ಬಸವಣ್ಣನವರ ತತ್ವಾದರ್ಶಗಳು ಎಂದೆಂದಿಗೂ ಸರ್ವಕಾಲಿಕ: ಶಿವಾನಂದ ಲಾಳಸಂಗಿ

ವಿಜಯಪುರ:ಎ.25: ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳ ಆಚರಣೆಯೊಂದೆ ಇಂದಿನ ಎಲ್ಲ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ಯುವ ಮುಖಂಡ ಶಿವಾನಂದ ಲಾಳಸಂಗಿ ಹೇಳಿದರು.
ಅವರು ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಬ್ಬರನ್ನು ಇವನಾರವ ಇವನಾರವ ಎನ್ನದೇ ಎಲ್ಲರನ್ನು ಇವನಮ್ಮವ ಇವನಮ್ಮವ ಎಂದು ನುಡಿದ ಮಹಾನ ವ್ಯಕ್ತಿ ಬಸವಣ್ಣನವರು ಎಂದು ಅವರು 12ನೇ ಶತಮಾನದಲ್ಲಿ ಸಮಾನತೆಯ ತತ್ವದ ಆಧಾರದ ಮೇಲೆ ಸಮಾಜವನ್ನು ಕಟ್ಟುವ ಕಾರ್ಯಮಾಡಿದ ಬಸವಣ್ಣನವರ ವಿಚಾರಗಳು ಎಂದೆಂದಿಗೂ ಪ್ರಸ್ತುತ ಎಂದರು.
ಕೇವಲ ಇಂತ ಮಹನೀಯರ ಜಯಂತ್ಯೋತ್ಸವನ್ನು ಆಚರಿಸಿದರೆ ಸಾಲದು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುದಕಣ್ಣ ಅವಟಿ, ಶಿವಶರಣ ಲಾಳಸಂಗಿ, ಅನೀಲ ಒಂಟಿ, ಗುರುರಾಜ ಪೂಜಾರಿ, ಶಿವಾನಂದ ದುದ್ದಗಿ, ನಿಲೇಶ ಹಿರೊಳ್ಳಿ, ಸುರೇಶ ಬಿರಾದಾರ, ಸಂತೋಷ ಮಸಳಿ, ಮಲ್ಲಿಕಾರ್ಜುನ ಶೆಟಗಾರ, ಸುನೀಲ ಚವ್ಹಾಣ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.