ಬಸವಕಲ್ಯಾಣ ಮಾಲಾ ಕುಟುಂಬದ ಆಸ್ತಿ ರೂ 7 ಕೋಟಿ

ಬೀದರ.ಮಾ.25: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಮಾಲಾ ನಾರಾಯಣರಾವ್ ಉದ್ಯೋಗದ ಕಾಲಂನಲ್ಲಿ ‘ಕೃಷಿ ಮತ್ತು ಸಮಾಜ ಸೇವೆ’ ಎಂದು ನಮೂದಿಸಿದ್ದಾರೆ. ಇವರು ಹಾಗೂ ಇಬ್ಬರು ಪುತ್ರರು ಸೇರಿ ಒಟ್ಟಾರೆ ಆಸ್ತಿ ₹7.10 ಕೋಟಿ ಇದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬಸವಕಲ್ಯಾಣದ ಆಯಕ್ಸಿಸ್‌ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ₹50 ಸಾವಿರ, ಬೆಂಗಳೂರಿನ ಕೆನರಾ ಬ್ಯಾಂಕಿನಲ್ಲಿ ₹15 ಲಕ್ಷ, ಕೆನರಾ ಬ್ಯಾಂಕ್‌ ಇನ್ನೊಂದು ಖಾತೆಯಲ್ಲಿ ₹2.60 ಲಕ್ಷ ನಗದು ಇಟ್ಟಿದ್ದಾರೆ. ₹5 ಲಕ್ಷ ಮೊತ್ತವನ್ನು ಎಲ್‌ಐಸಿ ಯಲ್ಲಿ ಹೂಡಿಕೆ ಮಾಡಿದ್ದಾರೆ. ಕೆನರಾ ಬ್ಯಾಂಕ್‌ ಹಾಗೂ ಸ್ಟೇಟ್‌ ಬ್ಯಾಂಕ್‌ ಇಂಡಿಯಾದ ಬೆಂಗಳೂರು ಶಾಖೆಗಳಲ್ಲಿ ಹಿರಿಯ ಪುತ್ರ ಗೌತಮ ಹೆಸರಲ್ಲಿ ₹6.50 ಲಕ್ಷ ಹಾಗೂ ಕಿರಿಯ ಪುತ್ರ ರಾಹುಲ್‌ ಹೆಸರಿನಲ್ಲಿ ₹70 ಸಾವಿರ ಇದೆ.

ಬೀದರ್‌ ತಾಲ್ಲೂಕಿನ ನಿಜಾಪುರ ಕೊಳಾರದಲ್ಲಿ 4 ಎಕರೆ 36 ಗುಂಟೆ ಕೃಷಿ ಜಮೀನು, ಗೋರನಳ್ಳಿಯಲ್ಲಿ ಗೌತಮ ಹೆಸರಲ್ಲಿ 2.38 ಎಕರೆ ಜಮೀನು ಹಾಗೂ ರಾಹುಲ್‌ ಹೆಸರಲ್ಲಿ ಬೀದರ್‌ ತಾಲ್ಲೂಕಿನ ಚಿಲ್ಲರ್ಗಿಯಲ್ಲಿ 2.10 ಎಕರೆ ಕೃಷಿ ಜಮೀನು ಇದೆ. ಇವುಗಳ ಮಾರುಕಟ್ಟೆ ಒಟ್ಟಾರೆ ಮೌಲ್ಯ ₹2.10 ಕೋಟಿ ಆಗಲಿದೆ ಎಂದು ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬೀದರ್‌ನ ಕೆಎಚ್‌ಬಿ ಕಾಲೊನಿ, ಯಾದಗಿರಿಯಲ್ಲಿ 1200 ಅಡಿಯ ನಿವೇ ಶನಗಳು ಇವೆ.