
ರಾಯಚೂರು,ಏ.೨೩- ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆ ಕೇಂದ್ರದಲ್ಲಿ ಇಂದು ೮೯೮ ನೇ ಬಸವ ಜಯಂತಿಯನ್ನು ಆಚರಿಸಲಾಯಿತು.
ಕಾಯಕ ಯೋಗಿ ಬಸವಣ್ಣನವರ ಭಾವಚಿತ್ರಕ್ಕೆ ಕಾರಾಗೃಹದ ಪ್ರಬಾರಿ ಅಧೀಕ್ಷಕರಾದ ಬಸವರಾಜ್ ಜಿ ಪಾಟೀಲ್ ಜೈಲರ್ ಅವರು ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುಂಡಲೀಕ್ ಟಿ ಕೆ ಜೈಲರ್,
ಶಾಮ್ ಬಿದರಿ ಸಹಾಯಕ ಜೈಲರ್ , ರಾಜಕುಮಾರ್ ದೊಡ್ಡಮನಿ,ಸಹಾಯಕ ಜೈಲರ್, ಶ್ರೀಮತಿ ಗಂಗವ್ವ ಹೆಡ್ ವಾರ್ಡರ್ ಶ್ರೀಮತಿ ಲಲಿತಾಬಾಯಿ ಹೆಡ್ ವಾರ್ಡರ್ ಗುರುರಾಜ್ ಕಾಮ ಹೆಡ್ ವಾರ್ಡರ್ ,ಮಲ್ಲಿಕಾರ್ಜುನ್ ಹೆಡ್ ವಾರ್ಡರ್ ,ಯಲ ಗೌಡ ಹೆಡ್ ವಾರ್ಡರ್ ಹಾಗೂ ಕಾರಾಗೃಹದ ಸಿಬ್ಬಂದಿಯವರು ಮತ್ತು ಬಂಧಿ ನಿವಾಸಿಗಳು ಮತ್ತು ಕಾರಾಗೃಹದ ಶಿಕ್ಷಕರಾದ ತಾಯರಾಜ್ ಮರ್ಚಟ್ಹಾಳ್ ಉಪಸ್ಥಿತರಿದ್ದರು.