗಲು ತಾಲ್ಲೂಕು ಸಂಚಾಲಕ ವಿ.ಶ್ರೀನಿವಾಸ ವಹಿಸಿದ್ದರು. ಜಿಲ್ಲಾ ಸಂಚಾಲಕ ಬಡಮಾಕನಹಳ್ಳಿ ಆರ್.ಕೆಂಚಪ್ಪ ರಾಜ್ಯ ಸಂಘಟನಾ ಸಂಚಾಲಕ ದೊಮ್ಮಲೂರು ಡಿ.ಎಂ.ಗುರುಪ್ರಸಾದ್, ಹನುಮನಹಳ್ಳಿ ವಿ.ಸುರೇಶ, ತಾಯಾಲೂರು ಗ್ರಾ.ಪಂ.ಸದಸ್ಯ ಶರಣ್‌ಕುಮಾರ್, ಮಂಜುನಾಥ್, ಮುನಿತರ್‍ನಂ ಇತರರು ಇದ್ದರು.