ಬಸವಕುಮಾರ ಪಾಟೀಲಗೆ ಲಿಂಗಾನಂದಶ್ರೀ ಪ್ರಶಸ್ತಿ

????????????????????????????????????

ಬೀದರ್: ಸೆ.12:ಬಸವ ತತ್ವ ಪ್ರಸಾರಕ್ಕೆ ನೀಡಿದ ಕೊಡುಗೆಗಾಗಿ ಇಲ್ಲಿಯ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಅವರಿಗೆ ಬೆಳಗಾವಿ ಜಿಲ್ಲೆಯ ಬೈಲೂರಿನ ನಿಷ್ಕಲ ಮಂಟಪದ ಲಿಂಗಾನಂದಶ್ರೀ ಪ್ರಶಸ್ತಿ ದೊರೆತಿದೆ.

ನಿಷ್ಕಲ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಬಸವಕುಮಾರ ಪಾಟೀಲ ಬಸವ ನಿಷ್ಠೆಗೆ ಹೆಸರಾಗಿದ್ದಾರೆ. ಜಗದ್ಗುರು ಲಿಂಗಾನಂದ ಸ್ವಾಮೀಜಿ ಹಾಗೂ ಜಗದ್ಗುರು ಮಾತೆ ಮಹಾದೇವಿ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಬಸವ ದಳವನ್ನು ಗ್ರಾಮ, ಗ್ರಾಮಗಳಿಗೂ ವಿಸ್ತರಿಸಿದ ಹಿರಿಮೆ ಅವರದ್ದಾಗಿದೆ.

ಸಮಾಜ ಪರ ಚಿಂತಕರೂ ಆಗಿರುವ ಅವರು ಧಾರ್ಮಿಕ ಕಾರ್ಯಗಳ ಜತೆಗೆ

ಸಾಮಾಜಿಕ ಚಟುವಟಿಕೆಗಳಲ್ಲಿ ಸಹ ಸಕ್ರೀಯರಾಗಿದ್ದಾರೆ. 2010 ರಿಂದ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರಲ್ಲಿ ಸಾಧಿಸುವ ಛಲ ಬೆಳೆಸುತ್ತಿದ್ದಾರೆ.

ಸಮಾರಂಭದಲ್ಲಿ ಬೈಲೂರು ನಿಷ್ಕಲ ಮಂಟಪ ಹಾಗೂ ಮುಂಡರಗಿಯ ತೋಂಟದಾರ್ಯ ಮಠದ ಪೀಠಾಧಿಪತಿ ನಿಜಗುಣಾನಂದ ಸ್ವಾಮೀಜಿ, ಕಿತ್ತೂರು ಶಾಸಕ ಬಾಳಾಸಾಹೇಬ ಪಾಟೀಲ, ಚಿಕ್ಕಮಂಗಳೂರಿನ ಬಸವ ತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ, ಸಾಹಿತಿ ಡಾ. ಎಸ್.ಆರ್. ಗುಂಜಾಳ್ ಮತ್ತಿತರರು ಇದ್ದರು.