ಬಳ್ಳಾರಿ ರೂರಲ್ ಲಾರಿ ಓನರ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಹೊಸ ಸಂಘ ಮಾಡದಂತೆ ಜೀವ ಬೆದರಿಕೆ

ಬಳ್ಳಾರಿ, ಮಾ.27: ನಗರದಲ್ಲಿ ಹೊಸದಾಗಿ ಬಳ್ಳಾರಿ ರೂರಲ್ ಲಾರಿ ಓನರ್ ಅಸೋಸಿಯೇಷನ್ ಅದೇ ರೀತಿ ಬಳ್ಳಾರಿ ಟ್ರಾನ್ಸ್ ಪೋರ್ಟ್ ಕಾಂಟ್ರಾಕ್ಟಱ್ಸ್ ಅಂಡ್ ಕಮೀಷನ್ ಏಜೆಂಟ್ಸ್ ಅಸೋಸಿಯೇಷನ್ ಸಹ ಅಸ್ತಿತ್ವಕ್ಕೆ ಬಂದಿವೆ. ಹೊಸ ಅಸೋಸಿಯೇಷನ್ ರಚಿಸದಂತೆ ಜೀವ ಬೆದರಿಕೆ ಹಾಕಲಾಗಿದೆಂದು ಆರೋಪಿಸಲಾಗಿದೆ.
ನಗರದ ಪತ್ರಿಕಾಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಬಳ್ಳಾರಿ ರೂರಲ್ ಲಾರಿ ಓನಱ್ಸ್ ಅಸೋಸಿಯೇಷನ್ ಗೌರವ ಅಧ್ಯಕ್ಷ ಜಿ.ವಿಜಯ ಭಾಸ್ಕರ್ ರೆಡ್ಡಿ ಮಾತನಾಡಿ, ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘ, ನಗರದಲ್ಲಿ ಪ್ರತಿ ಲಾರಿಯಿಂದ ಸರತಿಗಾಗಿ 200 ಶುಲ್ಕ ವಸೂಲಿ ಮಾಡುತ್ತಿದೆ. ದಿನನಿತ್ಯ 700 ರಿಂದ ಒಂದು ಸಾವಿರ ಲಾರಿಗಳ ಲೋಟಿಂಗ್ ಆಗುತ್ತದೆ. ಈ ಹಣದ ದುರ್ಬಳಕೆ ನಡೆದಿದೆ. ಸಂಗ್ರಹಿಸುವ ಹಣದಲ್ಲಿ ಒಂದುನೂರು ಸಂಘಕ್ಕೆ ಮತ್ತೊಂದು ನೂರು ಸಂಘದ ಗೌರವ ಅಧ್ಯಕ್ಷ ಮುತ್ತುಗೆ ನೀಡುತ್ತಿದೆ. ಹಣವನ್ನು ಬ್ಯಾಂಕಿಗೆ ಪಾವತಿಸುತ್ತಿಲ್ಲ. ಸಂಘಕ್ಕೆ ಆಯ್ಕೆಯಾಗಿರುವ ಪದಾಧಿಕಾರಿಗಳ ಬಗ್ಗೆ ದಾಖಲೆ ಬದಲಿಸಿಲ್ಲ, ವಿನಾಕಾರಣ ಜಾತಿ ನಿಂದನೆ ಕೇಸು ಹಾಕುತ್ತಾರೆ.
ಅದಕ್ಕಾಗಿ ನಾವು ಪ್ರತ್ಯೇಕ ಅಸೋಸಿಯೇಷನ್ ಮಾಡಿಕೊಂಡಿದೆ. ಅಧ್ಯಕ್ಷರಾಗಿ ಹೊನ್ನೂರ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಗಿರಿಧರರೆಡ್ಡಿ ಅವರನ್ನು ಆಯ್ಕೆಮಾಡಿಕೊಂಡಿದೆ. ನಮ್ಮ ಅಸೋಸಿಯೇಷನ್ ನಿಂದ ಶುಲ್ಕ ವಸೂಲಿ ಇಲ್ಲದೆ ಲಾರೀ ಮಾಲೀಕರಿಗೆ ಟ್ರಾನ್ಸ್ ಪೋರ್ಟರ್ ಗಳಿಂದ ಲೋಡಿಂಗ್ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದರು.
@12bc = ಜೀವ ಬೆದರಿಕೆ
ಹೊಸ ಅಸೋಸಿಯೇಷನ್ ಮಾಡುತ್ತಿರುವುದರಿಂದ ಬಳ್ಳಾರಿ ಜಿಲ್ಲಾ ಲಾರೀ ಮಾಲೀಕರ ಸಂಘದ ಉಪಾಧ್ಯಕ್ಷ ಪೆದ್ದನ್ನ, ಲಾರೀ ಚಾಲಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಮತ್ತು ವಿಶ್ವನಾಥ ಎಂಬುವವರು, ನಮ್ಮ ಸಂಘದ ಮಂಜುನಾಥ ಮತ್ತು ಮೆಹಬೂಬ್ ಭಾಷ ಎಂಬುವವರಿಗೆ ಹೊಸ ಅಸೋಸಿಯೇಷನ್ ಮಾಡಬೇಡಿ ಮುತ್ತು, ಮಾಜಿ ಸಂಸದ ಪಕ್ಕೀರಪ್ಪ, ಸಚಿವ ಶ್ರೀರಾಮುಲು ಅವರ ಬೆಂಬಲ ನಮಗೆ ಇದೆ. ಹೊಸ ಅಸೋಸಿಯೇಷನ್ ಮಾಡಿದರೆ ಜೀವ ತೆಗೆಯುತ್ತೇವೆಂದು ಕರೆ ಮಾಡಿದ್ದಾರೆಂದು ಆರೋಪಿಸಿ ಬೆದರಿಕೆ ಕರೆಯ ಆಡಿಯೋವನ್ನು ಬಳ್ಳಾರಿ ಟ್ರಾನ್ಸ್ ಪೋರ್ಟ್ ಕಾಂಟ್ರಾಕ್ಟಱ್ಸ್ ಅಂಡ್ ಕಮೀಷನ್ ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಮುರುಳಿ ನೀಡಿದ್ದಾರೆ.
ಈಗಿರುವ ಅಸೋಸಿಯೇಷನ್ ಗಳ ಕಾರ್ಯವೈಖರಿ ನಮಗೆ ಸರಿಬಂದಿಲ್ಲ ಅದಕ್ಕಾಗಿ ನಾವು ಪ್ರತ್ಯೇಕವಾಗಿ ಮಾಡಿಕೊಂಡಿದ್ದೇವೆ. ಇದಕ್ಕೆ ಅಡ್ಡಿಪಡಿಸುವುದು ಬೇಡ, ಅಡ್ಡಿಪಡಿಸಿದರೆ ಕಾನೂನಿನ ಮೊರೆ ಹೋಗಲಿದೆ. ಜೀವ ಬೆದರಿಕೆ ಬಗ್ಗೆ ಡಿಸಿ ಮತ್ತು ಎಸ್ಪಿ ಅವರಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದರು.
ಹೊರ ರಾಜ್ಯದಿಂದ ಬರುವ ಒಂದೆರಡು ಟನ್ ಓವರ್ ಲೋಡ್ ಗಳ ಲಾರಿಗಳಿಂದ 2 ಸಾವಿರ ವಸೂಲಿ ಮಾಡುವುದನ್ನು ನಿಲ್ಲಿಸಬೇಕು, ಇದಕ್ಕೆ ಬಿಲ್ ನೀಡದೆ ಸಂಘ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಸಹ ಆರೋಪಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಬಳ್ಳಾರಿ ಟ್ರಾನ್ಸ್ ಪೋರ್ಟ್ ಕಾಂಟ್ರಾಕ್ಟಱ್ಸ್ ಅಂಡ್ ಕಮೀಷನ್ ಏಜೆಂಟ್ ಅಸೋಸಿಯೇಷನ್ ಉಪಾಧ್ಯಕ್ಷ ವಿ.ರಾಮುಡು, ಕಾರ್ಯದರ್ಶಿ ವಿ.ಮಂಜುನಾಥ, ಖಜಾಂಚಿ ಎಂ.ಸುನೀಲ್, ಈರಣ್ಣ, ಕೆ.ಮಲ್ಲಿಕಾರ್ಜುನ, ಇದಾಯತ್, ಮುಲಾರಾಂ, ಮನ್ಸೂರ್ ಮೊದಲಾದವರು ಇದ್ದರು.