
ಬೀದರ್: ಅ.2:ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) 50 ಲಕ್ಷ ರೂ. ಅನುದಾನದಲ್ಲಿ ತಾಲೂಕಿನ ಕಂಗಟ್ಟಿ ಗ್ರಾಮದಿಂದ ಬಸಂತಪುರ ಗ್ರಾಮದವರೆಗೆ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ತಾಲೂಕಿನ ಕಂಗಟಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪುರೆ, ಸ್ಥಳೀಯರ ಒತ್ತಾಯದ ಮೇರೆಗೆ ಕೆಕೆಆರ್ಡಿಬಿಯಿಂದ ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ಹೇಳಿದರು.
ಕಾಮಗಾರಿಯನ್ನು ಕಾಲಮಿತಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು. ಕಳಪೆ ಕಾಮಗಾರಿ ಕಂಡುಬಂದರೆ ಸಂಬಂಧಿಸಿದವರಿಗೆ ಸ್ಥಳೀಯರು ದೂರು ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಪಾಟೀಲ್ ಗಾದಗಿ, ಬೀದರ್ ಗ್ರಾಮಾಂತ ಮಂಡಲ ಅಧ್ಯಕ್ಷ ರಾಜೇಂದ್ರ ಪೂಜಾರಿ, ಪ್ರಮುಖರಾದ ದೀಪಕ್ ಗಾದಗೆ, ರಾಮಶೆಟ್ಟಿ ಬಿರಾದಾರ್, ರಾಜಕುಮಾರ ನೆಮತಾಬಾದ್, ಬಾಲಾಜಿ ಚವ್ಹಾಣ್, ರಾಜಶೇಖರ ಪಾಟೀಲ್, ಪಂಢರಿನಾಥ ಲದ್ದೆ, ಪ್ರಕಾಶ ಕೋರೆ, ದೇವಿದಾಸ ಸಿಂದೆ, ಅಶೋಕ ಪಾಟೀಲ್, ವಿಶ್ವನಾಥ ಮೇತ್ರೆ, ಸಂಗಮೇಶ, ದತ್ತು, ರವಿ ಚನ್ನಪ್ಪನೋರ್ ಇತರರಿದ್ದರು.