ಬಳ್ಳಾರಿ ಲೋಕಸಭಾ ಕ್ಷೇತ್ರ ಬಿಜೆಪಿಗೆ ಶ್ರೀರಾಮುಲು ಸೂಕ್ತ ಅಭ್ಯರ್ಥಿ: ರಾಮಲಿಂಗಪ್ಪ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿಸ ಜ.13: ಈ ಬಾರಿಯ ಲೋಕಸಭಾ ಚುನಾವಣೆಗೆ ಬಳ್ಳಾರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಸೂಕ್ತ. ಅಭ್ಯರ್ಥಿ ಎಂದು ಪಕ್ಷದ ಜಿಲ್ಲೆಯ ಹಿರಿಯ ಮುಖಂಡ ಕೆ.ಎ.ರಾಮಲಿಂಗಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಲವು ಕಾರಣಗಳಿಂದ ಶ್ರೀರಾಮುಲು ಅವರಿಗೆ ಸೋಲಾಗಿರಬಹುದು. ಆದರೆ ಅವರು ಇಡೀ ರಾಜ್ಯಾದ್ಯಂತ ಪಕ್ಷ ಸಂಘಟನೆಯ ಶಕ್ತಿ ಹೊಂದಿರುವಂತಹರು. ಈ ಹಿಂದೆ 2014 ರಂತೆ ಈ ಬಾರಿ ಅವರಿಗೆ ಪಕ್ಷ ಟಿಕೆಟ್ ನೀಡಿದರೆ ಬಹುಮತದಿಂದ ಆಯ್ಕೆಯಾಗುವುದು ಖಚಿತ‌. ಪ್ರಧಾನಿ‌ ಮೋದಿ ಅವರು ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ದೇಶದಲ್ಲಿ ಆಗಿರುವ ಅಭಿವೃದ್ಧಿ, ದೇಶ ಸಂರಕ್ಷಣೆಯಲ್ಲಿನ ದಿಟ್ಟತನ, ಅರ್ಥಿಕ ಅಭಿವೃದ್ಧಿಯಲ್ಲಿ ವಿಶ್ವದಲ್ಲಿ ಪ್ರಗತಿ‌ಹೊಂದುತ್ತಿರುವುದು, ಹಿಂದು ಧರ್ಮದ ರಕ್ಷಣೆ ಮೊದಲಾದ ಕಾರ್ಯಗಳಿಂದ ಈ ಬಾರಿ ಮತ್ತೆ ಬಿಜೆಪಿಯನ್ನು  ಅಧಿಕಾರಕ್ಕೆ ಜನತೆ ತರಲು ನಿರ್ಧರಿಸಿದ್ದಾರೆ. ಪಕ್ಷದ ಬಲ ಜೊತೆಗೆ ಜಿಲ್ಲೆಯಲ್ಲಿ ಶ್ರೀರಾಮುಲು ಅವರ ಪ್ರಭಾವ ಎರೆಡೂ ಸೇರಿದರೆ ನಮ್ಮ‌ಗೆಲುವು ನಿಶ್ಚಿತ ಅದಕ್ಕಾಗಿ‌ ಅವರಿಗೆ ಪಕ್ಷ ಟಿಕೆಟೆ ನೀಡಬೇಕಿದೆ ಎಂದಿದ್ದಾರೆ.
ಹಾಲಿ ಸಂಸದ ವೈ.ದೇವೆಂದ್ರಪ್ಪ ಇದ್ದಾರೆ. ಅವರೂ ಸಹ ಮತ್ತೆ ಟಿಕೆಟ್ ಬಯಸಿದ್ದಾರಲ್ಲ, ಅವರಿಗೇಕೆ ಟಿಕೆಟ್ ಕೊಡಬಾರದು, ಅವರೇನು ಭ್ರಷ್ಟರೇ, ಇಲ್ಲಾ ಸರಿಯಾಗಿ ಕೆಲಸ ಮಾಡಿಲ್ಲವೇ ಎಂಬ ಪ್ರಶ್ನೆಗೆ, ಹಾಗೇನಿಲ್ಲ. ಅವರಿಗೆ ವಯಸ್ಸಾಗಿದೆ. ಶ್ರೀರಾಮುಲು ಅವರು,  ದೇವಂದ್ರಪ್ಪ ಅವರಿಗಿಂತ ಚೆನ್ನಾಗಿ ಕೆಲಸ ಮಾಡುವ, ಪಕ್ಷಕ್ಕೆ ಬಲ ತುಂಬುವ ಶಕ್ತಿ ಹೊಂದಿದ್ದಾರೆ. ಆಯೋದ್ಯೆಯಲ್ಲಿ ಶ್ರೀರಾಮ‌ಪ್ರತಿಷ್ಟಾಪನೆಯಿಂದ ದೇಶಕ್ಕೆ ಒಂದು ಶಕ್ತಿ ಬರುವಂತೆ. ಜಿಲ್ಲಾ ಆಡಳಿತದಲ್ಲಿ ಶ್ರೀರಾಮುಲು ಅವರು ಇದ್ದರೆ ಪಕ್ಷದ ಕಾರ್ಯಕರ್ತರಿಗೂ ಒಂದು ಶಕ್ತಿ ಇದ್ದಂತೆ. ಅಲ್ಲದೆ ಜಿಲ್ಲೆಯ ಅನೇಕ ಕಡೆ ತಾವು ಸಂಚರಿಸಿದಾಗ ಶ್ರೀರಾಮುಲು ಬಗ್ಗೆ ಜನತೆ ಒಲವು ವ್ಯಕ್ತೊಡಿಸಿದ್ದಾರೆ. ಅದಕ್ಕಾಗಿ ಈ ಬಾರಿ ಅವರಿಗೆ ಟಿಕೆಟ್ ಕೊಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.

One attachment • Scanned by Gmail