ಬಳ್ಳಾರಿ ವೀ.ವಿ.ಸಂಘಕ್ಕೆ ನೂತನ ಅಧ್ಯಕ್ಷರಾಗಿ ಹಿರಿಯರ ತಂಡದ ಗುರುಸಿದ್ದಸ್ವಾಮಿ ಆಯ್ಕೆ

 • ಉಪಾಧ್ಯಕ್ಷರಾಗಿ ಅಲ್ಲಂ ಚೆನ್ನಪ್ಪ
 • ಕಾರ್ಯದರ್ಶಿಯಾಗಿ ಬಿ.ವಿ.ಬಸವರಾಜ್
 • ಸಹ ಕಾರ್ಯದರ್ಶಿಯಾಗಿ ದರೂರು ಶಾಂತನಗೌಡ
 • ಖಜಾಂಚಿಯಾಗಿ ಗೋನಾಳ್ ರಾಜಶೇಖರಗೌಡ ಆಯ್ಕೆ

  ಬಳ್ಳಾರಿ, ಏ.08: ಶತಮಾನದ ಇತಿಹಾಸವನ್ನು ಹೊಂದಿರುವ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ. ವೀರಶೈವ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಇಂದು ಸಿರುಗುಪ್ಪ ತಾಲೂಕಿನ ಹಳೇಕೋಟೆಯ ಖ್ಯಾತ ನ್ಯಾಯವಾದಿ, ಭಾರತೀಯ ಸೇವಾದಳದ ರಾಜ್ಯ ಅಧ್ಯಕ್ಷರಾಗಿರುವ ಹೆಚ್.ಎಂ.ಗುರುಸಿದ್ದಸ್ವಾಮಿ ಅವರು ಆಯ್ಕೆಯಾಗಿದ್ದಾರೆ.
  ಸಂಘದ ಸಭಾಂಗಣದಲ್ಲಿ ಈವರೆಗೆ ಅಧ್ಯಕ್ಷರಾಗಿದ್ದ ಉಡೇದ ಬಸವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ
  ಅಧ್ಯಕ್ಷ ಸ್ಥಾನಕ್ಕೆ ಹಿರಿಯರ ತಂಡದಿಂದ ಗುರುಸಿದ್ದಸ್ವಾಮಿ ಮತ್ತು ಯುವಕ ವೃಂದದಿಂದ ಹಾವಿನಾಳ್ ಶರಣಪ್ಪ ಅವರು ಸ್ಪರ್ಧೆ ಮಾಡಿದ್ದರು.
  ಗುಪ್ತ ಮತದಾನದಲ್ಲಿ
  ಸ್ವಾಮಿ ಅವರಿಗೆ 17 ಮತ್ತು ಶರಣಪ್ಪ ಅವರಿಗೆ 13 ಮತಗಳು ಬಂದು ಸ್ವಾಮಿ ಅವರು ನಾಲ್ಕು ಮತಗಳ ಅಂತರದಿಂದ ಆಯ್ಕೆಯಾದರು.
  ಎಂದು ಚುನಾವಣೆ ನಡೆಸಿಕೊಟ್ಟ ಉಡೇದ ಬಸವರಾಜ್ ಅವರು ಘೋಷಣೆ ಮಾಡಿದ್ದಾರೆ.
  ಸ್ವಾಮಿ ಅವರು ಆಯ್ಕೆಯಾಗುತ್ತಿದಗದಂತೆ ಸಂಘದ ಹೊರ ಭಾಗದಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿ . ಸಂಘದ ಚುನಾವಾ ಚಾಣಕ್ಯ ಎಂದು ಕರೆಯುವ ಪ್ರಭುಸ್ವಾಮಿ ಅವರನ್ನು ಹೆಗಲ‌ಮೇಲೆ ಎತ್ತಿಕೊಂಡು ಜಯಕಾರ ಹಾಕಲಾಯಿತು.
  ನಂತರ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರು ತಮ್ಮ ಮುಂದಿನ ಮೂರು ವರ್ಷದ ನೂತನ ಕಾರ್ಯಕಾರಿ ಮಂಡಳಿಯ ಇತರೇ ಪದಾಧಿಕಾರಿಗಳ ಹುದ್ದೆಗೆ ಚುನಾವಣೆಯನ್ನು ಕೈ ಎತ್ತುವ ಮೂಲಕ‌ ನಡೆಸಲು ಅಧ್ಯಕ್ಷರು‌ ನಿರ್ಧರಿಸಿದರು. ಆಗ ಅದಕ್ಕೆ ಮಹೇಶ್ವರ ಸ್ವಾಮಿ ಆಕ್ಷೇಪಣೆ ಎತ್ತಿದ್ದಾಗ. ಕೈ ಎತ್ತುವ ಮೂಲಕ‌ ಚುನಾವಣೆ ನಡೆಸುವ ನಿರ್ಧಾರಕ್ಕೆ ಪರ ಮತ್ತು ವಿರೋದಕ್ಕೆ ತಲಾ 15 ಮತಗಳು ಬಂದಾಗ ಅಧ್ಯಕ್ಷರು ತಮ್ಮ‌ಮತವನ್ನು ನೀಡಿ ಕೈ ಎತ್ತಿ ಅಯ್ಕೆ ಗೆ ನಿರ್ಧರಿಸಿದರು.
  ಆಗ ಯುವಕ ವೃಮನದ ಮತ್ತು ಮಹೇಶ್ವರ ಸ್ವಾಮಿ ಅವರು ಚುನಾವಣೆಯಿಂದ ದೂರ
  ಉಪಾಧ್ಯಕ್ಷ ಸ್ಥಾನಕ್ಕೆ
  ಗಣಿ ಉದ್ಯಮಿ ಅಲ್ಲಂ ಚೆನ್ನಪ್ಪ
  ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಖ್ಯಾತ ನ್ಯಾಯವಾದಿ ಬಿ.ವಿ.ಬಸವರಾಜ್ ಅವರು.
  ಸಹಕಾರ್ಯದರ್ಶಿಯಾಗಿ ಕನ್ನಡಪರ ಹೋರಾಟಗಾರ ದರೂರು ಶಾಂತನಗೌಡ ಮತ್ತು ಖಜಾಂಚಿಯಾಗಿ ಈವರಗೆ ವೀರಶೈವ ಕಾಲೇಜಿನ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ಗೋನಾಳ್ ರಾಜಶೇಖರಗೌಡ ಅವರನ್ನು ಅವಿರೋದವಾಗಿ ಆಯ್ಕೆ ಮಾಡಲಾಯಿತು.
  ನೂತನ ಅಧ್ಯಕ್ಷ ಗುರುಸಿದ್ದಸ್ವಾಮಿ ಅವರು ಸಂಜೆವಾಣಿಯೊಂದಿಗೆ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ವೀರಶೈವರು ಸೇರಿದಂತೆ ಸರ್ವ ಜನಾಂಗದವರಿಗೆ ಶಿಕ್ಷಣ ನೀಡಿದ ಈ ಸಂಸ್ಥೆಯ ಅಧ್ಯಕ್ಷನಾಗಿದ್ದು. ಎಲ್ಲಾ ಸಮುದಾಯಕ್ಕೆ ಶಿಕ್ಷಣ ನೀಡುವ ಮತ್ತು ಸಂಘವನ್ನು‌ ಮತ್ತಷ್ಟು ಉತ್ತುಂಗ ಸ್ಥಿತಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಎಲ್ಲರ ಸಹಕಾರದಿಂದ ಮಾಡಲಿದೆಂದರು.
  ನೂತನ ಅಧ್ಯಕ್ಷರು ಸಂಸ್ಥೆಯ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ಇನ್ನುಳಿದ ಕಾರ್ಯಕಾರಿ ಸಮಿತಯ ಸದಸ್ಯರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಿದ್ದಾರೆ.
  ಗುರುಸಿದ್ದಸ್ವಾಮಿ ಅವರು ಅಧ್ಯಕ್ಷರಾಗುವ ಮೂಲಕ ವೀ.ವಿ.ಸಂಘದ 105 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜಂಗಮ ಸಮುದಾಯದದವರು ಅಧ್ಯಕ್ಷರಾದಂತಾಗಿದೆ. ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಹಿರಿಯರ ತಂಡಕ್ಕೆ 30 ರಲ್ಲಿ 14 ಸ್ಥಾನಗಳು ಲಭಿಸಿದ್ದವು. ಆದರೆ ಈ ತಂಡಕ್ಕೆ ಯುವಕವೃಂದದಿಂದ ಆಯ್ಕೆಯಾಗಿದ್ದ ದರೂರು ಶಾಂತನಗೌಡ ಮತ್ತು ಹೆಚ್,ಎಂ.ಕಿರಣ್ ಕುಮಾರ್ ಬೆಂಬಲ ವ್ಯಕ್ತಪಡಿಸಿದ್ದರಿಂದ ಈ ತಂಡ ಆಳಿತಕ್ಕೆ ಬರಲು ಸಹಕಾರಿಯಾಗಿದೆ.
  ಸಂಘದ ಕಚೇರಿ ಮುಂದೆ ಕೋವಿಡ್ ಸೋಂಕಿನ ಪರಿಸ್ಥಿತಿಯಲ್ಲೂ ನೂರಾರು ಜನ ಸೇರಿ ನೂತನ ಆಡಳಿತ ಮಂಡಳಿಗೆ ಶುಭಕೋರಿದರು.