ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಕಡಿಮೆಯಾದ ಸಕ್ರೀಯ ಪ್ರಕರಣಗಳು

ಹೊಸಪೇಟೆ, ಮೇ.16: ಮೇ 15ರಂದು ಹೊಸಪೇಟೆಯ ಸಕ್ರೀಯ ಪ್ರಕರಣಗಳಲ್ಲಿ 1095 ಸೇರಿದಂತೆ ಅವಿಭಾಜಿತ ಬಳ್ಳಾರಿ ಜಿಲ್ಲೆಯಲ್ಲಿ ಒಮ್ಮಿದೊಮ್ಮಲೆ 3586 ಪ್ರಕರಣಗಳು ಸೋಂಕಿನಿಂದ ಮುಕ್ತವಾಗುವ ಮೂಲಕ ನಿಟ್ಟೂಸಿರು ಬಿಡುವಂತಾಗಿದೆ.
ಹೊಸಪೇಟೆ ಒಂದರಲ್ಲಿಯೇ 1095 ಪ್ರಕರಣಗಳು, ಬಳ್ಳಾರಿಯಲ್ಲಿ 840, ಸಂಡೂರಿನಲ್ಲಿ 632, ಸಿರಗುಪ್ಪಾದಲ್ಲಿ 259, ಹಪರನಹಳ್ಳಿಯಲ್ಲಿ 507, ಹಗರಿಬೊಮ್ಮನಹಳ್ಳಿ 197, ಹಡಗಲಿಯಲ್ಲಿ 56 ಪ್ರಕರಣಗಳು ಸೋಂಕು ಮುಕ್ತವಾಗುವ ಮೂಲಕ ಒಟ್ಟು 3586 ಪ್ರಕರಣಗಳು ಕರೋನಾ ಮುಕ್ತವಾದವು, ಕೂಡ್ಲಗಿಯಲ್ಲಿ ಒಂದು ಪ್ರಕರಣಗಳು ಕರೋನಾ ಮುಕ್ತವಾಗದಿರುವುದು ಶನಿವಾರದ ವಿಶೇಷವಾಗಿತು. ಜಿಲ್ಲೆಯಲ್ಲಿ 28 ಸಾವಿನ ಪ್ರಕರಣಗಳು ಸೇರಿದಂತೆ ಈ ವರೆಗೂ ಕರೋನಾದಿಂದ 1047 ಜನ ಮೃತಪಟ್ಟಂತಾಗಿದೆ.