ಬಸವಣ್ಣನಂತೆ ಕನ್ನಡಕ್ಕಾಗಿ ದುಡಿದ ಚನ್ನಬಸವ ಪಟ್ಟದೇವರು: ಎಂ. ಎಸ್. ಮನೋಹರ್

ಬೀದರ :ಡಿ.23:ನಗರದ ಸಿ ಎಂ ಸಿ ಕಾಲೋನಿ ಮೈಲೂರನಲ್ಲಿ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತು ಜ್ಞಾನದೀಪ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ಕನ್ನಡದ ಕಟ್ಟಾಳು ನಡೆದಾಡುವ ದೇವರೆಂದೆ ಖ್ಯಾತರಾಗಿರುವ ಪೂಜ್ಯ ಡಾ|| ಚನ್ನಬಸವ ಪಟ್ಟದೇವರ 134 ನೇ ಜಯಂತಿಯನ್ನು ಆಚರಣೆ ಮಾಡಲಾಯಿತು. ಉದ್ಘಾಟನೆಃ ಯುವ ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷರಾದ ಗಣೇಶ ಬಿರಾದರ ಮಾಡಿದರು, ಆಶಯ ನುಡಿಯನ್ನು ಕನ್ನಡದ ಹಾಡುಗಳು ಹಾಡುವುದರ ಮೂಲಕ, ಹೊರಗಡೆ ಉರ್ದು ಬೋರ್ಡ ಹಾಕಿ ಒಳಗಡೆ ಕನ್ನಡವನ್ನು ಕಲಿಸಿದ ಕನ್ನಡ ಕಟ್ಟಾಳು ಪಟ್ಟದೇವರು ಶಾಲೆಯನ್ನು ಕಲಿಯಲು ಬಂದಿರುವ ವಿದ್ಯಾರ್ಥಿಗ ದಾಸೋಹಕ್ಕಾಗಿ ಮನೆ ಮನೆಗೆ ಹೊಗಿ ಬಿಕ್ಷೆಯನ್ನು ಬೇಡಿ ವಿದ್ಯಾರ್ಥಿಗಳಿಗೆ ಅನ್ನನೀಡಿದರು. ಕನ್ನಡದ ಅನ್ನದಾತ ಅಕ್ಷರದಾತನ ಜೀವನ ಚರಿತ್ರೆಯನ್ನು ರಾಜ್ಯ ಸರ್ಕಾರ ಶಾಲಾಕಾಲೇಜು, ಪದವಿ ವಿದ್ಯಾರ್ಥಿಗಳಿಗೆ ಪಠ್ಯವಿಷಯವಾಗಿ ಇಡಬೇಕು. ಪಟ್ಟದೇವರ ಹೆಸರಲ್ಲಿ ದತ್ತಿ ಪ್ರಶಸ್ತಿಯನ್ನು ಸರ್ಕಾರ ಸ್ಥಾಪನೆ ಮಾಡಬೇಕು. ಮುಖ್ಯ ಅತಿಥಿಗಳಾಗಿ ವಿಶ್ವ ಕನ್ನಡಿಗರ ಸಂಸ್ಥೆ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಮಾತನಾಡಿ ಕನ್ನಡದ ನೆಲದವರಾದ ನಾವು ಕನ್ನಡದ ಕುಲದವರಾಗಿದ್ದೇವೆ. ಕನ್ನಡವೇ ನಮ್ಮ ಆಡುಭಾಷೆ ಆಡಳಿತ ಭಾಷೆ ಹೋರಾಟಭಾಷೆ ವಿಶ್ವ ಭಾಷೆ, ಸಾಹಿತ್ಯ ಸಂಸ್ಕøತಿ ಏಕತೆ ಭಾವೈಕ್ಯತೆಯ ಭಾಷೆಯಾಗಿದೆ. ಕನ್ನಡ ಶಾಲಾ ಕಾಲೇಜುಗಳು ನಮ್ಮ ಕರ್ನಾಟಕದ ಗಡಿಭಾಗದಲ್ಲಿ ಕನ್ನಡವನ್ನು ಕಲಿಸಲು ಟೊಂಕಕಟ್ಟಿ ನಿಲ್ಲಬೇಕು. ಗಡಿಭಾಗದ ಶಾಲಾಕಾಲೇಜು ಪ್ರಗತಿಗೆ ಸರ್ಕಾರ ವಿಶೇಷವಾದ ಯೋಜನೆಗಳು ರೂಪಿಸಿ ಜಾರಿಗೊಳಿಸಬೇಕು. ಅಧ್ಯಕ್ಷತೆಯನ್ನು ಶಾಲೇಯ ಮುಖ್ಯಗುರುಗಳಾದ ಶ್ರೀ ಶೇಖರ ಬಬಲಾದೆ ವಹಿಸಿ, ಜೀವ ಜಗತ್ತಿನಲ್ಲಿ ಕನ್ನಡ ಭಾಷೆ ತನ್ನದೆಯಾದ ಲಿಪಿಯನ್ನು ಹೊಂದಿರುವ ಶ್ರೀಮಂತ ಭಾಷೆಯಾಗಿದೆ.ಭವಿಷ್ಯದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿವ ಜವಬ್ದಾರಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳ ಕೈಯಲ್ಲಿದೆ. ನಿವೃತ್ತ ಶಿಕ್ಷಕ ಬಾಪು ಮಡಿಕೆ ವಿದ್ಯಾರ್ಥಿಗಳಿಗೆ ಕನ್ನಡಾಕ್ಷರ ಜ್ಞಾನವನ್ನು ಬೋಧಿಸಿದರು. ಯುವ ಉದ್ದಿಮೆದಾರ ಬಸವರಾಜ ಬಿರಾದರ ಸಾಹಿತ್ಯ ಪರಿಷತ್ತು ಚಿಟಗುಪ್ಪ ಯುವ ಘಟಕದ ಅಧ್ಯಕ್ಷರಾದ ದಿಲೀಪ್ ಪಸಾದ ಉಪಸ್ಥರಿದ್ದರು. ಸಿದ್ದಾರೊಡ ಭಾಲ್ಕಿ ಸ್ವಾಗತ, ಶಿವಕುಮಾರ ಚನ್ನಶೇಟ್ಟಿ ನಿರೂಪಣೆ ಜಗನ್ನಾಥ ಶಿವಯೋಗಿ ವಂದನಾರ್ಪಣಯನ್ನು ಮಾಡಿದರು.