(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,16- ನಗರದ ರೈಲ್ವೇ ನಿಲ್ದಾಣದಲ್ಲಿ ಬಹು ದಿನಗಳ ನಿರೀಕ್ಷಿತ ಲಿಫ್ಟ್ ಸೌಲಭ್ಯ ಆರಂಭಗೊಂಡಿದ್ದು. ಎಕ್ಸ್ಲವೇಟರ್ ಸೌಲಭ್ಯ ಸಿದ್ದಗೊಂಡಿದ್ದು ಆರಂಭವಾಗಬೇಕಿದೆ.
ರೈಲ್ವೆಗೆ ಹೆಚ್ಚು ಆದಾಯ ತರುವ ಮಾರ್ಗ, ಪ್ರದೇಶಗಳಲ್ಲಿ ಬಳ್ಳಾರಿಯೂ ಒಂದಾದರೂ ಇಲ್ಲಿ ಪ್ರಯಾಣಿಕರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಮಾತ್ರ ರೈಲ್ವೇ ಮಂಡಳಿಯಿಂದ ನಿರ್ಲಕ್ಷ ಎದ್ದು ಕಾಣುತ್ತೆ. ಇದಕ್ಕೆ ಕಾರಣ ಇಲ್ಲಿಂದ ಆಯ್ಕೆಯಾಗುವ ಸಂಸದರ ನಿರ್ಲಕ್ಷವೂ ಎಂದು ಹೇಳಬಹುದು.
ಕೊಪ್ಪಳ ಚಿಕ್ಕ ಮತ್ತು ಕಡಿಮೆ ಆದಾಯ ನೀಡುವ ರೈಲ್ವೆ ನಿಲ್ದಾಣವಾದರೂ, ಈ ಸೌಲಭ್ಯಗಳನ್ನು ಹೊಂದಿ ವರ್ಷಗಳೇ ಕಳೆದಿದೆ. ಕಾರಣ ಅಲ್ಲಿನ ಸಂಸದ ಕರಡಿ ಸಂಗಣ್ಣ ಅವರ ಕಾರ್ಯ ವೈಖರಿ ಎನ್ನಬಹುದು.
ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಒಂದು ಪ್ಲಾಟ್ ಫಾರಂ ನಿಂದ ಮತ್ತೊಂದಕ್ಕೆ ಲಗೇಜ್ ಸಮೇತ ಹೋಗುವುದು ಕಷ್ಟದ ಕೆಲಸ ಆಗಿತ್ತು. ಅಲ್ಲದೆ ವೃದ್ದರು ಸ್ಕೈ ವಾಕ್ ಮೇಲೆ ಹತ್ತುವುದಕ್ಕೆ ತ್ರಾಸ್ ಪಡುತ್ತಿದ್ದರು. ಅದಕ್ಕಾಗಿ ಈ ಸೌಲಭ್ಯಗಳ ಅವಶ್ಯಕತೆ ಇತ್ತು.
ಬಳ್ಳಾರಿಯಲ್ಲಿಯೂ ಈ ಸೌಲಭ್ಯ ಕಲ್ಪಿಸಲು ಸಂಸದರು ಕೇಳಿದರೂ ಆಗುವುದು ಮಾತ್ರ ವಿಳಂಬವಾಗಿದೆ. ಅದಕ್ಕಾಗಿ ಇಲ್ಲಿನ ರೈಲ್ವೇ ಕ್ರಿಯಾ ಸಮಿತಿ, ಚೇಂಬರ್ ಆಫ್ ಕಾಮರ್ಸ್, ರೈ ಲ್ವೆ ಸಲಹಾ ಮಂಡಳಿ ಸದಸ್ಯರ ಒತ್ತಾಯದಿಂದ ಕೊನೆಗೂ ಈ ಸೌಲಭ್ಯಗಳು ಈ ಭಾಗದ ಪ್ರಯಾಣಿಕರಿಗೆ ಈಗ ದೊರೆಯುವಂತಹ ಕಾಲ ಸನ್ನಿಹಿತವಾಗಿದೆ.