ಬಸವಜಯಂತಿ ; ವಚನಗಳ ಕಂಠಪಾಠ, ರಂಗೋಲಿ ಸ್ಪರ್ಧೆ

ಸಂಜೆವಾಣಿ ವಾರ್ತೆ

ಚಿತ್ರದುರ್ಗ ಮೇ – 10 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಬಸವ ಜಯಂತಿ ನಿಮಿತ್ತ ಬಸವಾದಿ ಶರಣರ ವೇಷಭೂಷಣ, ವಚನಗಳ ಕಂಠಪಾಠ, ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಇದಕ್ಕು ಮುನ್ನ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ. ಬಸವ ಪ್ರಭು ಸ್ವಾಮಿಗಳು ಮಾತನಾಡಿ, ಬಸವಣ್ಣನವರ ವಿಚಾರಗಳನ್ನು ಪ್ರಪಂಚದಾದ್ಯಂತ ಪ್ರಸರಿಸಿದ್ದು ಶ್ರೀ ಮುರುಘಾಮಠ. ಬಸವಣ್ಣನವರು ಸಮಾನತೆಗೆ ಹೆಚ್ಚಿನ ಮಹತ್ವ ಕೊಟ್ಟರು. ಬಸವಣ್ಣನವರ ಜಯಂತಿಯಂದು ಈ ಸ್ಪರ್ಧೆಗಳು ಅನುಕೂಲಕರವಾದ ವಾತಾವರಣ ಸೃಷ್ಟಿಸುತ್ತವೆ ಎಂದರು.ಚಿದರವಳ್ಳಿ ಪಾರಮಾರ್ಥ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಮುರುಘಾಮಠವು ಪಾರಂಪರಿಕ ಮಠವಾಗದೆ, ಧಾರ್ಮಿಕ ಮಠವಾಗದೆ, ಬಸವಾದಿ ಪ್ರಮಥರ ತತ್ತ÷್ವಸಿದ್ಧಾಂತಗಳನ್ನು ಅನೂಚಾನವಾಗಿ ಮುಂದುವರಿಸಿಕೊAಡು ಬರುತ್ತಿದೆ. ಸ್ಪರ್ಧೆಗಳು ಮನುಷ್ಯನ ಮನಸ್ಸನ್ನು ಅರಳಿಸುವ ಕೆಲಸ ಮಾಡುತ್ತವೆ. ಪ್ರತಿಭೆಗಳು ಅಕ್ಷಯವಾಗಬೇಕೆಂಬ ಉದ್ದೇಶ ನಮ್ಮದಾಗಬೇಕೆಂದರು.ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಸರ್ವ ಶರಣರ ನಡೆ ನುಡಿಗಳನ್ನು ಅರ್ಥೈಸುವ ಸಲುವಾಗಿ ಹಾಗೂ ಬಸವಣ್ಣನವರ ಜಯಂತಿ ಅಂಗವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಸವಣ್ಣದೇವರ ಮಠದಲ್ಲಿ ಒಂದು ಸಾವಿರ ವಚನಗಳನ್ನು ಕಂಠಪಾಠ ಮಾಡಿದರೆ ಒಂದು ಲಕ್ಷ ರೂ. ಬಹುಮಾನ ಇಟ್ಟಿದ್ದಾರೆ. ಅಲ್ಲಿಗೂ ಕೂಡ ತಾವು ಹೋಗಬಹುದು ಎಂದರು.