ಬಳ್ಳಾರಿ ಸ್ಮಾರ್ಟ್ ಸಿಟಿ ಶಾಸಕ ರೆಡ್ಡಿ ಇಂಗಿತ

ಬಳ್ಳಾರಿ, ಜ.10: ನಗರವನ್ನು ಸ್ಮಾರ್ಟ್ ಸಿಟಿ ಮಾಡಿಕೊಡ್ತೇವೆ ಎಂದು ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ ಮಾತು ಕೊಟ್ಡಿದ್ದಾರೆ. ಅದರಂತೆ ಈ ಬಾರಿಯ ಬಜೆಟ್ ನಲ್ಲಿ ಇದಕ್ಕೆ ಘೋಷಣೆ ಮಾಡುವ ಆಶಯವನ್ನು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ‌ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಮಾರ್ಟ್ ಸಿಟಿ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಈ ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ ಇದೆ.
ಬಳ್ಳಾರಿ ನಗರದ ಡ್ರೈನೆಜ್ ವ್ಯವಸ್ಥೆ ಸರಿಪಡಿಸಲು 220 ಕೋಟಿ ಅನುದಾನ ನೀಡಲು ನಗರಾಭಿವೃದ್ಧಿ ಸಚಿವರು ಒಪ್ಪಿದ್ದಾರೆಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು ಆ ವಿಚಾರದಲ್ಲಿ ನಾನು ಯಾವುದೇ ಲಾಭಿ ಮಾಡಿಲ್ಲ. ಸಚಿವ ಸ್ಥಾನಕ್ಕೆ ನಾನು ಅಕಾಂಕ್ಷಿ ಅನ್ನುವುದಕ್ಕಿಂತ ಕಸಾಪುರ ಆಂಜನೇಯ ಅನುಗ್ರಹ ಮಾಡಿದರೆ ಸಚಿವನಾಗ್ತೇನೆ. ಅದಕ್ಕಾಗಿ ಲಾಭಿ ಮಾಡಲ್ಲ. ನಾನು ಹಾರ್ಡ್ ವರ್ಕ್ ಮಾಡುತ್ತೇನೆ ಅನ್ನೋದು ನೋಡಿ, ನಮ್ಮ ಹೈಕಮಾಂಡ್ ಮತ್ತು ಸಂತೋಷ ಜೀ ಮನಸ್ಸು ಮಾಡಿ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆಂದರು.