ಬಳ್ಳಾರಿ ರಾಘವರ 142ನೇ ಜಯಂತಿ ಪ್ರಶಸ್ತಿ ಪ್ರಧಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.03: ನಾಟ್ಯ ಕಲಾ ಪ್ರಪೂರ್ಣ ರಾಘವರ 142ನೇ ಜಯಂತಿ ಅಂಗವಾಗಿ ನಿನ್ನೆ ನಗರದ ರಾಘವ ಕಲಾಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಪ್ರತಿ ವರ್ಷ ಕೊಡ ಮಾಡುವ ಬಳ್ಳಾರಿ ರಾಘವ ರಾಜ್ಯ ಮತ್ತು ಜಿಲ್ಲಾ ಮಟ್ಟದ  ಪ್ರಶಸ್ತಿ ಪ್ರಧಾನ ಸಮಾರಂಭ ನಿನ್ನೆ ಸಂಜೆ ನಡೆಯಿತು.
ಸಮಾರಂಭಕ್ಕೂ ಮುನ್ನ  ರಾಘವಕಲಾ ಮಂದಿರದಿಂದ ವೀರಗಾಸೆ ಮತ್ತು ಸಮಾಳದೊಂದಿಗೆ  ಗಡಗಿ ಚನ್ನಪ್ಪ ವೃತ್ತದಲ್ಲಿರುವ ಬಳ್ಳಾರಿ ರಾಘವ ಪುತ್ಥಳಿಗೆ  ಮಾಲಾರ್ಪಣೆ ಮಾಡಲಾಯಿತು.
ನಂತರ ನಡೆದ ವೇದಿಕೆ ಸಮಾರಂಭದಲ್ಲಿ ರಾಘವರ ಭಾವಚಿತ್ರಕ್ಕೆ ಪುಷ್ಪ ನಮನ‌ ಸಲ್ಲಿಸಿ,
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತ ಡಾ.ಆಕಾಶ್ ಶಂಕರ್ ಅವರು  ರಾಘವರ ಹೆಸರಲ್ಲಿ ಈ  ಕಲಾ ಮಂದಿರ ಇರುವುದು ನಮ್ಮೆಲ್ಲರ ಪುಣ್ಯ, ಕೇವಲ ವಿದ್ಯಾಭ್ಯಾಸವೊಂದೆ ಅಲ್ಲ ಓದಿನ ಜೊತೆಗೆ ನಾಟಕ, ಸಂಗೀತ, ಚಿತ್ರಕಲೆ ಮುಂತಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಲೆಯಲ್ಲಿ ನನಗೆ ಬಹಳ ಆಸಕ್ತಿ ನಾನು ಬಹುಶಃ ಅಧಿಕಾರಿ ಆಗದಿದ್ದರೆ  ಕಲಾವಿದನಾಗುತ್ತಿದ್ದೆ  ನನಗೆ ನಾಟಕ ಸಂಗೀತ ಮತ್ತು ಚಿತ್ರಕಲೆಯಲ್ಲಿ ಬಹಳಷ್ಟು ಆಸಕ್ತಿ ಇದೆ ಕಾಲೇಜು ಹಂತದಲ್ಲಿ ನಾಟಕ ಸ್ಪರ್ಧೆಯನ್ನು ನಡೆಸುವ ಒಂದು ಯೋಚನೆಯಲ್ಲಿ ನಾವಿದ್ದೇವೆ ಇದಕ್ಕೆ ನಿಮ್ಮ ಸಹಕಾರ ಬೇಕು ಎಂದರು.
ನಾವು ಪ್ರತಿ ವರ್ಷವು  ರಾಜ್ಯದಲ್ಲಿ ಹೆಸರು ಮಾಡಿರುವಂತಹ ಕಲಾವಿದರಿಗೆ ರಾಜ್ಯ ಮತ್ತು ಜಿಲ್ಲಾಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತೇವೆ  ರಂಗಭೂಮಿ ದಿಗ್ಗಜರಲ್ಲಿ ಬಳ್ಳಾರಿ ರಾಘವರ ಹೆಸರು ಮೊದಲು ಕೇಳಿ ಬರುತ್ತದೆ  ಇಂಥವರ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಎಲ್ಲಾ ಕಲಾವಿದರಿಗೆ ಒಳ್ಳೆಯದಾಗುತ್ತದೆ ಎಂದು ರಾಘವ ಮೆಮೋರಿಯಲ್ ಅಸೋಸಿಯೇಷನ್  ಗೌರವಾಧ್ಯಕ್ಷ ಕೆ.ಚನ್ನಪ್ಪನವರು ಹೇಳಿದರು.
ರಾಘವರು ತಮ್ಮ ಚಿಕ್ಕ ವಯಸ್ಸಿನಿಂದಲೇ ರಂಗಭೂಮಿಯನ್ನು ಕಟ್ಟಬೇಕು ಎನ್ನುವ ಛಲವನ್ನು ಹೊಂದಿದ್ದರು ಅವರು ಭಾರತದಲ್ಲಿ ಜನಿಸುವ ಬದಲು ಇಂಗ್ಲೆಂಡಿನಲ್ಲಿ ಎನಾದರು ಜನಿಸಿದ್ದರೆ ಬಹುಶಃ ಶೇಕ್ಸ್ಪಿಯರನ್ನು ಮೀರಿಸುವ ಕೆಲಸ ಮಾಡುತ್ತಿದ್ದರು ಎಂದು ಇಂಗ್ಲೆಂಡಿನ ಪತ್ರಿಕಾ ಮಾಧ್ಯಮದವರು ಹೇಳಿದ್ದರು
ಶ್ರಾವಣ ಮಾಸದ ಸಂಭ್ರಮದಂತೆ ಈ ಕಾರ್ಯಕ್ರಮವು ನಡೆಯುತ್ತಿದೆ ಎಂದು ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ  ಸಿದ್ದಲಿಂಗೇಶ ಕೆ.ರಂಗಣ್ಣನವರು ಹೇಳಿದರು.
ವೇದಿಕೆ ಮೇಲೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೆ.ಕೋಟೇಶ್ವರರಾವ್,  ಕಾರ್ಯದರ್ಶಿ,  ರಮೇಶ್ ಗೌಡ ಪಾಟೀಲ್,  ಉಪಾಧ್ಯಕ್ಷರಾದ ಕೆ.ರಾಮಾಂಜನೇಯಲು ಮತ್ತು ಎನ್.ಬಸವರಾಜ್  ಜಂಟಿ ಕಾರ್ಯದರ್ಶಿ ಕೆ.ಪಂಪನಗೌಡ,  ಉಪಸ್ಥಿತರಿದ್ದರು.
ಬಳ್ಳಾರಿ ರಾಘವರ ರಾಜ್ಯ ಪ್ರಶಸ್ತಿಯನ್ನು ಶ್ರೀ ಕೊಟ್ರೇಶ್ ಶಿವಪ್ಪ ಅಂಗಡಿಯವರಿಗೆ,  ಜಿಲ್ಲಾ ಪ್ರಶಸ್ತಿಯನ್ನು ಪಿ.ಪದ್ಮ ಕೂಡ್ಲಿಗಿ ಮುದೇನೂರು ಉಮಾ ಮಹೇಶ್ವರ ಹೊಸಪೇಟೆ ಇವರಿಗೆ ನೀಡಿ ಗೌರವಿಸಲಾಯಿತು
ಆ ಬಳಿಕ ಕಿ, ರಂ, ನಾಗರಾಜ ರಚನೆಯ,  ಸಿ.ಕೆ. ನಾಗರಾಜ ನಿರ್ದೇಶಿಸಿರುವ “ಕಾಲಜ್ಞಾನಿ ಕನಕ” ಎನ್ನುವ ಕನ್ನಡ ನಾಟಕವನ್ನು ಲಲಿತ ಕಲಾ ರಂಗ ಮರಿಯಮ್ಮನಹಳ್ಳಿ ಇವರು ಪ್ರದರ್ಶಿಸಿದರು.