ಬಸವಣಪ್ಪ ನೂಲಾರವರಿಗೆ ಕೃಷಿ ಭೂಷಣ ಪ್ರಶಸ್ತಿ ಪ್ರದಾನ ಆರೋಗ್ಯಕ್ಕಾಗಿ ರಸಾಯನಿಕ ರಹಿತ ದವಸ ಧಾನ್ಯ ಬೆಳೆಸಬೇಕು:ಸಿದ್ಧಲಿಂಗ ಶಿವಾಚಾರ್ಯರು

ಬೀದರ:ಮೇ.16:ಭಾರತೀಯರು ಕೃಷಿಯಿಂದ ವಿಮುಖವಾಗುತ್ತಿರುವುದರಿಂದಲೇ ಭಾರತದ ಹಿನ್ನೆಡೆಗೆ ಕಾರಣವಾಗುತ್ತಿದೆ. ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಇದನ್ನು ಬಲಗೊಳಿಸಬೇಕಾದುದು ತುರ್ತಾಗಿದೆ. ದುರಂತವೆಂದರೆ ಸರಕಾರ ಮತ್ತು ಜನತೆ ಈ ಕ್ಷೇತ್ರದತ್ತ ಒಲವು ಕಡಿಮೆಗೊಳಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಭಾರತದಲ್ಲಿ ನಗರೀಕರಣ ಹೆಚ್ಚಾಗಿ ಹಳ್ಳಿ ಸಂಸ್ಕøತಿ ಮತ್ತು ಕೃಷಿ ಸಂಸ್ಕೃತಿ ಸಂಪೂರ್ಣವಾಗಿ ನಾಶವಾಗುತ್ತದೆ. ಇದು ನಿರುದ್ಯೋಗಕ್ಕೂ ಕಾರಣವಾಗಿ ಅಧೋಗತಿಗಿಳಿಯುತ್ತದೆ. ಹಾಗಾಗಿ ಇಲ್ಲಿನ ಕೃಷಿಯನ್ನು ಉತ್ತೇಜಿಸಿ ಆಕರ್ಷಣೀಯಗೊಳಿಸಿದರೆ ಮಾತ್ರ ಭಾರತದ ಸುವರ್ಣಯುಗದ ಕನಸು ನನಗಾಗಿಸಲು ಸಾಧ್ಯ ಎಂದು ಸದಲಾಪೂರ ಹಿರೇಮಠದ ಪೀಠಾಧೀಶರಾದ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು. ಅವರು ಹುಮನಾಬಾದ ತಾಲ್ಲೂಕಿನ ಲಾಲಧರಿ ಆಶ್ರಮದಲ್ಲಿ ಹಮ್ಮಿಕೊಂಡ ಲಾಲಧರಿ ಶ್ರೀಗಳ 23ನೆಯಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ಮುಂದುವರೆದು ಇಲ್ಲಿನ ಸುಶಿಕ್ಷಿತರು ಮೇಲ್ವರ್ಗದವರು ಕೃಷಿಯಲ್ಲಿ ಅನಾಸಕ್ತರಾಗುತ್ತಿದ್ದಾರೆ. ಇದಕ್ಕಾಗಿ ಕೃಷಿ ಕ್ಷೇತ್ರಕ್ಕೆ ಎಲ್ಲರೂ ಬರುವಂತೆ ಆಕರ್ಷಣೀಯವಾಗಿಸಬೇಕಾಗಿದೆ. ಆಗಲೇ ಭಾರತದ ಅಭಿವೃದ್ಧಿ ಆಗುತ್ತದೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಯರಬಾಗದ ವೇದಮೂರ್ತಿ ಚೆನ್ನವೀರಯ್ಯ ಸ್ವಾಮಿಗಳು ಮಾತನಾಡುತ್ತಾ, ಯಾರದೇ ಸಹಕಾರವಿಲ್ಲದಿದ್ದರೂ ಸ್ವಯಂ ಆಗಿ ಶ್ರಮಪಟ್ಟು ಕೆಲವರು ಕೃಷಿ ಕ್ಷೇತ್ರದಲ್ಲಿ ಈಗಲೂ ಅದ್ಭುತ ಸಾಧನೆ ಮಾಡುತ್ತಿದ್ದಾರೆ. ಅವರನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಕೆಲಸ ಮಾಡಬೇಕು, ಅವರ ಅನುಭವ ಸದ್ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಹಜ ಕೃಷಿ ತಮ್ಮ ಜಮೀನಿನಲ್ಲಿ ಆರಂಭಿಸಿ ಬಸವಣಪ್ಪ ನೂಲಾರವರು ಕಳೆದ ಮೂರು ದಶಕಗಳಿಂದ ರಸಾಯನಿಕ ರಹಿತವಾಗಿ ರಾಜ್ಯದ ಗಮನ ಸೆಳೆಯುವಂತೆ ಯಶಸ್ವಿಯಾಗಿ ಬೆಳೆ ಬೆಳೆಸುತ್ತಿದ್ದಾರೆ. ಇದರಿಂದ ತಾವು ರೋಗಮುಕ್ತರಾಗಿರುವುದಲ್ಲದೆ ಇನ್ನೊಬ್ಬರಿಗೂ ರೋಗಮುಕ್ತರನ್ನಾಗಿಸುತ್ತಿದ್ದಾರೆ. ಇವರ ಉತ್ಪನ್ನಗಳಿಗೆ ರೋಗ ನಿರೋಧಕ ಶಕ್ತಿಯಿದೆ. ಹೀಗಾಗಿ ಜನ ಮುಂಗಡವಾಗಿ ಇವರಲ್ಲಿ ಬುಕ್ ಮಾಡಿ ಖರೀದಿಸುತ್ತಿದ್ದಾರೆ. ತಮ್ಮ ಉತ್ಪನ್ನಗಳಿಗೆ ಇವರು ಬಂಗಾರದ ಬೆಲೆ ತಂದುಕೊಂಡಿದ್ದಾರೆ. ಇವರ ಕೃಷಿ ಸಾಧನೆ ಅನುಸರಣಾಯೋಗ್ಯವಾಗಿದೆ. ಇವರನ್ನು ಗುರುತಿಸಿ “ಕೃಷಿ ಭೂಷಣ ಪ್ರಶಸ್ತಿ” ನೀಡುತ್ತಿರುವುದು ಪ್ರೇರಣಾದಾಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವೇದಮೂರ್ತಿ ಅನೀಲಕುಮಾರ ಸ್ವಾಮಿಗಳು ಮಾತನಾಡುತ್ತಾ ಸರಕಾರದ “ಬಿಟ್ಟಿ” ಯೋಜನೆಗಳಿಂದಾಗಿಯೇ ಜನರು ಸೋಮಾರಿತನ ಹೆಚ್ಚಾಗಿ ಜನ ಮತ್ತು ಸರಕಾರ ದಿವಾಳಿಯಾಗುತ್ತಿದೆ. ಜನರಿಗೆ ಪುಕ್ಕಟೆಯಾಗಿ ಕೊಡುವುದನ್ನು ನಿಲ್ಲಿಸಿ ಕೃಷಿ ಉಪಕರಣಗಳು ಉಚಿತವಾಗಿ ನೀಡಬೇಕು, ನೀರಾವರಿ ಯೋಜನೆ ಹೆಚ್ಚಿಸಬೇಕು, ಬೆಂಬಲ ಬೆಲೆ ನೀಡಬೇಕು. ಮಧ್ಯವರ್ತಿಗಳಿಗೆ ಕಡಿವಾಣ ಹಾಕಿ ಸರಕಾರವೇ ನೇರವಾಗಿ ಕೃಷಿ ಉತ್ಪನ್ನ ಖರೀದಿಸಿ ವಿತರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಗೋಂಧಳಿ ಸಮಾಜದ ಮುಖಂಡರಾದ ಸಿದ್ಧರಾಮ ವಾಗ್ಮೋರೆಯವರು ಮಾತನಾಡುತ್ತಾ, ಲಾಲಧರಿ ಶ್ರೀಗಳು ಒಕ್ಕಲಿಗರನ್ನು ಅತೀವವಾಗಿ ಪ್ರೀತಿಸುತ್ತಿದ್ದರು, ಪೆÇ್ರೀತ್ಸಾಹಿಸುತ್ತಿದ್ದರು, ಪ್ರೇರೇಪಿಸುತ್ತಿದ್ದರು. ಅವರನ್ನು ಅನುಸರಿಸುವವರು ಪ್ರಗತಿ ಪಥದಲ್ಲಿ ಮತ್ತು ಸತ್ಪಥದಲ್ಲಿ ಮುನ್ನಡೆದಿದ್ದಾರೆ. ಅವರ ಆಶಯಗಳನ್ನು ಈಡೇರಿಸುವ ಸಂಕಲ್ಪ ಮಾಡಿ ಒಕ್ಕಲುತನ ಉತ್ತೇಜಿಸುವದಕ್ಕಾಗಿ ಇಲ್ಲಿ ಕೃಷಿ ಕ್ಷೇತ್ರದಲ್ಲಿ ಪ್ರಶಸ್ತಿ ವಿತರಿಸುವ ಕಾರ್ಯ ಮಾಡುತ್ತಿರುವದು ಶ್ಲಾಘ್ಯವಾದುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿಗಳಾದ ಎಚ್.ಕಾಶಿನಾಥರೆಡ್ಡಿಯವರು ಮಾತನಾಡುತಾ,?? ಭಾರತದ ಕೃಷಿಗೆ ಹಿಂದಿನಿಂದÀಲೂ ಉತ್ತಮವಾದ ಸ್ಥಾನಮಾನವಿದೆ. ಇಲ್ಲಿನ ಋಷಿಮುನಿಗಳು ಇದಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ಕೌಟಿಲ್ಯ, ಸರ್ವಜ್ಞರಂತಹ ಜ್ಞಾನಿಗಳು ಕೂಡ ಕೃಷಿ ಮಹತ್ವ ಎತ್ತಿ ಹಿಡಿದಿದ್ದಾರೆ. ಲಾಲಬಹಾದ್ದೂರ ಶಾಸ್ತ್ರಿಯವರು ಕೂಡಾ ಜೈ ಜವಾನ್, ಜೈ ಕಿಸಾನ್ ಎಂದು ಹೇಳಿ ಇದರ ಅತ್ಯವಶ್ಯಕತೆ ಮನವರಿಕೆ ಮಾಡಿದ್ದಾರೆ. ಭಾರತ ಪ್ರಗತಿ ಹೊಂದಬೇಕಾದರೆ ಇಂತಹ ಮಹಾನುಭಾವರ ಕೃಷಿ ಆಶಯಗಳನ್ನು ಅನುಷ್ಠಾನಗೊಳಿಸಬೇಕಾದುದು ಅಗತ್ಯವಾಗಿದೆ ಎಂದರು. ಸಾಹಿತಿಗಳಾದ ಬಸವರಾಜ ದಯಾಸಾಗರ ಅವರು ಮಾತನಾಡುತ್ತ, ಅಮೇರಿಕಾದಲ್ಲಿ ಅಗ್ರ್ಯಾನಿಕ್ ಮತ್ತು ನಾನ್ ಆಗ್ರ್ಯಾನಿಕ್ ಪೆÇ್ರಡಕ್ಟ್ಗಳನ್ನು ಮಾರಾಟ ಮಳಿಗೆಗಳಲ್ಲಿ ಪ್ರತ್ಯೇಕವಾಗಿ ಮಾರಾಟಮಾಡುತ್ತಾರೆ. ಅಲ್ಲಿನ ಜನ ನಾನ್ ಆಗ್ರ್ಯಾನಿಕ್ ಪೆÇ್ರಡಕ್ಟ್ಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಜೊತೆಗೆ ಅಲ್ಲಿನವರು ಅಲೋಪಥಿಕ್‍ನಿಂದ ಆಯುರ್ವೇದಿಕ್ ಚಿಕಿತ್ಸಾ ಪದ್ಧತಿಯತ್ತ ವಾಲಿ ಆರೋಗ್ಯಕ್ಕೆ ಮರಳುತ್ತ್ತಿದ್ದಾರೆ. ಆದರೆ ಭಾರತೀಯರು ಆಗ್ರ್ಯಾನಿಕ್ ಮತ್ತು ಆಲೋಪಥಿಕ್‍ದತ್ತ ವಾಲಿ ಅನಾರೋಗ್ಯಕ್ಕೊಳಪಡುತ್ತಿರುವುದು ದುರಂತವಾಗಿದೆ ಎಂದರು.

ಹಿರಿಯ ನ್ಯಾಯವಾದಿಗಳಾದ ವೆಂಕಟರೆಡ್ಡಿ ಪೆÇೀಶೆಟ್ಟಿಯವರು ಮಾತನಾಡುತ್ತಾ, ಸರಕಾರ ಧೂಮಪಾನ, ಮದ್ಯಪಾನ ಮಾಡಬಾರದು, ಗುಟ್ಕಾ ತಿನ್ನಬಾರದು, ಮಟ್ಕಾ ಆಡಬಾರದು ಎಂದು ಪ್ರಚಾರ ಮಾಡುತ್ತಿದೆ. ಆದರೆ ನಿಭರ್ಂಧಿಸುತ್ತಿಲ್ಲ. ಈ ದ್ವಂದ್ವದಿಂದ ಹೊರಬಂದು, ಕೆಟ್ಟವುಗಳನ್ನೆಲ್ಲ ನಿಭರ್ಂದಿಸುತ್ತಾ ಹೋಗಬೇಕು ಎಂದರು. ಪ್ರಶಸ್ತಿ ಸ್ವೀಕರಿಸಿದ ಬಸವಣಪ್ಪ ನೂಲಾರವರು ಮಾತನಾಡುತ್ತಾ ಭಾರತೀಯರು ರೋಗಮುಕ್ತರಾಗಬೇಕಾದರೆ ರಸಾಯನಿಕ ರಹಿತ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು, ಕೃಷಿಯಲ್ಲಿ ಶ್ರಮವಹಿಸಿ ದುಡಿಯಬೇಕು. ಇಂದಿಗೂ ಅಂಬಾಭವಾನಿ ನೈವೇದ್ಯವಾಗಿ ನವಣಿಯ ಅನ್ನ ಭೋಗವಾಗಿ ಸಮರ್ಪಿಸಲಾಗುತ್ತದೆ. ಹಾರಕೂಡದ ಚೆನ್ನಬಸವ ಶಿವಯೋಗಿಗಳು ತಮ್ಮ ಬಿನ್ನಹದಲ್ಲಿ ನವಣಿ ಅನ್ನ ಹಾಲು, ತುಪ್ಪವನ್ನೇ ಕಡ್ಡಾಯವಾಗಿ ಬಳಸುತ್ತಿದ್ದರು. ಹಾಗಾಗಿಯೇ ಅವರು ದೃಢಕಾಯರಾಗಿದ್ದರು. ಹಾಗಾಗಿ ಎಲ್ಲರೂ ಸಿರಿಧಾನ್ಯಗಳ ಮಹತ್ವವನ್ನರಿತು ಬಳಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಠ್ಠಲ್ ಮಕೈ, ಸಂಜೀವರೆಡ್ಡಿ ಮೇಲಿನಮನಿ, ನಾಗರಾಜ ಮಠಪತಿ, ವೆಂಕಟರೆಡ್ಡಿ ಚಿಂತಕೋಟಾ, ಮತ್ತಿತರರಿದ್ದರು