ಬಳ್ಳಾರಿ ಸೇರಿದಂತೆ 8 ಕಡೆ ರೋಪ್ ವೇ ಗೆ ಸಮ್ಮತಿ

ಬಳ್ಳಾರಿ, ಮಾ.31: ಇಲ್ಲಿನ ಐತಿಹಾಸಿಕ ಬೆಟ್ಟದ ಮೇಲಿನ ಕೋಟೆ ಸೇರಿದಂತೆ ರಾಜ್ಯದ ಎಂಟು ಪ್ರವಾಸಿ ತಾಣಗಳಲ್ಲಿ ರೋಪ್ ವೇ ಸೌಲಭ್ಯ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ಸಮ್ಮತಿಸಿದೆ.
ವಿಧಾನಸೌಧದಲ್ಲಿ ಪರಿಸರ, ಜೀವಶಾಸ್ತ್ರ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಸಿ.ಪಿ. ಯೋಗೇಶ್ವರ್ ಅವರನ್ನು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಇಂದು ಭೇಟಿ ಮಾಡಿ. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ ಕೋಟೆ ಹಾಗೂ ಸಂಗನಕಲ್ಲು ಗುಡ್ಡದ ಅಭಿವೃದ್ಧಿಯ ಬಗ್ಗೆಸಚಿವರೊಂದಿಗೆ ಚರ್ಚಿಸಿದರು.
ಈ ವೇಳೆ ಸಚಿವರು ಶೀಘ್ರದಲ್ಲೇ ಬಳ್ಳಾರಿಗೆ ಭೇಟಿ ನೀಡಿ ಈ ಎರಡು ಪ್ರವಾಸಿತಾಣಗಳನ್ನು ವೀಕ್ಷಿಸಲಾಗುವುದು. ಅಷ್ಟೇ ಅಲ್ಲದೇ ಪ್ರವಾಸೋದ್ಯಮ ಇಲಾಖೆಯಿಂದ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದ ಪ್ರಮುಖ 8 ಪ್ರವಾಸಿ ತಾಣಗಳಲ್ಲಿ ರೋಪ್ ವೇ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಇಲಾಖೆಯ ನಿರ್ದೇಶಕರು ಉದ್ದೇಶಿಸಿರುತ್ತಾರೆ. ಅದರಂತೆ 8 ಪ್ರವಾಸಿ ತಾಣಗಳ ಪಟ್ಟಿಗೆ ಬಳ್ಳಾರಿ ಕೋಟೆ ಪ್ರದೇಶವನ್ನು ಸೇರ್ಪಡೆಗೊಳಿಸುವಂತೆ ಇಲಾಖೆಯ ನಿರ್ದೇಶಕರಿಗೆ ನಿರ್ದೇಶಿಸಿದ್ದಾರೆಂದು ಬುಡಾ ಅಧ್ಯಕ್ಷ ಶೇಖರ್ ಹೇಳಿದ್ದಾರೆ.