ಬಳ್ಳಾರಿ ಹಾಲು ಒಕ್ಕೂಟದಿಂದಲೂ ಹೆಚ್ಚು ಹಾಲು ಕುಡಿಯಿರಿ

ಬಳ್ಳಾರಿ ಜೂ 01 : ಇಲ್ಲಿನ ಹಾಲು ಒಕ್ಕೂಟವು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು. ಜೂನ್ ಒಂದನ್ನು “ವಿಶ್ವ ಹಾಲು ದಿನಾಚರಣೆ”ಯನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಹಾಲು ಒಕ್ಕೂಟವು ಕೋವಿಡ್-19 ಮಹಾಮಾರಿಯ ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ದಿನಗಳಲ್ಲಿ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಈ ತಿಂಗಳ 30 ದಿನಗಳ ಕಾಲ “ಹೆಚ್ಚು ಹಾಲು ಕುಡಿಯಿರಿ” ಎಂಬ ಕಾರ್ಯಕ್ರಮದಡಿ ಒಕ್ಕೂಟದಿಂದ ಮಾರಾಟವಾಗುತ್ತಿರುವ ಎಲ್ಲಾ ಮಾದರಿಯ ಹಾಲಿನ 500 ಮಿಲಿ ಮತ್ತು 1000 ಮಿಲಿ ಪ್ಯಾಕೇಟ್‍ನಲ್ಲಿ ಅನುಕ್ರಮವಾಗಿ 20 ಮಿಲಿ ಹಾಗೂ 40 ಮಿಲಿ ಹಾಲನ್ನು ಹೆಚ್ಚುವರಿಯಾಗಿ ಉಚಿತವಾಗಿ ಗ್ರಾಹಕರಿಗೆ ನೀಡುತ್ತಿದೆ.
ಈ ಹೆಚ್ಚುವರಿ ಹಾಲಿನ ಸೇವನೆಯಿಂದ ಗ್ರಾಹಕರ ಆರೋಗ್ಯದಲ್ಲಿ ಪೌಷ್ಟಿಕಾಂಶ ಹೆಚ್ಚಳವಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಇರುವುದರಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆಂದು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.