ಬಳ್ಳಾರಿ ಸಾವಿರ ಹಾಸಿಗೆಗಳ ಕೋವಿಡ್ ಆಸ್ಪತ್ರೆ ಉದ್ಘಾಟನೆ

ಬಳ್ಳಾರಿ‌ ಮೇ 19 : ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಒಂದು ಸಾವಿರ ಆಕ್ಸಿಜನ್ ಸಹಿತ ಬೆಡ್ ಗಳ ಆಸ್ಪತ್ರೆ ಕಾರ್ಯಾರಂಭ

ದಿನೇ ದಿನೇ ಕೋವಿಡ್ ಸೋಂಕಿತ ರೋಗಿಗಳ ಹೆಚ್ಚಳ ಮತ್ತು ಆಕ್ಸಿಜನ್ ಬೆಡ್ ದೊರೆಯದೆ ಜನರು ಸಾವನ್ನಪ್ಪುತ್ತಿದ್ದರಿಂದ.

ಬಳ್ಳಾರಿ‌ ಜಿಲ್ಲೆ ತೋರಣಗಲ್ಲು ಬಳಿ‌ ಜಿಂದಾಲ್ ಕಾರ್ಖಾನೆ ಬಳಿ ಒಂದು ಸಾವಿರ ಆಕ್ಸಿಜನ್ ಸಹಿತ ಬೆಡ್ ಗಳ ಮೂರು ಘಟಕಗಳ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ.

ಸಂಪೂರ್ಣ ಹವಾ ನಿಯಂತ್ರಿತ ಈ ಆಸ್ಪತ್ರೆಯಲ್ಲಿ ಪ್ರತಿ ರೋಗಿಗೆ ಒಂದು ಹಾಸಿಗೆ, ಫ್ಯಾನ್, ಟೇಬಲ್, ಚೇರ್ ವ್ಯವಸ್ಥೆ, ಊಟ, ಉಪಹಾರ ಮತ್ತು ಸುಸಜ್ಜಿತ ಸ್ನಾನಗೃಹ, ಶೌಚಾಲಯಗಳನ್ನು ಒದಗಿಸಿದೆ.

ಒಂದು ಸಾವಿರ ಮೆಗಾ ವ್ಯಾಟ ವಿದ್ಯುತ್ ಸರಬರಾಜು ವ್ಯವಸ್ಥೆಯೂ ಇದೆ.
ರಾಜ್ಯದಲ್ಲಿಯೆ ಆಮ್ಲಜನಕ ಸಹಿತ ಬೃಹತ್ ಆಸ್ಪತ್ರೆ ಇದಾಗಿದೆ.

ರೋಗಿಗಳು ಇದ್ದಕಡೆ ಆಮ್ಲ ಜನಕ ತೆಗೆದುಕೊಂಡು ಹೋಗುವುದಕ್ಕಿಂತ. ಆಮ್ಲ ಜನಕ ಇದ್ದ ಕಡೆಯಲ್ಲೇ ಆಸ್ಪತ್ರೆ ನಿರ್ಮಿಸಲಾಗಿದೆ.

ಇದನ್ನು ಜಿಂದಾಲ್ ಸಂಸ್ಥೆ ತನ್ನ ಸಾಮಾಜಿಕ ಹೊಣೆಗಾರಿಕೆಯಡಿ ನಿರ್ಮಿಸಿದೆ.

ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ರೋಗಿಗಳಿಗೆ ಇದು ಸಹಕಾರಿಯಾಗಲಿದೆ.

ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿಗಳು ಇಲ್ಲಿಗೆ ರೋಗಿಗಳನ್ನು ಕಳಿಸಲಿದ್ದಾರೆ.

ರೋಗಿಗಳಿಗೆ ಅವಶ್ಯವಾದ ಎಲ್ಲಾ ವೈದ್ಯಕೀಯ ಉಪಕರಣಗಳ ವ್ಯವಸ್ಥೆಯೂ ಇದೆ.

ತೋರಣಗಲ್ಲಿನ ಜೆಎಸ್ ಡಬ್ಲು ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪಟ್ಟಣ ಶೆಟ್ಟಿ ಅವರು ಮಾತನಾಡಿ ಕಳೆದ 15 ದಿನಗಳಲ್ಲಿ ನೇರವಾಗಿ ಕಾರ್ಖಾನೆಯಿಂದ ಒಂದು ಸಾವಿರ ಬೆಡ್ ಗಳಿಗೆ ಅವಶ್ಯವಾದ ದಿನ ಒಂದಕ್ಕೆ ಪ್ರತಿ ರೋಗಿಗಿಗೆ 20 ಲೀಟರ್ ಆಮ್ಲಜನಕವನ್ನು ಯಾವುದೇ ಅಡತಡೆ ಇಲ್ಲದೆ ಸರಬರಾಜು ಮಾಡುವ ವ್ಯವಸ್ಥೆ ಮಾಡಿದೆ.
ಜೊತೆಗೆ ಪರಿಸರ ಸ್ನೇಹಿಯಾಗಿ ಶೌಚಾಲಯ, ಸ್ನಾನಗೃಹ, ಕುಡಿಯುವ ನೀರು, ಆಹಾರ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದೆಂದು ತಿಳಿಸಿದರು.

ಜಿಂದಾಲ್ ಸಂಸ್ಥೆಯ ಮುಂಬೈನ ಉಪಾಧ್ಯಕ್ಷ ಡಾ.ವಿನೋದ್ ನಾವಲ್ ಅವರು ಜನತೆ ಕರೋನಾ ಸಂಕಷ್ಟದಿಂದ ಆಮ್ಲ ಜನಕ ಇಲ್ಲದೆ ಸಾಯುವುದನ್ನು ಕಂಡು ರಾಜ್ಯ ಸರ್ಕಾರ, ಜಿಲ್ಲಾಡಳಿತ ಸಹಯೋಗದೊಂದಿಗೆ ಇದನ್ನು ನಿರ್ಮಿಸಿದೆ. ಕಾರ್ಖಾನೆಯಿಂದ 4.5 ಕಿ.ಮೀ ನಿಂದ ಪೈಪ್ ಲೈನ್ ಮೂಲಕ ಆಕ್ಸಿಜನ್ ಸರಬರಾಜು ಮಾಡುತ್ತಿದೆ. ಜನರ ಆರೋಗ್ಯ ಸುಧಾರಣೆಗೆ ಪ್ರಯತ್ನ ನಡೆದಿದೆ ಎಂದರು.

ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ. ದೇವಾನಂದ್ ಅವರು ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆಗೆ ಅಗತ್ಯವಾದ ವೈದ್ಯಕೀಯ ಸಿಬ್ಬಂದಿ‌ ಸಧ್ಯ ವಿಮ್ಸ್ ನಿಂದ ನೇಮಿಸಿಕೊಂಡಿದೆ. ಹೆಚ್ಚಿನ ಸಿಬ್ಬಂದಿ ನೇಮಕ‌ ಪ್ರಕ್ರಿಯೆ ಸಹ ನಡೆದಿದೆ. ಜನರು ಇಲ್ಲಿಗೆ ಬಂದು ಉತ್ತಮ ಆರೋಗ್ಯ ಪಡೆಯಬಹುದೆಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಸಂಜೆವಾಣಿಯೊಂದಿಗೆ ಮಾತನಾಡಿ ಒಂದು ಸಾವಿರ ಆಮ್ಲಜನಕ ಸಹಿತ ಬೆಡ್ ಗಳ ಆಸ್ಪತ್ರೆ ಇದಾಗಿದೆ. ಸಧ್ಯ 270 ಬೆಡ್ ಗಳ. ಘಟಕ ಇಂದಿನಿಂದಲೇ ಕಾರ್ಯಾರಂಭ ಮಾಡಲಿದೆ. ಕೆಲ ದಿನಗಳಲ್ಲಿ ಉಳಿದ ಬೆಡ್ ಗಳ ಎರೆಡು ಘಟಕಗಳು ಕಾರ್ಯಾರಂಭ ಮಾಡಲಿವೆ ಜನತೆ ಕೋವಿಡ್ ಬಗ್ಗೆ ಭಯ ಬೀಳದೆ, ಜಾಗೃತರಾಗಿರಬೇಕೆಂದು ಸೋಂಕು ಕಾಣಿಸಿಕೊಂಡ ತಕ್ಷಣ ಜನತೆ ಆಸ್ಪತ್ರೆಗೆ ಬರಬೇಕು ಎಂದು ಹೇಳಿದರು….ಬೈಟ್

ಇದಕ್ಕೂ ಮುನ್ನ ವರ್ಚುವಲ್ ಮೂಲಕ ಮುಖ್ಯ ಮಂತ್ರಿ ಯಡಿಯೂರಪ್ಪ ಉದ್ಘಾಟನೆ ಮಾಡಿ, ಕರೋನಾ ಸೋಂಕಿತರಿಗೆ ಇದು ಉತ್ತಮ ವ್ಯವಸ್ಥೆ ಆಗಿದೆ. ಜಿಂದಾಲ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು
ಜಿಂದಾಲ್ ನ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್, ಸಂಡೂರು ಶಾಸಕ ಈತುಕರಾಂ ಮೊದಲಾದವರು ಇದ್ದರು.