ಬಳ್ಳಾರಿ: ಮಾವ ಸೊಸೆಗೆ ಸೋಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.13: ಇಬ್ಬರ ನ್ಯಾಯ ಮೂರನೇಯವರಿಗೆ ಅದು ಎಂಬಂತೆ ಬಳ್ಳಾರಿ ನಗರ ಕ್ಷೇತ್ರದಲ್ಲಿ ಮಾವ ಮತ್ತು ಸೊಸೆಯಿಂದ ಕಾಂಗ್ರೆಸ್ ಗೆ ವಿಜಯ ಸುಲಭವಾಯ್ತು, ಸೊಸೆ, ಮಾವ ಇಬ್ಬರೂ ಸೋತರು.
ಹಾಲಿ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ನಗರದಲ್ಲಿ ಸಾಕಷ್ಟು ಅಭಿವೃದ್ಘಿಗೆ ಶ್ರಮಿಸಿದರೂ ಮತದಾರ ಕಾಂಗ್ರೆಸ್ ಗ್ಯಾರೆಂಟಿಗಳಿಗೆ ಮಾರುಹೋಗಿ ಅಭಿವೃದ್ಧಿಯನ್ನು ಮರೆತಂತೆ.
ಮತನೀಡಿ ಸೋಮಶೇಖರರೆಡ್ಡಿ ಅವರ ಸೋಲಿಗೆ ಕಾರಣರಾಗಿದ್ದಾರೆನ್ನಬಹುದು.
ಜೊತೆಗೆ ಸಹೋದರ ಸೋಮಶೇಖರರೆಡ್ಡಿ ಅವರು ತಾವು ಕಟ್ಟಿದ ಪಕ್ಷ ಬರಲು ಒಪ್ಪಲಿಲ್ಲವೆಂದು ಸಡ್ಡು ಹೊಡೆದು ಜನಾರ್ಧನರೆಡ್ಡಿ ಅವರು ತಮ್ಮ ಪತ್ನಿ ಲಕ್ಷ್ಮಿ ಅರುಣ ಅವರನ್ನು ಕಣಕ್ಕಿಳಿಸಿ ಬೇಕಾದಷ್ಟು ವೆಚ್ಚ ಮಾಡಿ ಶತ್ರುಗಳ ಜೊತೆಗೆ ಹೊಂದಾಣಿಕೆ ಮಾಡಿ ಆಯ್ಕೆ ಮಾಡಿ ಎಂದು ಫುಟ್ ಬಾಲ್ ಮೂಲಕ ಮಾಡಲು ಯತ್ನಿಸಿದ ಗೋಲ್ ವಿಫಲವಾಗುವುದರ ಜೊತೆ ಸೊಸೆಯ ಸ್ಪರ್ಧೆ ಮಾವ ಸೋಮಶೇಖರರೆಡ್ಡಿ ಗೆಲುವಿಗೆ ಅಡ್ಡಿಯಾಯ್ತು ಎನ್ನಬುಹುದು.