ಬಸವಕಲ್ಯಾಣ ಗ್ರಾಮೀಣ ವೈದ್ಯರ ಸಭೆ: ಸಂಘಟಿತರಾಗಲು ಕರೆ

ಬಸವಕಲ್ಯಾಣ,ಜು.18- ಗ್ರಾಮೀಣ ವೈದ್ಯರು ಸಂಘಟಿತರಾಗಿ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಅಸ್ಥಿತ್ವಕ್ಕೆ ತರಲಾದ ಸಂಘಟನೆಯನ್ನು ಬಲಪಡಿಸಲು ಸದಸ್ಯತ್ವ ಅಭಿಯಾನ ಕೈಗೊಳ್ಳುವಂತೆ ಅಮೃತ ಸಿ.ಪಾಟೀಲ ಅವರು ಕರೆ ನೀಡಿದರು.
ಬಸವಕಲ್ಯಾಣ ಪಟ್ಟಣದಲ್ಲಿ ಕರೆದ ಗ್ರಾಮೀಣ ವೈದ್ಯರ ಸಭೆಯಲ್ಲಿ
ಮಾತನಾಡಿದ ಅವರು, ತಮ್ಮ ಕುಂದುಕೊರತೆಗಳ ಪರಿಹಾರ ಕಂಡುಕೊಳ್ಳಲು ಕಲ್ಯಾಣ ಕರ್ನಾಟಕ ಗ್ರಾಮೀಣ ವೈದ್ಯರ ಅಭಿವೃದ್ಧಿ ಸಂಘವನ್ನು ಅಸ್ಥಿತ್ವಕ್ಕೆ ತರಲಾಗಿದ್ದು, ಈ ಸಂಘಟನೆಗೆ ಹೆಚ್ಚಿನ ಸದಸ್ಯತ್ವ ಪಡೆಯಲು ಹಳ್ಳಿಹಳ್ಳಿಗಳಿಗೆ ಭೇಟಿ ನೀಡುವಂತೆ ಅವರು ಸಲಹೆ ನೀಡಿದರು.
ಸಂಘದ ಬಸವಕಲ್ಯಾಣ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಡಾ.ಎಸ್.ಕೆ.ಬಿರಾದಾರ, ಉಪಾಧ್ಯಕ್ಷರಾಗಿ ಡಾ.ಶಫೀಯೋದ್ದೀನ್, ಪ್ರಧಾನ ಕಾರ್ಯದರ್ಶಿಗಳಾಗಿ ಡಾ.ಅನೀಲಕುಮಾರ ಅವರನ್ನು ಸರ್ವಸಮ್ಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸಂಘಟನೆಯ ಗೌರವ ಅಧ್ಯಕ್ಷರಾದ ಬಸವರಾಜ ಮರತೂರ, ಉಪಾಧ್ಯಕ್ಷರಾದ ಮೋಹನ ಪವ್ಹಾರ್, ಮಲ್ಲಿಕಾರ್ಜುನ ಕಲಕೋರ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಜಮಾದಾರ, ಸಂಘಟನಾ ಕಾರ್ಯದರ್ಶಿ ಪ್ರಭುಲಿಂಗ ಸುತ್ತಾರ, ಸಂಚಾಲಕರಾದ ಆನಂದ ಪಾಟೀಲ, ಸಹ ಸಂಘಟನಾ ಕಾರ್ಯದರ್ಶಿ ರವಿ ಒಂಟಿ, ಕಾಳಗಿ ತಾಲೂಕು ಅಧ್ಯಕ್ಷ ಬಸವರಾಜ ಅಣಕಲ್, ಕಲಬುರಗಿ ತಾಲೂಕು ಅಧ್ಯಕ್ಷ ರಾಹುಲ ಮಾನಕರ್, ಬಸವಕಲ್ಯಾಣ ತಾಲೂಕಿನ ಗ್ರಾಮೀಣ ವೈದ್ಯರು ಭಾಗವಹಿಸಿದ್ದರು.
ಶಿಘ್ರದಲ್ಲಿಯೇ ಆರೋಗ್ಯ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗ್ರಾಮೀಣ ವೈದ್ಯರ ಮಾನ್ಯತೆ ಸೇರಿದಂತೆ ವಿವಿಧ
ಪ್ರಮುಖ ಬೇಡಿಕೆಗಳಿಗೆ ಆಗ್ರಹಿಸಿ ಮನವಿ ಪತ್ರವನ್ನು ಕಲಬುರಗಿಯಲ್ಲಿ ಜರುಗಿದ ಸಂಘಟನೆಯ ಪ್ರಥಮ ಸಭೆಯಲ್ಲಿ ತಿಮಾ9ನಿಸಲಾಗಿದ್ದು ಇದಕ್ಕಾಗಿ ಎಲ್ಲ ಸಿದ್ದತೆಗಳನ್ನು ಕೈಗೊಳ್ಳುವಂತೆ ಬಸವರಾಜ ಮರತೂರಕರ ಅವರು ಮನವಿ ಮಾಡಿದರು.