ಬಸವಕಲ್ಯಾಣದ ಚಿತ್ರಣ ಬದಲಿಸಿದ ನಿಗಮ ಅಸ್ತ್ರ

ಬೀದರ:ನ.19: ಬಸವಣ್ಣನ ಕಾರ್ಯಕ್ಷೇತ್ರ ಬಸವಕಲ್ಯಾಣ ಕ್ಷೇತ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಬಿಜೆಪಿ ಪ್ರಯೋಗಿಸಿರುವ ಪ್ರಬಲ ಜಾತಿಗಳ ಓಲೈಕೆ “ಅಸ್ತ್ರ’ಮೊದಲ ಹಂತದಲ್ಲೇ ಯಶಸ್ಸು ಕಂಡಂತಾಗಿದೆ. ಮರಾಠಾ ಅಭಿವೃದ್ಧಿ ಪ್ರಾಧಿ ಕಾರ ರಚನೆ ಬೆನ್ನಲ್ಲೇ ಈಗ ವೀರಶೈವ-ಲಿಂಗಾಯತ ಅಭಿವೃದ್ಧಿ ಪ್ರಾಧಿ ಕಾರ ರಚನೆಗೆ ಬಿಜೆಪಿ ಸರ್ಕಾರ “ಅಸ್ತು’ ಎಂದಿದ್ದು, ಕಲ್ಯಾಣದ ಉಪ ಚುನಾವಣೆ ದಶಕಗಳ ಬೇಡಿಕೆ ಈಡೇರಿಕೆಗೆ ವೇದಿಕೆ ಒದಗಿಸಿಕೊಟ್ಟಂತಾಗಿದೆ.

ಜನತಾ ಪರಿವಾರ ಮತ್ತು ಕಾಂಗ್ರೆಸ್‌ನಭದ್ರಕೋಟೆಯಾಗಿರುವ ಬಸವಕಲ್ಯಾಣ ಕ್ಷೇತ್ರದಲ್ಲಿ ಕಮಲ ಅರಳಿಸಲು ಬಿಜೆಪಿ ಪಡೆ

ಚುನಾವಣೆ ಘೋಷಣೆ ಮುನ್ನವೇ ಕಸರತ್ತುನಡೆಸುತ್ತಿದೆ. ಚುನಾವಣಾ ಅಖಾಡಕ್ಕಿಳಿದಿರುವ ಸಿಎಂ ಪುತ್ರ, ಬಿಜೆಪಿಯ ಟ್ರಬಲ್‌ ಶೂಟರ್‌ ಬಿ.ವೈ ವಿಜಯೇಂದ್ರ ಶಿರಾ ಉಪ ಚುನಾವಣೆ ವೇಳೆ ಕಾಡು ಗೊಲ್ಲರಿಗೆ ಪ್ರತ್ಯೇಕ ನಿಗಮಸ್ಥಾಪನೆ ತಂತ್ರವನ್ನೇ ಕಲ್ಯಾಣ ಕ್ಷೇತ್ರದಲ್ಲೂ ಪ್ರಯೋಗಿಸಿದ್ದಾರೆ.
ಮತಗಳ ಕ್ರೋಡೀಕರಣಕ್ಕೆ ಕ್ಷೇತ್ರದ ಪ್ರಮುಖ ಜಾತಿಯ ಮತಗಳ ಸೆಳೆಯಲು ತಂತ್ರ ಹೆಣೆಯುತ್ತಿದ್ದಾರೆ.

ಮುಖ್ಯವಾಗಿ ಮರಾಠಾ ಪ್ರಾಬಲ್ಯದ ಕಲ್ಯಾಣ ನೆಲದಲ್ಲೇ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಕುರಿತು ವಿಜಯೇಂದ್ರ ಭರವಸೆ ನೀಡಿದ್ದರು. ಅದಾದ ಕೆಲ ಗಂಟೆಯೊಳಗೆ ಸರ್ಕಾರದಿಂದ ಮಂಡಳಿ ರಚನೆಗೆ ಆದೇಶ ಹೊರಬಿದ್ದಿದೆ.

ಕ್ಷೇತ್ರದಲ್ಲಿ ಒಂದು ಸಮುದಾಯದ ಓಲೈಕೆಗಾಗಿ “ಪ್ರಾಧಿಕಾರ’ ರಚನೆ ಜೇನು ಗೂಡಿಗೆ ಕೈ ಹಾಕಿರುವ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಕನ್ನಡಪರ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾಗಿದ್ದರೆ, ಮತ್ತೂಂದೆಡೆ ವೀರಶೈವ- ಲಿಂಗಾಯತ ಪ್ರಾಧಿಕಾರ ರಚನೆ ಜತೆಗೆ ಸಮುದಾಯಕ್ಕೆ ಮಹಾರಾಷ್ಟ್ರ ಮಾದರಿ ಮೀಸಲಾತಿ ಬೇಡಿಕೆ ಮುನ್ನಲೆಗೆ ಬಂದಿತ್ತು.

ಬಹು ದಿನಗಳ ಕೂಗು: ಮರಾಠಾ ಪ್ರಾಧಿಕಾರ ರಚನೆಗೆ ವಿರೋಧದಿಂದ ಕಂಗಾಲಾದ ಸರ್ಕಾರ ಎರಡೇ ದಿನದಲ್ಲೇ ವೀರಶೈವ- ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವ ಮೂಲಕ ಸಂಕಷ್ಟದಿಂದ ಹೊರಬರಲು ಯತ್ನ ಮಾಡಿದೆ.ಲಿಂಗಾಯತ ಸಮಾಜದ ಕಡು ಬಡವರು ಮತ್ತು ಯುವಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಪ್ರಾಧಿಕಾರ ರಚಿಸಬೇಕೆಂಬ ಬಹು ದಿನಗಳ ಕೂಗಿಗೆ ಮನ್ನಣೆ ನೀಡಬೇಕೆಂಬ ಮಠಾಧಿಧೀಶರು, ವೀರಶೈವ ಮಹಾಸಭಾದ ಒತ್ತಡಕ್ಕೆ ಸರ್ಕಾರಕೊನೆಗೂ ಮಣಿದಿದೆ.

ಸಾಮಾನ್ಯವಾಗಿ ಬಿಜೆಪಿ ಲಿಂಗಾಯತ, ಮರಾಠಾ ಸೇರಿ ಮೇಲ್ವರ್ಗದ ಮತ ನೆಚ್ಚಿಕೊಂಡಿದೆ. ಬಸವಕಲ್ಯಾಣ ಉಪ ಚುನಾವಣೆ ಹೊತ್ತಿನಲ್ಲಿ ಈ ನಿರ್ಣಾಯಕ ಮತದಾರರನ್ನು ಪಕ್ಷದ ಪರ ಮತ್ತಷ್ಟು ಗಟ್ಟಿಯಾಗಿಸುವ ಬಿ.ವೈ. ವಿಜಯೇಂದ್ರ ಲೆಕ್ಕಾಚಾರಗಳು ಈ ಎರಡು ಪ್ರಾಧಿಕಾರಗಳ ರಚನೆಯೊಂದಿಗೆ ಕೈಗೂಡುವಂತಾಗಿದ್ದರೆ ಎರಡುಸಮುದಾಯಗಳಿಗೆ ತನ್ನ ಹಕ್ಕೊತ್ತಾಯ ಈಡೇರಲು ಈ ಚುನಾವಣೆಯೇ ಕಾರಣವಾಯಿತು. ಆದರೆ, ರಾಜ್ಯದಲ್ಲಿ ಅತಿ ದೊಡ್ಡ ಸಮುದಾಯವಾಗಿರುವ ವೀರಶೈವ ಲಿಂಗಾಯತ ಸಮುದಾಯಕ್ಕೆ ಮಹಾರಾಷ್ಟ್ರ ಮಾದರಿಯಲ್ಲಿ ಶೇ.16 ಮೀಸಲಾತಿ ನೀಡಬೇಕು. ಆ ಮೂಲಕ ಸಮುದಾಯದ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.