ಬಸವಣ್ಣ(ನಂದೀಶ್ವರ) ದೇವರ ವಾರ್ಷಿಕ ರಥೋತ್ಸವ


ಅಮ್ಮಿನಬಾವಿ,ಏ.8: ಗ್ರಾಮದ ಪ್ಯಾಟಿ ಬಸವಣ್ಣ(ನಂದೀಶ್ವರ) ದೇವರ ವಾರ್ಷಿಕ ರಥೋತ್ಸವ ದವನದ ಹುಣ್ಣಿಮೆಯ ದಿನ ಇಳಿಹೊತ್ತಿನಲ್ಲಿ ಭಕ್ತರ ಭಕ್ತಿಯ ಜಯಘೋಷಗಳು ಹಾಗೂ ವಿವಿಧ ಜನಪದ ವಾದ್ಯ ಮೇಳಗಳ ಝೇಂಕಾರದ ಮಧ್ಯೆ ವಿಜೃಂಭಣೆಯಿಂದ ಜರುಗಿತು.
“ಹರಹರ ಮಹಾದೇವ…. ಓಂ ನಮಃ ಶಿವಾಯ.. ಶ್ರೀಬಸವೇಶ್ವರ ಮಹಾರಾಜಕೀ ಜೈ….ಶ್ರೀ ನಂದೀಶ್ವರ ಮಹಾರಾಜಕೀ ಜೈ…” ಎಂದೆಲ್ಲ ಭಕ್ತರು ಜಯಘೋಷ ಮಾಡುವ ಜೊತೆಗೆ ಉತ್ತತ್ತಿ ಮತ್ತು ಬಾಳೆಹಣ್ಣುಗಳನ್ನು ತೇರಿನತ್ತ ಎಸೆದು ಭಕ್ತಿ ಸಮರ್ಪಿಸಿದರು.
ನಂದಿಯ ಉತ್ಸವ ಮೂರ್ತಿಯನ್ನು ಇರಿಸಿದ ಪಲ್ಲಕ್ಕಿ ಮತ್ತು ನಂದೀಕೋಲು ಸಮೇತ ರಥೋತ್ಸವ ಗ್ರಾಮದ ಬಸ್ ನಿಲ್ದಾಣದವರೆಗೆ ಬಂದು ಮರಳಿ ದೇವಸ್ಥಾನದ ಆವರಣದಲ್ಲಿ ಮಂಗಲಗೊಂಡಿತು.

ದೇವರ ಹೇಳಿಕೆ : “ಗುಡುಗು, ಸಿಡ್ಲು ಭಾಳ ಐತ್ರಿಪೆÇೀ… ಮಳಿ-ಬೆಳಿ ಸಂಪ್ರಿಪೆÇೀ… ಉತ್ತರ ದಿಕ್ಕಿಗೆ ಅನ್ನ ಕಡಿಮಿ ಐತ್ರಿಪೆÇೀ….ಹುಟ್ಟಿದ ಮಕ್ಕಳಿಗೆ ಬಲ ಇಲ್ರಿಪೆÇೀ…” ಎಂದೆಲ್ಲ ರಥೋತ್ಸವದ ಕೊನೆಗೆ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಪೂಜಾರ ದೇವರ ಹೇಳಿಕೆ ನೀಡಿದರು.

ಶಾಸಕ ಅಮೃತ ದೇಸಾಯಿ, ಮಾಜಿ ಸಚಿವ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಎಂ.ಸಿ. ಹುಲ್ಲೂರ, ಅಪ್ಪಣ್ಣ ದೇಶಪಾಂಡೆ, ಸುರೇಂದ್ರ ದೇಸಾಯಿ, ಪಿ.ಎಸ್. ಪತ್ರಾವಳಿ, ಶಿವಪ್ಪ ಹಂಚಿನಾಳ, ಈರಯ್ಯ ಹಿರೇಮಠ, ಬಿ.ಸಿ. ಕೊಳ್ಳಿ ಇತರರು ಇದ್ದರು.
ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಅಮ್ಮಿನಬಾವಿ ಸುತ್ತಲಿನ ಗ್ರಾಮಗಳ ಭಕ್ತಗಣ ರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯ ಸೇವೆ ಸಲ್ಲಿಸಿದರು.