ಬಳ್ಳಾರಿ ಮೇಯರ್ ಸ್ಥಾನಕ್ಕೆ ಎಡಗೈ ಸಮುದಾಯವನ್ನು ಪರಿಗಣಿಸುವುದೇ  ಕಾಂಗ್ರೆಸ್


* ಮೇಯರ್ ಸ್ಥಾನ ಎಸ್ಸಿ  ಸಾಮಾನ್ಯಕ್ಕೆ ಮೀಸಲು
* ಉಪ ಮೇಯರ್ ಎಸ್ಟಿ ಮಹಿಳೆಗೆ
*  ಹೆಚ್ಚಿನ ಸಂಖ್ಯೆಯಲ್ಲಿರುವ ಎಡಗೈ  ಸಮುದಾಯ
* ಈವರಗೆ ಕಾಂಗ್ರೆಸ್ ನಿಂದ  ಎಡಗೈ  ಸಮಯದಾಯಕ್ಕೆ ದೊರೆಯದಿರುವ ಮೇಯರ್ ಪಟ್ಟ
* ನಮಗೆ ಕೊಡಿ ಎನ್ನುವ ಉಮಾದೇವಿ ಶಿವರಾಜ್
* 7ನೇ ವಾರ್ಡಿಗೆ ಒಲಿಯುತ್ತಾ ಮೇಯರ್ ಸ್ಥಾನ
ಸಂಜೆವಾಣಿ ಪ್ರತಿನಿಧಿಯಿಂದ
ಬಳ್ಳಾರಿ, ಮಾ.26; ನಗರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ 40 ರಿಂದ 50 ಸಾವಿರ ಮತದಾರರನ್ನು ಹೊಂದಿರುವ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಇಲ್ಲಿನ ಮಹಾನಗರ ಪಾಲಿಕೆ ಈ ಬಾರಿಯ ಮೇಯರ್ ಚುನಾವಣೆಯಲ್ಲಿ ಆಧ್ಯತೆ ನೀಡದಿದ್ದರೆ. ಕಾಂಗ್ರೆಸ್ ಪಕ್ಷ ಸಮುದಾಯದ ಬೆಂಬಲ ಕಳೆದುಕೊಳ್ಳಬೇಕಾಗುತ್ತದೆ ಎಂಬ ಸಂದಿಗ್ಧತೆ ಎದುರಿಸಬೇಕಾಗಿದೆ.
ಈ ತಿಂಗಳು 29 ರಂದು ನಡೆಯುವ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಸಾಮಾನ್ಯ ಮತ್ತು ಉಪಮೇಯರ್ ಎಸ್ಟಿ ಮಹಿಳೆಗೆ ಮೀಸಲಾಗಿದೆ. ಪಾಲಿಕೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದೆ. ಸಧ್ಯದಲ್ಲೇ ವಿಧಾನ ಸಭಾ ಚುನಾವಣೆ ಇರುವುದರಿಂದ ಮೇಯರ್ ಆಯ್ಕೆ ಅಳೆದು ತೂಗಿ ಮಾಡಬೇಕಾಗಿದ್ದು. ಇದು ಕಾಂಗ್ರೆಸ್ ಪಕ್ಷಕ್ಕೆ ಕಗ್ಗಂಟಾಗಿದೆ.
ನಗರ ಕ್ಷೇತ್ರದ ವ್ಯಾಪ್ತಿಗೆ ಬರುವ 7 ನೇ ವಾರ್ಡು ಬಾಪೂಜಿ ನಗರ ಬಹುತೇಕ ಎಡಗೈ ಸಮುದಾಯವನ್ನು ಒಳಗೊಂಡಿದೆ. ಇಲ್ಲಿವರೆಗೆ ಕಾಂಗ್ರೆಸ್ ಅಭ್ಯರ್ಥಿ, ಇಲ್ಲಾ  ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನೆ ಗೆಲ್ಲಿಸುತ್ತಾ ಬಂದಿದೆ. ಈಗ ಉಮದೇವಿ ಶಿವರಾಜ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಈವರಗೆ ನಡೆದ ವಿಧಾನಸಭೆ,ಲೋಕಸಭಾ ಚುನಾವಣೆಗಳಲ್ಲಿ ಈ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೆಚ್ಚಿನ ಮತಗಳನ್ನು ದೊರಕಿಸಿಕೊಡುವ ಪ್ರಯತ್ನ ನಡೆದಿದೆ.

ಎಡಗೈ ಪರ ಬಿಜೆಪಿ:
ಪಾಲಿಕೆ ಅಸ್ತಿತ್ವಕ್ಕೆ ಬಂದ ಮೇಲೆ ಮೊದಲ ಮೇಯರನ್ನಾಗಿ ಎಡಗೈ ಸಮುದಾಯಕ್ಕೆ ಸೇರಿದ ಶೋಭಾನಾರಾಯಣನ್ ಅವರನ್ನು ಮೇಯರ್ ಮಾಡಿತ್ತು. ಈ ವರೆಗೆ ನೆನೆಗುದಿಗೆ ಬಿದ್ದಿದ್ದ ಜನಸಂಖ್ಯಾವಾರು ವರ್ಗೀಕರಣ ಮೀಸಲಾತಿಯನ್ನು ಜಾರಿಗೆ ತಂದು ಎಡಗೈ ಸಮುದಾಯದ ಮತಗಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ.
 ಬಲಗೈ ಪರ ಕಾಂಗ್ರೆಸ್:
ಈವರಗೆ  ಬಲಗೈ ಸಮುದಾಯದ ಇಬ್ಬರಿಗೆ ಅಂದರೆ ಅಲ್ಲಿಪುರದ ರಮೇಶ್ ಮತ್ತು ಕಾಕರ್ಲತೋಟದ ಸೂರಿ ಅವರ ಪತ್ನಿಗೆ ಮೇಯರ್ ಮಾಡಿದೆ. ಹೀಗಾಗಿ ಕಾಂಗ್ರೆಸ್ ಬಲಗೈ ಪರ ಎನ್ನಲಾಗುತ್ತಿದೆ.
ಎಡಗೈ ಸಮುದಾಯಕ್ಕೆ ಈ ಅವಕಾಶ ದೊರೆತಿಲ್ಲ. ಹಾಗಾಗಿ ಎಡಗೈ ಸಮುದಾಯದ ಮುಖಂಡರು ಸಹ ತಮ್ಮ ಸಮುದಾಯಕ್ಕೆ ಈ ಬಾರಿ ಅವಕಾಶ ನೀಡಿ ಎಂದಿದ್ದಾರೆ.
 ಅನ್ಯಾಯ ಸರಿಪಡಿಸಿ:
ಅಂಖಂಡ ಜಿಲ್ಲೆಯ ಎರೆಡೂ ವಿಧಾನ ಸಭಾ ಮೀಸಲು  ಕ್ಷೇತ್ರಗಳಲ್ಲಿ ಸ್ಪೃಶ್ಯ ಸಮುದಾಯಕ್ಕೆ ಟಿಕೆಟ್ ನೀಡಿದೆ ಹೀಗಾಗಿ ಅಸ್ಪೃಶ್ಯ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಿ ಅಲ್ಲಿ ಆಗಿರುವ ಅನ್ಯಾಯವನ್ನು ಇಲ್ಲಿ ಸರಿಪಡಿಸಿಕೊಳ್ಳುತ್ತಾ ಕಾಂಗ್ರೆಸ್.
  ಮತ ಬ್ಯಾಂಕ್ ಉಳಿಸಿಕೊಳ್ಳುವುದೇ:
ಮತ ಬೆಂಬಲದಲ್ಲಿ ಎಂದಿಗೂ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಾ ಬಂದಿರುವ ಎಡಗೈ (ಮಾದಿಗ) ಸಮುದಾಯಕ್ಕೆ ಈ ಬಾರಿ ಕಾಂಗ್ರೆಸ್ ಮೇಯರ್ ಸ್ಥಾನ ನೀಡಿ ತನ್ನ ಮತಬ್ಯಾಂಕ್ ನ್ನು ಉಳಿಸಿಕೊಳ್ಳಯವುದೇ,   ಇಲ್ಲದಿದ್ದರೆ ಮಾದಿಗ ಸಮುದಾಯ ಯಾವ ತೀರ್ಮಾನಕ್ಕೆ ಬರಲಿದೆ
ಎಂಬುದನ್ನು ಕಾದು ನೋಡಬೇಕಿದೆ.

 ಕಾಂಗ್ರೆಸ್ ಪಕ್ಷದ ಅರ್ಹರು:
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಐವರು ಸದಸ್ಯರು ಅರ್ಹರಿದ್ದಾರೆ. ಸ್ಪೃಶ್ಯ(ಭೋವಿ) ಸಮುದಾಯಕ್ಕೆ  ಸೇರಿದ ವಿ.ಕುಬೇರ,  ಎಡಗೈ ಸಮುದಾಯಕ್ಕೆ ಸೇರಿದ ಉಮಾದೇವಿ ಶಿವರಾಜ್,
ಎಸ್ಟಿ ಸಮುದಾಯದ ಮುಖಂಡ ಸೋಮು ಅವರ ಪತ್ನಿ ಶ್ವೇತ (ಬಲಗೈ) ನಾಗಲಕೆರೆ ಗೋವಿಂದ ಅವರ ಮಗಳು ಶಿಲ್ಪ (ಬಲಗೈ), ಸೂರಿ ಅವರ ಮಗಳು ತ್ರೀವೇಣಿ(ಬಲಗೈ) ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಗೊಂಡು   ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಭೋವಿ ಸಮಾಜದ ಶ್ರೀನಿವಾಸುಲು ವಿ ಮಿಂಚು ಸಹ ಇದ್ದಾರೆ.
 ಚುನಾವಣೆ:
ಮಾರ್ಚ್ 29 ಕ್ಕೆ ಚುನಾವಣೆ ನಿಗಧಿಯಾಗಿದೆ. ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಸಾಮಾನ್ಯ ಮತ್ತು ಉಪ‌ಮೇಯರ್ ಸ್ಥಾನ ಪರಿಶಿಷ್ಟ ವರ್ಗದ ಮಹಿಳೆಗೆ ಮೀಸಲಿದೆ.
ಉಮಾದೇವಿ ಶಿವರಾಜ್ ಪೋಟೋ ಹಾಕಿ
 ನಮಗೆ ಅವಕಾಶ ಕೊಡಿ:
ನಾನು ಎರೆಡನೇ ಬಾರಿಗೆ ಕಾರ್ಪೊರೇಟರ್ ಆಗಿದ್ದೇನೆ. ವಾರ್ಡ್ ನ ಅಭಿವೃದ್ಧಿಗೆ ಶ್ರಮಿಸಿರುವೆ, ನಗರದ ಅಭಿವೃದ್ಧಿಗೂ ಶ್ರಮಿಸಲು  ನನಗೆ ಮೇಯರ್ ಸ್ಥಾನದ ಅವಕಾಶ ಕೊಡಿ.
ಉಮಾದೇವಿ ಶಿವರಾಜ್
7 ನೇ ವಾರ್ಡ್ ಪಾಲಿಕೆ ಸದಸ್ಯೆ.
ಎಡೈಗೈ ಸಮುದಾಯಕ್ಕೆ ನೀಡಿ:
ಸದಾ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ಇರುವ,  ಎಡಗೈ ಸಮುದಾಯಕ್ಕೆ ಈವರಗೆ ಪಾಲಿಕೆಯಲ್ಲಿಮೇಯರ್ ಸ್ಥಾನ ನೀಡಿಲ್ಲ. ಈ ಸಮುದಾಯಕ್ಕೆ ಈ ಬಾರಿ ಆಧ್ಯತೆ ನೀಡಬೇಕೆಂದು  ನನ್ನ ಮನವಿ
ಶಿವರಾಜ್ ಹೆಗಡೆ
ಕಾಂಗ್ರೆಸ್ ಮುಖಂಡರು, ಬಳ್ಳಾರಿ.