ಬಸವಕಲ್ಯಾಣಕ್ಕೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಬೆಂಬಲಿಗರ ಸಂಭ್ರಮಾಚರಣೆ

ಬಸವಕಲ್ಯಾಣ:ಮಾ.27: ತಾಲೂಕಿನ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಲು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಶರಣು ಸಲಗರ ಅವರಿಗೆ ಟಿಕೇಟ್ ನೀಡಿದ ಸಂಭ್ರಮದಲ್ಲಿ ಬಿಜೆಪಿ ಪಕ್ಷದ ಬೆಂಬಲಿಗರು ಹಾಗೂ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.
ಇದೇ ಸಂದರ್ಭದಲ್ಲಿ ಬೆಂಬಲಿಗರ ಸಭೆ ನಡೆಸಿ, ಭಾಜಪ ಹಿರಿಯ ಮುಖಂಡರಾದ ರಾಜಕುಮಾರ ಸಿರಗಾಪೂರ ಅವರು ಮಾತನಾಡಿ, ಶರಣು ಸಲಗರ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಅವರನ್ನು ಹೈಕಮಾಂಡ್ ಬಿಜೆಪಿ ಟಿಕೇಟ್ ನೀಡಿದೆ. ಆದ್ದರಿಂದ ಸೂಕ್ತ ಅಭ್ಯರ್ಥಿಯನ್ನೇ ಬಸವಕಲ್ಯಾಣ ಮತಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಹಾಗಾಗಿ ಅವರ ಗೆಲುವಿಗಾಗಿ ನಾವೆಲ್ಲರು ಶ್ರಮಿಸಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಜಗನ್ನಾಥ ಪಾಟೀಲ ಮಂಠಾಳ ಅವರು ಮಾತನಾಡಿ, ಶರಣು ಸಲಗರ ಅವರಿಗೆ ಟಿಕೇಟ್ ನೀಡಿದ್ದು ಈ ಕ್ಷೇತ್ರದ ಜನತೆಯ ಅಭಿವೃದ್ಧಿ ಹಾಗೂ ಏಳ್ಗೆಯ ಸಂಕೇತವಾಗಿದೆ. ಹಾಗಾಗಿ ಈ ಬಾರಿಯ ಉಪ ಚುನಾವಣೆಯಲ್ಲಿ ಸಲಗರ ಅವರನ್ನು ಬಹುಮತದಿಂದ ಗೆಲ್ಲಿಸಿ ತರಬೇಕಾಗಿದೆ. ಶರಣು ಸಲಗರ ಅವರ ಗೆಲುವು ಅವರೊಬ್ಬರ ಗೆಲುವಲ್ಲ. ಎಲ್ಲರ ಸರ್ವಾಂಗೀಣ ಅಭಿವೃದ್ಧಿಯ ಗೆಲುವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಮುಂದೊರೆದು ಮತನಾಡಿದ ಅವರು, ಪಕ್ಷದಲ್ಲಿ ಯವುದೇ ರೀತಿಯ ಒಡಕ್ಕಿಲ್ಲ. ಚುನಾವಣೆಯಲ್ಲಿ ಎಲ್ಲರೂ ಒಮ್ಮತದಿಂದ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರ ಗೆಲುವಿಗೆ ಸಹಕರಿಸುವುದರೊಂದಿಗೆ ಪಕ್ಷದ ಉಳಿವಿಗಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಗನ್ನಾಥ ರೆಡ್ಡಿ ಮಾತನಾಡಿ, ಈ ಕ್ಷೇತ್ರದ ಜನರ ನಿಜವಾದ ಸೇವಕನಿಗೆ ಗುರುತಿಸಿದ ಬಿಜೆಪಿ ಪಕ್ಷದ ವರೀಷ್ಠರು ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದು ಪ್ರತಿಯೊಬ್ಬರ ಆಶಯದ ಕನಸು ನನಸಾಗಿದೆ ಎಂದರು.
ಬಿಜೆಪಿ ಪಕ್ಷದ ಸಂಭ್ರಮಾಚರಣೆ ವೇಳೆ ಪ್ರಮುಖರಾದ ಶಿವರಾಜ ತಾಟೆ, ಧನರಾಜ ಜಾಧವ, ಜಗನ್ನಾಥ ಮುಗಳಿ, ಹಣಮಂತ ದರ್ಜೆ, ಚಂದ್ರಕಾಂತ ಪಾಟೀಲ, ಮೇಘರಾಜ ನಾಗರಾಳೆ, ಶಾಹಜಿ ಭೋಸ್ಲೆ, ಬಸಯ್ಯಾ ಸ್ವಾಮಿ ಬಟಗೇರಾ, ಪ್ರಕಾಶ ಸುಂಠಾಣೆ, ಚನ್ನಪ್ಪ ಪರತಾಪೂರೆ, ಪ್ರದೀಪ ಗಡವಂತೆ, ಸಂಗಪ್ಪ ಸಜ್ಜನಶೆಟ್ಟಿ, ಅರವಿಂದ ಹರಪಲ್ಲೆ, ನಾಗೇಶ ಮೇತ್ರೆ, ಮನೋಜ ಬಿರಾದಾರ, ರೋಹಿದಾಸ ಬಿರಾದಾರ, ರಾಮಚಂದ್ರ ಹುಡಗೆ ಮುಂತಾದವರು ಉಪಸ್ಥಿತರಿದ್ದರು.